ಗುತ್ತಿಗೆ ಕಾರ್ಮಿಕರ ಧರಣಿ ಜು.10ಕ್ಕೆ
ಗುಲ್ಬರ್ಗ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 10 ರಂದು ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ನಡೆದ ಜೆಸ್ಕಾಂ ಗುತ್ತಿಗೆ ಕಾರ್ಮಿಕರ ಒಕ್ಕೂಟದ ಸಮಾವೇಶದಲ್ಲಿ ಒಕ್ಕೂಟ ತೀರ್ಮಾನಿಸಿದೆ ಎಂದು ಅಧ್ಯಕ್ಷ ಹಣಮಂತ ರಟಕಲ್ ತಿಳಿಸಿದ್ದಾರೆ.
ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಕಾರ್ಪೋರೇಟ್ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಆಫೀಸ್ ಬಾಯ್, ಸ್ವೀಪರ್, ಕಂಪ್ಯೂಟರ್ ಆಪರೇಟರ್, ಮಾಲಿ, ಡ್ರೈವರ್ ಮತ್ತು ಸೆಕ್ಯೂರಿಟಿ ಗಾರ್ಡ್ಗಳಿಗೆ ಸೌಕರ್ಯ ನೀಡದೇ ಹೀನಾಯವಾಗಿ ದುಡಿಸಿಕೊಳ್ಳುತ್ತಿದೆ ಎಂದು ಜೆಸ್ಕಾಂ ಗುತ್ತಿಗೆ ಕಾರ್ಮಿಕರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಹೊರಗುತ್ತಿಗೆ ಕಾಯ್ದೆ ಪ್ರಕಾರ ಜೆಸ್ಕಾಂ ಕೆಲಸಗಾರರನ್ನು ಪಡೆಯಲು ಪ್ರತಿ ವರ್ಷ ಟೆಂಡರ್ ಕರೆದು ಆಯಾ ವರ್ಷದಲ್ಲಿ ಸರ್ಕಾರದ ತೀರ್ಮಾನದಂತೆ ಕನಿಷ್ಠ ವೇತನ ನೀಡಬೇಕು.
ಆದರೆ ಜೆಸ್ಕಾಂ ಆಡಳಿತ ಮಂಡಳಿ ಹುಬ್ಬಳಿಯ ಎಂ.ಕೆ. ಬೆಳವಾಡಿ ಏಜೆನ್ಸಿ ಮೂಲಕ 3500 ಹಣವನ್ನು ಕಾರ್ಮಿಕರಿಗೆ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಏಜೆನ್ಸಿಯು ಕಾರ್ಮಿಕರ 18 ತಿಂಗಳ ಪಿ.ಎಫ್. ಹಣವನ್ನು ಕಟ್ಟಿರುವುದಿಲ್ಲ. 3 ವರ್ಷಗಳ ಹಿಂದೆ ಏಜೆನ್ಸಿ ಪಡೆದ ಬೆಂಗಳೂರು ಕೆನಾನ್ ಏಜೆನ್ಸಿಯು 18 ತಿಂಗಳ ಪಿ.ಎಫ್. ಹಣ ಪಾವತಿಸಿಲ್ಲ ಎಂದಿದ್ದಾರೆ.
ಇಂತಹ ಬೇಜವಾಬ್ದಾರಿ ಕಾರ್ಮಿಕ ವಿರೋಧಿ ಆಡಳಿತ ಮಂಡಳಿಯ ವಿರುದ್ಧ ಜೂ.10ರಂದು ಹೋರಾಟ ನಡೆಸುವಂತೆ ಸಮಾವೇಶದಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ ಜೆಸ್ಕಾಂ ಗುತ್ತಿಗೆ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳಾದ ಚಂದ್ರಶೇಖರ ಮದನಕರ್, ಶಿವಪುತ್ರ ಗುಡೂರ, ರೇವಣಸಿದ್ದ ಕಡಗಂಚಿ, ಸಿದ್ದು ಜಮಾದಾರ, ಓಂಕಾರ, ನಿಘಪ್ಪ ಜೋಗುರ, ಶಂಕರ ಕರಲಿ, ಶಾರದಾಬಾಯಿ, ಭಾಗಮ್ಮ, ಮಹಾದೇವಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

