ಗುಲ್ಬರ್ಗಾ

ಲೂಯಿ ಪಾಶ್ಚರ್ ಕುರಿತ ಚಿತ್ರ ಪ್ರದರ್ಶನ

Published On :

ಗುಲ್ಬರ್ಗ: ಜಗತ್ತಿನ ಸರ್ವ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದ ಲೂಯಿ ಪಾಶ್ಚರ್ ಮಾನವತಾವಾದಿ ವಿಜ್ಞಾನಿಯಾಗಿದ್ದರು. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ನಿವೃತ್ತ ಭೌತಶಾಸ್ತ್ರ ಉಪನ್ಯಾಸಕ ಶ್ರೀ ಬಿ.ಕೆ. ಚಳಗೇರಿ ಹೇಳಿದರು.
ನಗರದ ಸರ್ವಜ್ಞ ಕಾಲೇಜಿನಲ್ಲಿ ಆವಿಷ್ಕಾರ ಫಿಲ್ಮ್ ಸೊಸೈಟಿ ವಾರ್ಷಿಕೋತ್ಸವ ಅಂಗವಾಗಿ 'ಲೂಯಿ ಪಾಶ್ಚರ್‌' ಅವರ ಜೀವನದ ಕುರಿತ ಚಲನಚಿತ್ರವನ್ನು ಪ್ರದರ್ಶಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉನ್ನತ ಆದರ್ಶಗಳು ಮತ್ತು ಉತ್ತಮ ಅಭಿರುಚಿಗಳನ್ನು ರೂಢಿಸಿಕೊಳ್ಳಲು ಇಂತಹ ಚಲನಚಿತ್ರಗಳನ್ನು ನಿರಂತರವಾಗಿ ವೀಕ್ಷಿಸಬೇಕೆಂದರು.
ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ದೇವು ಪತ್ತಾರ್  ಮಾತನಾಡಿ, ದಿ ಸ್ಟೋರಿ ಆಫ್ ಲೂಯಿ ಪಾಶ್ಚರ್ ಸಿನಿಮಾವು ಡಾಕುಮೆಂಟರಿ ಪರಿಮಿತಿಯನ್ನು ಮೀರಿ ಭಾವನಾತ್ಮಕ ನೆಲೆಯಲ್ಲಿ ಅತ್ಯುತ್ತಮವಾಗಿ ಮೂಡಿಬಂದಿದೆ. ಮನಸ್ಸಿನ ಸೂಕ್ಷ್ಮತೆಯನ್ನು ಹಾಗೂ ತುಡಿತವನ್ನು ಶ್ರೇಷ್ಠ ನಿರ್ದೇಶಕರು ಮಾತ್ರ ಚೆನ್ನಾಗಿ ಅರಳಿಸಬಲ್ಲರು. ಮಹಾನ್ ವ್ಯಕ್ತಿಗಳ ಬಗ್ಗೆ ಸಿನಿಮಾ ಮಾಡುವುದು ಸರಳವಾದ ವಿಷಯವಲ್ಲ. ಅದರಲ್ಲಿಯೂ ವೈಜ್ಞಾನಿಕವಾದ, ಗಂಭೀರವಾದ ವಿಷಯವನ್ನು ಕಲಾತ್ಮಕವಾಗಿ ಹೊರತರುವುದು ಅತ್ಯಂತ ಕಠಿಣವಾದದ್ದು. ಆದ್ದರಿಂದ ಈ ಚಲನಚಿತ್ರಗಳನ್ನು ವಿದ್ಯಾರ್ಥಿಗಳು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿಕೊಂಡು ವೀಕ್ಷಿಸಬೇಕೆಂದರು.
ಆವಿಷ್ಕಾರ ಫಿಲ್ಮ್ ಸೊಸೈಟಿ ಸದಸ್ಯ ಮನು ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಚೆನ್ನಾರೆಡ್ಡಿ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.