ಗುಲ್ಬರ್ಗಾ

ಯುರೇನಿಯಂ ಗಣಿಗೆ ಗೋಗಿ ಜನರಲ್ಲಿ ಭೀತಿ

Published On :

ಕ.ಪ್ರ. ವಾರ್ತೆ, ಶಹಾಪುರ, ಜೂ. 16
ತಾಲೂಕಿನ ಗೋಗಿ ಗ್ರಾಮದಲ್ಲಿ ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ (ಯುಸಿಐಎಲ್) ಕಂಪನಿ ಕೈಗೆತ್ತಿಕೊಂಡಿದ್ದ ಯುರೇನಿಯಂ ಗಣಿಗಾರಿಕೆಗೆ ಪ್ರಾರಂಭವಾಗುವ ಲಕ್ಷಣಗಳು ಕಂಡುಬರುತ್ತಿದ್ದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಕೇಂದ್ರದ ಪರಿಸರ ಇಲಾಖೆ ಗಣಿಗಾರಿಕೆಯಿಂದ ತಾತ್ಕಾಲಿಕವಾಗಿ ರದ್ದುಪಡಿಸಿತ್ತು. ಗ್ರಾಮಸ್ಥರು ನೆಮ್ಮದಿಯ ಉಸಿರುವ ಬಿಟ್ಟಿದ್ದರ. ಆದರೆ ಖಾಸಗಿ ಒಡೆತನದ ಸಂಸ್ಥೆಯೊಂದು ಭೂಮಿ ಕೊರೆಯುವ ಕೆಲಸ ಪ್ರಾರಂಭಿಸಿದ್ದು ಗ್ರಾಮಸ್ಥರ ನೆಮ್ಮದಿ ಹಾಳುಮಾಡಿದೆ.
ಭೂಮಿ ಕೊರೆಯುವ ಮೊದಲು ಗ್ರಾಮದ ಸುತ್ತಮುತ್ತಲಿನ ಜಮೀನಿನ ಮಾಲೀಕರಿಗೆ 40,000 ರೂ. ಹಣ ನೀಡಿದ್ದಾರೆ. ಕೊಳವೆಯಿಂದ ಬರುವ ಕಲುಷಿತ ನೀರಿನ ಸಂಗ್ರಹಕ್ಕಾಗಿ 20 ಅಡಿ ಉದ್ದಳತೆಯ ತಗ್ಗು ಅಗೆಯಲಾಗಿದೆ. ಬೊರ್‌ವೆಲ್ ಕೊರೆಯುವಾಗ ದೊರೆಯುವ ಕಲ್ಲಿನ ಹಾಗೂ ಇನ್ನಿತರ ವಸ್ತುಗಳನ್ನು ಒಳಗೊಂಡ ಗಟ್ಟಿ ವಸ್ತುವನ್ನು ಸಂಗ್ರಹಿಸಲಾಗುತ್ತಿದೆ. ಈ ವಸ್ತುಗಳನ್ನು ಹೈದ್ರಾಬಾದ ಮತ್ತು ಮುಂಬೈಯ ಯುರೇನಿಯಂ ಪರೀಕ್ಷೆಯ ಕೇಂದ್ರಕ್ಕೆ ರವಾನಿಸಲಾಗುತ್ತಿದೆ ಎನ್ನುತ್ತಾರೆ ಗೋಗಿ ಗ್ರಾಮದ ಮಾಜಿ ಸೈನಿಕ ಮಲ್ಲಣ್ಣ ಶಿರಡ್ಡಿ.
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಯಾವುದೇ ಮಾಹಿತಿ ಇಲ್ಲದಿರುವುದು ಶಂಕೆಗೆ ಗುರಿಮಾಡಿದೆ. ಬೊರ್‌ವೆಲ್‌ನಿಂದ ಹೊರಬರುವ ರಾಸಾಯನಿಕಯುಕ್ತ ನೀರು ಮತ್ತೆ ಜೀವಕ್ಕೆ ಅಪಾಯ ತರುವ ಭೀತಿ ತಲೆದೂರಿದೆ. ಈಗಾಗಲೇ ಗ್ರಾಮದ ಸುತ್ತಮುತ್ತ 100ಕ್ಕೂ ಹೆಚ್ಚು ಇದೇ ಮಾದರಿಯ ಬೊರ್‌ವೆಲ್ ಕೊರೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೇ ನೀಡಿದ ಜಿಲ್ಲಾಧಿಕಾರಿ ಎಸ್.ಎ. ಜಿಲಾನಿ, ಇದು ನಮ್ಮ ಗಮನಕ್ಕೆ ಬಂದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.