ಇಂಗಳಗಿ ಗ್ರಾಮಸ್ಥರಿಂದ ರಸ್ತೆತಡೆ
ಕ.ಪ್ರ. ವಾರ್ತೆ ್ಣ ಶಹಾಬಾದ್ ್ಣ ಜೂ.3
ರಾಜ್ಯ ಸರ್ಕಾರದ ಅಕ್ರಮ- ಸಕ್ರಮ ಯೋಜನೆಯ ಫಲಾನುಭವಿಗಳಿಗೆ ಸಮರ್ಪಕ ಮಾಹಿತಿ ನೀಡದೆ ಇರುವುದರಿಂದ ಮಂಗಳವಾರ ನಗರದ ಉಪತಹಸೀಲ್ದಾರ್ ಕಚೇರಿಗೆ ಆಗಮಿಸಿದ ಇಂಗಳಗಿ ಗ್ರಾಮಸ್ಥರು ದಿಢೀರ್ ರಸ್ತೆತಡೆ ನಡೆಸಿದರು.
ಗ್ರಾಮದಲ್ಲಿ ಅಕ್ರಮ- ಸಕ್ರಮ ಯೋಜನೆಯನ್ವಯ ಫಲಾನುಭವಿಗಳು ಅರ್ಜಿ, ಪಡಿತರ ಚೀಟಿ ತರಬೇಕೆಂದು ಭಾನುವಾರ ಗ್ರಾಮ ಲೆಕ್ಕಿಗರು ಡಂಗೂರ ಸಾರಿ, ಮಂಗಳವಾರ ಕೊನೆಯ ದಿನವೆಂದು ತಿಳಿಸಲಾಗಿತ್ತು.
ಗ್ರಾಮ ಲೆಕ್ಕಿಗರ ಮಾಹಿತಿಯಂತೆ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಫಲಾನುಭವಿಗಳು ಅರ್ಜಿ, ಪಡಿತರ ಚೀಟಿ ನಕಲು ಪ್ರತಿಯೊಂದಿಗೆ ಶಹಾಬಾದ್ ಉಪ ತಹಸೀಲ್ದಾರ್ ಕಚೇರಿಗೆ ಬಂದಾಗ, ಸ್ಥಳೀಯ ಕಂದಾಯ ಅಧಿಕಾರಿಗಳು ಫಲಾನುಭವಿಗಳು ತಮ್ಮ ಮನೆಯ ಮುಂದೆ ನಿಂತ ಫೋಟೋ ಬೇಕೆಂದು ಹೇಳಿದಾಗ ಅವಕ್ಕಾದ ಜನರು ತಮಗೆ ಈ ಬಗ್ಗೆ ಮಾಹಿತಿ ನೀಡಿಲ್ಲವೆಂದು ಹೇಳಿದರು.
ಇಂದೇ ಕೊನೆಯ ದಿನ ಇರುವುದರಿಂದ ಹೆಚ್ಚುವರಿ ಸಮಯ ಕೊಡಬೇಕೆಂದು ಆಗ್ರಹಿಸಿ ಉಪತಹಸೀಲ್ದಾರ್ ಕಚೇರಿಯ ಮುಂದಿನ ರಸ್ತೆಯ ಮೇಲೆ ಧರಣಿ ನಡೆಸಿದ್ದಲ್ಲದೆ, ನಗರದಿಂದ ಹೊರ ಹೋಗುವ ರಸ್ತೆತಡೆ ಮಾಡಿದರು.
ಇಂಗಳಗಿ ಭೂಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸಾಬಣ್ಣ ಗುಡೂಬಾ, ಗೌರವ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ, ಉಪಾಧ್ಯಕ್ಷ ಮರಿಬಸಯ್ಯಸ್ವಾಮಿ, ಗ್ರಾಪಂ ಸದಸ್ಯ ಶಾಂತಪ್ಪ ಕಟ್ಟಿಮನಿ, ನರಸಪ್ಪ ಚೌಧರಿ, ಗಂಗಾರಾಮ ಭೀಮು ರಾಠೋಡ ನೂರಾರು ಜನ ಪಾಲ್ಗೊಂಡಿದ್ದರು.
ಧರಣಿ ಹಿಂದಕ್ಕೆ: ಸ್ಥಳಕ್ಕೆ ಬಂದ ಪಿಐ ವಿಜಯಕುಮಾರ ಹೊಸ್ಮನಿ ಹಾಗೂ ಸಿಬ್ಬಂದಿ ರಸ್ತೆ ತಡೆ ತೆರವುಗೊಳಿಸಿ, ಇಂದು ರಾತ್ರಿಯವರೆಗೆ ಫಲಾನುಭವಿಗಳ ಅರ್ಜಿ ಪಡೆಯುವುದಾಗಿ ಕಂದಾಯ ಅಧಿಕಾರಿ ಮಹೇಶ ಲಿಖಿತವಾಗಿ ಆಶ್ವಾಸನೆ ನೀಡಿದ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು.
ತಪ್ಪು ಮಾಹಿತಿ ಪರದಾಟ: ಇಂಗಳಗಿ ಗ್ರಾಮ ಲೆಕ್ಕಿಗ ಭೀಮರಾವ ಪಾಟೀಲ ಅವರು ಭಾನುವಾರ ಗ್ರಾಮದಲ್ಲಿ ತಪ್ಪು ಮಾಹಿತಿ ನೀಡಿದ್ದೇ ಈ ಗೊಂದಲಕ್ಕೆ ಕಾರಣವಾದರೆ, ಈ ಬಗ್ಗೆ ಗ್ರಾಮ ಲೆಕ್ಕಿಗರು ನಮಗೆ ತಹಸೀಲ್ದಾರ್ ಕಚೇರಿಯಿಂದ ಬಂದ ಮಾಹಿತಿಯನ್ನು ಜನರಿಗೆ ತಿಳಿಸಿದ್ದು, ಮನೆಗಳ ಸಹಿತ ಪೋಟೋ ಬೇಕೆಂಬ ಮಾಹಿತಿ ತಹಸೀಲ್ದಾರ್ ಕಚೇರಿಯಿಂದ ತಮಗೆ ಬಂದಿಲ್ಲವೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

