ಮಹಿಳಾ ಸಂಘ ಹೆಸರಲ್ಲಿ ಸಹಾಯಧನ ವಂಚನೆ
ಮುದಗಲ್: ಗ್ರಾಮೀಣ ಭಾಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಹಿಳಾ ಸಬಲೀಕರಣಕ್ಕೆ ಸರ್ಕಾರ ನೀಡಿದ್ದ ಲಕ್ಷಾಂತರ ಹಣವನ್ನು ಖದೀಮರು ಗುಳಂ ಮಾಡಿರುವ ಪ್ರಕರಣವೊಂದು ವರ್ಷದ ನಂತರ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಯರದೊಡ್ಡಿಯಲ್ಲಿ ಸ್ವಸಹಾಯ ಸಂಘದ ಹೆಸರಲ್ಲಿ ವಿವಿದ ನಿಗಮದಿಂದ ಲಕ್ಷಾಂತರ ರುಪಾಯಿ ಸಾಲ ಪಡೆದು ಮಹಿಳೆಯರಿಗೆ ವಂಚಿಸಲಾಗಿದೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಂಚನೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿರುವ ಶ್ರೀನಿವಾಸ ಯರದೊಡ್ಡಿ ತಲೆ ಮರೆಸಿಕೊಂಡಿದ್ದಾನೆ.
ಪ್ರಕರಣ ಹಿನ್ನೆಲೆ: ಯರದೊಡ್ಡಿ ತಾಂಡದಲ್ಲಿ ಶಾಂತಿ ಸ್ವಸಹಾಯ ಮಹಿಳಾ ಸಂಘದ ಸದಸ್ಯರ ಹೆಸರನ್ನು ಬಳಸಿಕೊಂಡು ಡಿ.ದೇವರಾಜ ಅರಸು ನಿಗಮದಿಂದ 2011-12ನೇ ಸಾಲಿನಲ್ಲಿ 3 ಲಕ್ಷ ಸಾಲ ಪಡೆಯಲಾಗಿದೆ. ಅಲ್ಲದೆ ಸಂಘದ ಖಾತೆ ಇರುವ ಸಿಂಡಿಕೇಟ್ ಬ್ಯಾಂಕ್ನಿಂದ ಹಣವನ್ನು ಡ್ರಾ ಮಾಡಲಾಗಿದೆ.
ಸಾಲದ ವಿಷಯವನ್ನು ಹೀಗಷ್ಟೇ ತಿಳಿದಿರುವ ಸಂಘದ ಸದಸ್ಯೆಯರು
ಒಂದು ಲಕ್ಷವನ್ನು ಸದಸ್ಯೆಯರಿಂದ ವಂಚಿಸಲಾಗಿದೆ. ಅಲ್ಲದೆ ಸುಳ್ಳು ದಾಖಲೆ ನೀಡಿ ಲಕ್ಷಾಂತರ ರುಪಾಯಿ ಸರ್ಕಾರದ ಹಣವನ್ನು ಅಂಗನವಾಡಿ ಕಾರ್ಯಕರ್ತೆ ಮಂಗಮ್ಮ ಮತ್ತು ಆಕೆಯ ಪತಿ ಶ್ರೀನಿವಾಸ ಕೊಳ್ಳೆ ಹೊಡೆದಿದ್ದಾರೆ. ಅಕ್ರಮ ಎಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಘ 1, ಸಾಲ 2: ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ಮಹಿಳೆಯರ ಶಾಂತಿ ಸ್ವಸಹಾಯ ಮಹಿಳಾ ಸಂಘ ಎಂದು ಒಂದು ಕಡೆ ಸಾಲ ಪಡೆದಿದ್ದರೆ. ಮತ್ತೊಂದೆಡೆ ಹಿಂದುಳಿದ ಕುರುಬರು ಎಂದು ಹೇಳಿ ಡಿ. ದೇವರಾಜ ಅರಸ ನಿಗಮದ ಅಡಿಯಲ್ಲಿ ಸಹಾಯ ಧನ ಪಡೆದಿರುವ ದಾಖಲೆಗಳು ಬಯಲಿಗೆ ಬಂದಿದೆ.
ಅನುಮಾನ: ಸಾವಿರಾರು ರುಪಾಯಿ ಖರ್ಚು ಮಾಡಿ ಅರ್ಜಿ ಸಲ್ಲಿಸಿದರೂ ಸಾಲ ನೀಡಲು ಮೀನಾಮೇಷ ಮಾಡುವ ನಿಗಮದ ಅಧಿಕಾರಿಗಳು ಖೊಟ್ಟಿ ದಾಖಲೆ ನೀಡಿದವರಿಗೆ ಹಣ ಮಂಜೂರಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

