ಗುಲ್ಬರ್ಗಾ

ಹಸಿರಾಗಲಿ ಬಿಸಿಲೂರು... ಮಕ್ಕಳ ಹಾರೈಕೆ

Published On :

ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಜೂ.5
ನಗರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಇಲ್ಲಿನ ಶತಮಾನ ಕಂಡಿರುವ ಶರಣಬಸವೇಶ್ವರ ಪ್ರೌಢಶಾಲೆಯ ನೂರಾರು ಮಕ್ಕಳು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ್ದಲ್ಲದೆ, ದಾರಿಯುದ್ದಕ್ಕೂ ಪರಿಸರ ಸಂರಕ್ಷಣೆಯ ಸಂದೇಶಗಳನ್ನು ಸಾರಿ ಹೇಳಿದರು.
ಸಸಿ ನೆಟ್ಟು ಪೋಷಿಸುವುದರಿಂದ ಪರಿಸರ ಉಳಿಯುತ್ತದೆ. ಮರ- ಗಿಡಗಳನ್ನು ಪ್ರೀತಿಸಬೇಕೆಂಬ ಸಂದೇಶಗಳನ್ನು ನೀಡಿದಾಗ ಸಾರ್ವಜನಿಕರು ಬೆರಗಾಗಿ ರ್ಯಾಲಿಯನ್ನು ವೀಕ್ಷಿಸಿದರು. ನಂತರ ಜಿಲ್ಲಾಧಿಕಾರಿ ಡಾ. ಪ್ರಸಾದ್ ಅವರಿಗೆ ಭೇಟಿ ಮಾಡಿದ ಮಕ್ಕಳು ಹಾಗೂ ಶಿಕ್ಷಕರು ಗುಲ್ಬರ್ಗ ನಗರ ಹಾಗೂ ಜಿಲ್ಲೆಯಲ್ಲಿ ಮರಗಳನ್ನು ಪೋಷಿಸುವ ಅನಿವಾರ್ಯತೆ ಸಾರಿ ಹೇಳಿದರಲ್ಲದೆ ಜಿಲ್ಲಾಡಳಿತ ಈ ವಿಚಾರದಲ್ಲಿ ಹೆಚ್ಚಿನ ಶ್ರಮ ವಹಿಸುವಂತೆ ಕೋರಿದರು.
ಉಪನ್ಯಾಸ: ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿಯೂ ಪರಿಸರ ಮಹತ್ವ ಸಾರುವ ಉಪನ್ಯಾಸಗಳೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಯ್ತು. ಎಡಿಸಿ ಗೋವಿಂದರೆಡ್ಡಿ, ಬಿಕೆ ಚಳಗೇರಿ, ದಿವಾಕರ್, ಡಾ. ರಮೇಶ ಲಂಡನಕರ್, ವಿಜ್ಞಾನ ಅಧಿಕಾರಿ ಲಕ್ಷ್ಮೀನಾರಾಯಣ ಮಕ್ಕಳಿಗೆ ಪರಿಸರ ಮಹತ್ವ ಸಾರಿ ಹೇಳುವ ಮಾಹಿತಿ ಮಾತುಗಳನ್ನಾಡಿದರು.
ಕರ್ನಾಟಕ ಜರ್ಮನ್ ಕೌಶಲ್ಯಾಭಿವೃದ್ಧಿ ಸಂಸ್ಥೆ ತನ್ನ ನಿರ್ಮಾಣ ಹಂತದಲ್ಲಿರುವ ನೂತನ ಕ್ಯಾಂಪಸ್‌ನಲ್ಲಿ ಪರಿಸರ ದಿನದ ನಿಮಿತ್ತ ಸಸಿ ನೆಡುವ ಸಮಾರಂಭ ಹಮ್ಮಿಕೊಂಡಿತ್ತು. ನಿರ್ದೇಶಕ ಕೋಟಯ್ಯ ಅವರ ಉಸ್ತುವಾರಿ ಸಮಾರಂಭ ಸೊಗಸಾಗಿ ನಡೆಯಿತು. ಅರಣ್ಯಾಧಿಕಾರಿ ರಾಧಾದೇವಿ ಮೊದಲ್ಗೊಂಡು ಅನೇಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಹಲವೆಡೆ ಸಸಿ ನೆಟ್ಟರು..: ಗುಲ್ಬರ್ಗ ಜಿಲ್ಲಾ ನ್ಯಾಯಾಲಯಗಳ ಸಮುಚ್ಚಯದ ಆವರಣದಲ್ಲಿಯೂ ವಿಶ್ವ ಪರಿಸರ ದಿನದ ಅಂಗವಾಗಿ ನ್ಯಾಯಾಧೀಶರು ಸಸಿಗಳನ್ನು ನೆಟ್ಟು ನೀರೆರೆದರು. ವಕೀಲರ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಲ್ಲದೆ ಎಲ್ಲ ಕೋರ್ಟ್‌ಗಳ ನ್ಯಾಯಮೂರ್ತಿಗಳು ಆವರಣದಲ್ಲಿ ಗಿಡಗಳನ್ನು ನೆಟ್ಟಿದ್ದು ವಿಶೇಷವಾಗಿತ್ತು.
ನಗರದಲ್ಲಿ ಅಭಾವಿಪ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದಂಡೆ ಸೇರಿ ಪರಿಸರ ದಿನದಂಗವಾಗಿ ಸಸಿನೆಟ್ಟರು. ಸರ್ಕಾರಿ ಪಪೂ ಕಾಲೇಜಿನ ಅಂಗಳದಲ್ಲಿ ಎಬಿವಿಪಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿತ್ತು.
ಎಬಿವಿಪಿ ರಾಜ್ಯ ಉಪಾಧ್ಯಕ್ಷ ಅಲ್ಲಂಪ್ರಭು ಪಾಟೀಲ್, ಕಾರ್ಯದರ್ಶಿ ಸುನೀಲ ಪ್ರಸಾದ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಜಯಶ್ರೀ ಗೋಗಿ, ಮಲ್ಲಯ್ಯ ಸ್ವಾಮಿ, ಅರುಣ, ಪ್ರವೀಣ, ವಿದ್ಯಾನದ, ಜಮಾದಾರ ಸರ್, ಶಿವಶರಣಪ್ಪ, ಭಾವಿಕಟ್ಟಿ, ಮಂದಾಕಿನಿ, ಶಿವಲೀಲಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.