ನೀರು, ರಸ್ತೆ ಸೌಲಭ್ಯಕ್ಕೆ ತಾಂಡಾ ಮನವಿ
ಗುಲ್ಬರ್ಗ: ತಾಲೂಕಿನ ಪಾಳ ಗ್ರಾಮ ವ್ಯಾಪ್ತಿಯ ಮಲ್ಲಯ್ಯ ತಾಂಡಾ ಕುಡಿಯುವ ನೀರು, ರಸ್ತೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮಂಗಳವಾರ ಜೈ ಕನ್ನಡಿಗರ ರಕ್ಷಣಾ ವೇದಿಕೆ ಜಿಪಂ ಸಿಇಒ ಅವರಿಗೆ ಮನವಿ ಮಾಡಿತು.
ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತತ್ತರಿಸಿದ್ದಾರೆ. ಸುಮಾರು 4 ಕಿ.ಮೀ. ದೂರದಿಂದ ನೀರನ್ನು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರವೇ ಬೋರ್ವೆಲ್ ಕೊರೆಸಬೇಕು ಹಾಗೂ ರಸ್ತೆ ಇರದೇತಾಂಡಾಕ್ಕೆ ಬಸ್ ಸೌಲಭ್ಯ ಕಲ್ಪಿಸಿಲ್ಲ. ವಿದ್ಯುತ್ ಕಂಬಗಳು ಇದ್ದರೂ ಅವುಗಳಿಗೆ ಬಲ್ಬ್ಗಳು ಇರದೆ ಕತ್ತಲು ಆವರಿಸಿದೆ. ಇದರಿಂದ ಗ್ರಾಮದ ಕತ್ತಲಲ್ಲಿ ಜೀವನ ಕಳೆಯುವಂತಾಗಿದೆ.
ಒಂದು ವೇಳೆ ತಾಂಡಾದ ಸಮಸ್ಯೆಗಳನ್ನು ಪರಿಹರಿಸಲು ವಿಳಂಬ ಮಾಡಿದ್ದಲ್ಲಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದು ಎಂದು ಸಂಸ್ಥಾಪಕ ಅಧ್ಯಕ್ಷ ಸಚ್ಚಿನ್ ಎಸ್. ಪರತಾಬಾದ ಎಚ್ಚರಿಕೆ ನೀಡಿದ್ದಾರೆ. ಅಣವೀರ ಎಸ್. ಪಾಟೀಲ, ಕಾಶೀನಾಥ ಎಸ್.ಮಾಳಗಿ, ಸಣಜು ಗುತ್ತೇದಾರ, ಸಂದೇಶ ಪವಾರ, ಕಪಿಲ ಸಿಂಧೆ, ಶಂಕರ ಡಿ. ಹುಲಸೂರ, ಶ್ರೀನಿವಾಸ ಎಸ್. ಸೋನೆಗಾರ ಸೇರಿದಂತೆ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

