ಗುಲ್ಬರ್ಗಾ

ಹೇ...ಜಿಂಗಲ್ ಕಮಾಲ್

Published On :

ಗುಲ್ಬರ್ಗ: ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಇನ್ನಾವುದಕ್ಕಯ್ಯ... ಎಂಬುದು ಅನುಭವಿಗಳ ನುಡಿ. ಇದನ್ನೇ ಆಧಾರವಾಗಿಟ್ಟುಕೊಂಡು ಗುಲ್ಬರ್ಗ ಬಾನುಲಿ ಕೇಂದ್ರ ಸಿದ್ಧಪಡಿಸಿರುವ ಒಂದೆರಡು ವಾಕ್ಯದ ದುಷ್ಟ ಸಂದೇಶ ಅದ್ಹೇಗೆ ಬಡಪಾಯಿಗಳನ್ನೆಲ್ಲ ಸೈಬರ್ ಲೋಕದ ಅಪರಾಧ ಸುಳಿಗೆ ಸೆಳೆದು ಪರೇಶಾನ್ ಮಾಡುತ್ತದೆ ಎನ್ನುವ 1 ನಿಮಿಷದ ಜಿಂಗಲ್ ಆಕಾಶವಾಣಿ ವಾರ್ಷಿಕ ಸ್ಪರ್ಧೆ- 2013 ರಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಸಂಪೂರ್ಣ ಸ್ವಚ್ಚತಾ ಆಂದೋಲನಕ್ಕೆ ಸ್ಪೂರ್ತಿ ತುಂಬುವಂತಹ ಲಾಜ್ ಮಹಲ್ ಎಂಬ ಜಿಂಗಲ್‌ಗೆ ಮೊದಲ ಸ್ಥಾನ ಪಡೆದುಕೊಂಡಿತು. 1 ನಿಮಿಷದ ಕಿರು ಸಂದೇಶ ಸೈಬರ್ ಅಪರಾಧ ಲೋಕಕ್ಕೆ ಸೆಳೆಯುವ ಮೋಬೈಲ್, ಇ ಮೇಲ್‌ಗಳ ಮೂಲಕ ಬರುವ ಆಮಿಷ ಒಡ್ಡುವಂತಹ ಸಂದೇಶಗಳಿಗೆ ಸ್ಪಂದಿಸಿದರೆ ಏನೆಲ್ಲಾ ಆನಾಹುತಗಳಾಗುತ್ತವೆ ಎಂಬುದನ್ನು ಸಾರಿ ಹೇಳಿದೆ, ಬೆವರು ಸುರಿಸಿ ಗಳಿಸುವ ಹಣ ದುಷ್ಟ ಸಂದೇಶಗಳು ದೋಚುವ ಪರಿ,ಬಡ ಕುಟುಂಬಗಳ ಬದುಕು ಅದ್ಹೇಗೆ ಮೂರಾಬಟ್ಟೆಯಾಗುತ್ತದೆಂದು 1 ನಿಮಿಷದಲ್ಲೇ ಹೇಳಲಾಗಿದೆ.
ಗುಲ್ಬರ್ಗ ಭಾಗದಲ್ಲಂತೂ ದುಷ್ಟ ಸಂದೇಶ ರೇಡಿಯೋ ಕೇಳುಗರ ಅಚ್ಚುಮೆಚ್ಚು. ಸೃಜನಶೀಲ ಕಾರ್ಯಕ್ರಮಗಳ ಪರಿಕಲ್ಪನೆ, ನಿಮಾರ್ಣಕ್ಕೆ ಹೆಸರಾಗಿರುವ ಡಾ. ಸೋಮಶೇಖರ ರುಳಿ ನಿರ್ಮಾಣದ ದುಷ್ಟ ಸಂದೇಶ ರವಾನೆಯಲ್ಲಿ ಶೋಭಾ. ವಕೀಲ ನೆರವು ನೀಡಿದ್ದಾರೆ.
ಮೊದಲು ಮಾನವನಾಗು: ಪ್ರಾಣಿದಯೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಸಾರುವ 25 ನಿಮಿಷಗಳ ಮೊದಲ ಮಾನವನಾಗು ರೂಪಕವೂ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಅನಿಲಕುಮಾರ್ ರಚನೆ, ನಿರ್ಮಾಣದ ಈ ರೂಪಕ ಸಿದ್ಧಗೊಳ್ಳುವಲ್ಲಿ ಶಾರದಾ ಜಂಬಲದಿನ್ನಿ ನೆರವು ನೀಡಿದ್ದಾರೆ. ವಿಜ್ಞಾನ ಮುಂದುವರಿದಂತೆಲ್ಲ ಮಾನವ ಸ್ವಾರ್ಥಿಯಾಗುತ್ತಿದ್ದಾನೆ, ಇದು ಪ್ರಾಣಿಗಳ ಬದುಕಿಗೇ ಮಾರಕವಾಗುತ್ತಿದೆ, ಮಾನವೀಯತೆಯನ್ನೇ ಮರೆಯುತ್ತಿರುವ ಮಾನವರು ದಾನವರಾಗುತ್ತಿದ್ದಾರೆ ಎಂದು ಬದಲಾಗುತ್ತಿರುವ ದಿನಮಾನದ ಅಗಾಧತೆ- ಅದರಿಂದಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನೆಲ್ಲ ಈ ರೂಪಕ ಮನಮುಟ್ಟುವಂತೆ ವಿವರಿಸಿದೆ.
ಗಡಿಯಾಚೆಗಿನ ಗೆಲವು: ಅನ್ಯ ರಾಜ್ಯಗಳಲ್ಲಿನ ಕೃಷಿಕರು ಮಾಡಿರುವ ಸಾಧನೆಯನ್ನು ರಾಜ್ಯದ ಕೃಷಿಕರಿಗೆ ಪರಿಚಯಿಸುವುದೇ ಗಡಿಯಾಚೆಗಿನ ಗೆಲವು ಸರಣಿ. ಸಾಧಕ ರೈತರನ್ನು ನಮ್ಮ ರೈತರಿಗೆ ಪರಿಚಯಿಸುವುದಲ್ಲದೆ ಅವರೊಂದಿಗೆ ಸಂವಹನ ನಡೆಸುವಂತಹ ಪರಿಸರ ನಿರ್ಮಾಣದ ಕಾಳಜಿ ಹೊಂದಿರುವ ಸರಣಿ ಇಲ್ಲಿನ ಅನೇಕ ರೈತರ ಬಾಳಲ್ಲಿ ಗೆಲವು ತಂದಿದೆ.
ಡಾ. ಶೋಮಶೇಖರ ರುಳಿ ನಿರ್ಮಾಣದ ಈ ಸರಣಿಗೆ ಶೋಭಾ ವಕೀಲ ನೆರವು ನೀಡಿದ್ದಾರೆ. ರಾಜ್ಯ ಬಾನುಲಿ ಸ್ಪರ್ಧೆಯಲ್ಲಿ ಈ ಗಡಿಯಾಚೆಗಿನ ಗೆಲವು ಸರಣಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
2009 ರಿಂದ ಸತತ ಪುರಸ್ಕಾರ ಪಡೆಯುತ್ತಿದ್ದೇವೆ. ಇಲ್ಲಿನ ಕಾರ್ಯಕ್ರಮಗಳ ಮೌಲ್ಯ, ಗುಣಮಟ್ಟ ಹೇಗಿರುತ್ತವೆ ಎನ್ನಲು, ಸಿಬ್ಬಂದಿಗಳ ಸೃಜನಶೀಲತೆಗೆ ಈ ಪುರಸ್ಕಾರಗಳೇ ಕನ್ನಡಿ. ಗುಲ್ಬರ್ಗ ಬಾನುಲಿಗೆ ಮತ್ತೆ 3 ಪುರಸ್ಕಾರಗಳು ಬಂದಿರುವುದು ಸಂತಸ ತಂದಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಚಿಂತನೆ ಇರುವ ಕಾರ್ಯಕ್ರಮಗಳನ್ನು ಆಸಕ್ತ ಕೇಳುಗರಿಗೆ ನೀಡುತ್ತೇವೆ.
 ಅಂಜನಾ ಯಾತ್ನೂರ್,ಕಾರ್ಯಕ್ರಮ ಮುಖ್ಯಸ್ಥರು,  ಆಕಾಶವಾಣಿ, ಗುಲ್ಬರ್ಗ


-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.