ಗುಲ್ಬರ್ಗಾ

ಆಗ್ರೋ ಕೇಂದ್ರ ಕಳ್ಳತನ ಆರೋಪಿಗಳ ಬಂಧನ

Published On :

ಶಹಾಪುರ: ನಾಲ್ಕು ದಿನಗಳ ಹಿಂದೆ ಪಟ್ಟಣದ ಶಿವ ಆಗ್ರೋ ಕೆಂದ್ರದಲ್ಲಿ ಸುಮಾರು 640 ಹತ್ತಿಬೀಜದ ಪಾಕೇಟ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ.  ಪಿಐಜೆಎಸ್ ನ್ಯಾಮೇಗೌಡ ಪಿಎಸ್‌ಐ ದೊಡಪ್ಪ ಮತ್ತು ಪೊಲೀಸರ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಅವರಿಂದ 460 ಹತ್ತಿ ಬೀಜದ ಪಾಕೇಟ್‌ಗಳನ್ನು ವಶಪಡಿಸಿಕೊಂಡು, ಆರೋಪಿಗಳಾದ ಪರಶುರಾಮ ತಂದೆ ಚಂದ್ರಪ್ಪ ಹಣಮಂತ ತಂದೆ ಶಿವಪ್ಪ ಮರೆಪ್ಪ ತಂದೆ ಹಯ್ಯಾಳಪ್ಪರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಡಿತರ; ಸೂಚನೆ
ಗುಲ್ಬರ್ಗ: ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರು ತಮ್ಮ ಮೊಬೈಲ್ ಸಂಖ್ಯೆ, ಕುಟುಂಬದ ಸದಸ್ಯರ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ ಸಂಖ್ಯೆ ಮಾಹಿತಿಗಳನ್ನು ಮೊ-9212357123ಗೆ ಎಸ್‌ಎಂಎಸ್ ಮೂಲಕ ಮಾಹಿತಿ ಸಲ್ಲಿಸಿ ವಿವರ ತಿಳಿದುಕೊಳ್ಳವಂತೆ ಗುಲ್ಬರ್ಗ ಜಿಲ್ಲಾಧಿಕಾರಿಗಳು ಕೋರಿದ್ದಾರೆ. ಪಡಿತರದಾರರು ಖಈಂಕಇ ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ಪಡಿತರ ಚೀಟಿ ಸಂಖ್ಯೆ ನಮೂದಿಸಿ ಮೇಲಿನ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಿದರೆ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿಯಾಗುತ್ತದೆ. ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ ನಂತರ ಕುಟುಂಬದ ಮುಖ್ಯಸ್ಥರ ಹಾಗೂ ಕಾರ್ಡಿನಲ್ಲಿರುವ ಇತರೆ ಎಲ್ಲ ವಯಸ್ಸಿನ ಸದಸ್ಯರ ಎಪಿಕ್ ಸಂಖ್ಯೆ ಮತ್ತು ಸದಸ್ಯರ ಯುಐಡಿ ಸಂಖ್ಯೆಯನ್ನು ಇದೇ ರೀತಿ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಮೂರಕ್ಕಿಂತ ಹೆಚ್ಚಿನ ಕಾರ್ಡುದಾರರಿಗೆ ಬಳಸುವಂತಿಲ್ಲ. ಹೆಚ್ಚಿನ ಮಾಹಿತಿಗೆ ಹತ್ತಿರದ ಅರ್ಜಿ ಕೇಂದ್ರಗಳಾದ ಫೋಟೋ ಬಯೋ ಕೇಂದ್ರ, ಗ್ರಾಪಂ ಕಚೇರಿ, ತಾಲೂಕು ಕಚೇರಿ, ಗುಲ್ಬರ್ಗ ಒನ್, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಎಪಿಕ್ ಮತ್ತು ಯುಐಡಿ ಸಂಖ್ಯೆಯನ್ನು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.