ಗುಲ್ಬರ್ಗಾ

ಅರಣ್ಯ ಪ್ರದೇಶಕ್ಕೆ ಉನ್ನತಾಧಿಕಾರಿ ದಿಢೀರ್ ಭೇಟಿ, ಸೂಚನೆ

Published On :

ಆಳಂದ: ತಾಲೂಕಿಗೆ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ.ಸೋಗುರ ಅವರು ಹಠಾರ್ ಭೇಟಿ ನೀಡುವ ಮೂಲಕ ಸ್ಥಳೀಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ತಾಲೂಕಿನ ಕಡಗಂಚಿ ಬಳಿಯ ಗೋಳಾ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ನಾಟಿ ಮಾಡಿದ ವಿವಿಧ ಜಾತಿಯ ಸಸಿಗಳ ಗುಣಮಟ್ಟದ ಪರಿಶೀಲನೆ ನಡೆಸಿದರು. ಗೋಳಾ ಮತ್ತು ಕಡಗಂಚಿ ಮಾರ್ಗಮಧ್ಯದ ನೆಡುತೋಪುಗಳನ್ನು ವೀಕ್ಷಿಸಿ ಎಲ್ಲೆಡೆ ಇಲಾಖೆಯಿಂದ ನೆಟ್ಟಿರುವ ಸಸಿಗಳನ್ನು ಉಳಿಯುವಂತೆ ಕಾಳಜಿ ವಹಿಸಬೇಕು ಎಂದರು. ಒಟ್ಟಾರೆ ಪ್ರದೇಶದ ಮಾಹಿತಿ ಕಲೆಹಾಕಿದರು.  
ಗುರಿ ಮೀರಿ ಕೆಲಸ ಮಾಡಿ: ಬರುವ ಹಂಗಾಮಿನಲ್ಲಿ, ಇಲಾಖೆಯಿಂದ ಹಾಕಿಕೊಂಡ ಕ್ರಿಯಾ ಯೋಜನೆಯಂತೆ ಗಿಡಮರಗಳ ನೆಡುವಿಕೆಯಲ್ಲಿ ಗುರಿ ಮೀರಿ ಕೆಲಸ ಮಾಡಿ. ನಾಗರಿಕರಿಗೆ ಮತ್ತು ರೈತಾಪಿ ಜನರಿಗೆ ಈ ಕುರಿತು ಮಾಹಿತಿ ನೀಡುವ ಮೂಲಕ ಗಿಡ, ಮರ ಬೆಳೆಸಲು ಉತ್ತೇಜನ ನೀಡಬೇಕು. ಹೆದ್ದಾರಿ ಬದಿಯ ನೆಡುತೋಪು ಹಾಗೂ ಸಸ್ಯಕ್ಷೇತ್ರದಲ್ಲಿ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಯಲ್ಲಿ ಗುಲ್ಬರ್ಗ ವಿಭಾಗೀಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ. ರಾಧಾದೇವಿ ಆಗಮಿಸಿದ್ದರು.
4.12 ಲಕ್ಷ ಸಸಿ ನೆಡುವ ಗುರಿ:  ಇದೇ ವೇಳೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಾಬುರಾವ್ ಪಾಟೀಲ್ ಮಾತನಾಡಿ, ಪ್ರಸಕ್ತ ಹಂಗಾಮಿಗೆ ತಾಲೂಕಿನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 4.12 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಕೋರಳ್ಳಿ ಮತ್ತು ಗೋಳಾ ನರ್ಸರಿಗಳಲ್ಲಿ ಸಸಿಗಳ ಉತ್ಪಾದನೆ ಕೈಗೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೃಷಿ ಮಗುವಿಗೊಂದು ಮರ ಶಾಲೆಗೊಂದು ವನ ಯೋಜನೆ ಅನುಷ್ಠಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಅಡಿ ಎತ್ತರದ ಗಿಡಕ್ಕೆ 1 ರುಪಾಯಿ ಹಾಗೂ 8 ರಿಂದ 12 ಅಡಿ ಎತ್ತರ ಗಿಡಕ್ಕೆ 3 ರೂಪಾಯಿ ದರದಲ್ಲಿ ಮಾರಾಟದ ಸಸಿಗಳನ್ನು ಬೆಳೆಸಿದ್ದು, ಹಂಗಾಮಿನಲ್ಲಿ ಮಾರಾಟ ಮಾಡಲಾಗುವುದು ಎಂದು ವಿವರಿಸಿದರು. ವಲಯ ಉಪ ಅರಣ್ಯಾಧಿಕಾರಿ ಹಣಮಂತ ಮೇಲ್ಕೇರಿ, ಶಿವಪ್ಪ ಭೂಸನೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.