ಮೋಟಾರ್ ದುರಸ್ತಿಗೆ; ನೀರಿಗೆ ಜನರ ಪರದಾಟ
ಚಿತ್ತಾಪುರ: ಪಟ್ಟಣಕ್ಕೆ ಸರಬರಾಜು ಮಾಡುವ ಶುದ್ಧನೀರು ಘಟಕದಲ್ಲಿನ ಮೋಟಾರು ಸುಟ್ಟ ಕಾರಣ ಕಳೆದ 3 ದಿನಗಳಿಂದ ಜನತೆಗೆ ನೀರಿಲ್ಲದೆ ತೊಂದರೆ ಪಡುವಂತಾಗಿದೆ ಎಂದು ಕನ್ನಡ ಪರ ಸಂಘಟನೆಗಳ ತಾಲೂಕು ಅಧ್ಯಕ್ಷ ನರಹರಿ ಕುಲ್ಕರ್ಣಿ ಅರೋಪಿಸಿದರು.
ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ 20 ಸಾವಿರಕ್ಕೂ ಮೇಲ್ಪಟ್ಟ ಜನಸಂಖ್ಯೆ ಹೊಂದಿದ್ದು, ಜನರಿಗೆ ನಲ್ಲಿಯ ನೀರಿನ ಹೊರತು ಪರ್ಯಾಯ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಒಂದು ಮೋಟಾರು ಹೆಚ್ಚುವರಿಯಾಗಿ ಇದ್ದಿರುತ್ತದೆ. ಅದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡೂ ಪಂಪ್ಸೆಟ್ ಮೋಟಾರ್ ಕೆಡುವವರೆಗೂ ಸುಮ್ಮನೇ ಇದ್ದಿರುವುದರಿಂದ ಜನತೆ ನೀರಿಲ್ಲದಂತಾಗಿದೆ. ಎರಡೂ ಮೋಟಾರು ಸುಟ್ಟ ಮೇಲೆ ಅದರ ದುರಸ್ತಿ ನೆಪ ಹೇಳಿ ನಾಲ್ಕೈದು ದಿನ ನೀರಿಲ್ಲದಂತೆ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಮಧ್ಯ ಪ್ರವೇಶಕ್ಕೆ ಅಗ್ರಹ: ಪಟ್ಟಣದಲ್ಲಿ ಕಳೆದ 3 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದರೂ ಶಾಸಕರು ಮಾತ್ರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ತಕ್ಷಣ ಪಟ್ಟಣಕ್ಕೆ ಅಗಮಿಸಿ ಇಲ್ಲಿ ನೀರಿಗಾಗಿ ಅಗುತ್ತಿರುವ ತೊಂದರೆಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕ್ರಮ ಕೈಗೊಳ್ಳದಿದ್ದಲ್ಲಿ ಶಾಸಕರ ಕಚೇರಿ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನರಹರಿ ಕುಲ್ಕರ್ಣಿ, ಚಂದ್ರಕಾಂತ ನಾಟೀಕಾರ, ರವಿ ಇವಣಿ, ವೀರೇಶ ಪಾಟೀಲ್, ಲಕ್ಷ್ಮಣ ತಾಂಡೂರಕರ್, ಜಗದೇವ ಕುಂಬಾರ, ಅನಂದ ಪಾಮನೋರ, ಸಂತೋಷ ನೀಲೂರಕರ್ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.
ಮೋಟಾರ್ ಕೆಟ್ಟಿರುವುದರಿಂದ ಪಟ್ಟಣಕ್ಕೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಆದರೂ ಜನತೆಗೆ ತೊಂದರೆ ಆಗದಂತೆ ಆದ್ಯತೆ ಮೇಲೆ ಪುರಸಭೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ದುರಸ್ತಿ ಮುಗಿದ ತಕ್ಷಣ ಯಥಾಸ್ಥಿತಿ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಸಹಕರಿಸಬೇಕು.
ಶಿವಕಾಂತ ಬೆಣ್ಣೂರಕರ್, ಪುರಸಭೆ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

