ಗುಲ್ಬರ್ಗಾ

ಬೆಲೆ ಏರಿಕೆಗೆ ಕಾಂಗ್ರೆಸ್ ಖಂಡನೆ

Published On :

ಚಿಂಚೋಳಿ: ಕೇಂದ್ರ ಸರ್ಕಾರ ರೈಲು ಪ್ರಯಾಣ, ಗ್ಯಾಸ್ ದರ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಕೆಲವೇ ದಿನಗಳಲ್ಲಿ ಬೆಲೆ ಏರಿಕೆ ಮತ್ತು ರೈಲು ಪ್ರಯಾಣ ದರ ಮತ್ತು ಗ್ಯಾಸ್ ಬೆಲೆಯನ್ನು ದಿಢೀರ್ ಏರಿಕೆಗೊಳಿಸಿದ್ದರಿಂದ ಜನ ಸಾಮಾನ್ಯರ ಮೇಲೆ ತುಂಬಾ ಪರಿಣಾಮ ಬೀರಲಿದೆ. ಕೂಡಲೇ ಸರಕಾರ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ.ಎಂ. ಬಾರಿ, ಮಲಕಪ್ಪಾ ಬಿರಾಪೂರ, ಗೌತಂ ಪಾಟೀಲ್, ಲಕ್ಷ್ಮಣ ಆವಂಟಿ, ಗಣಪತಿರಾವ್, ಶಿವಕುಮಾರ ಕೊಳ್ಳುರ ಕೆ.ಎಂ. ಹಾಶ್ಮಿ ಮಾತನಾಡಿದರು.
ಮಾತಿನ ಚಕಮಕಿ: ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆಯಲ್ಲಿ ತೊಡಗಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಮಾತಿನ ಚಕಮಕಿ ನಡೆದಿರುವುದರಿಂದ ಪ್ರತಿಭಟನೆಯಲ್ಲಿ ಗೊಂದಲಮಯ ವಾತಾವರಣ ಉಂಟಾಯಿತು. ಹೀಗಾಗಿ ತರಾತುರಿಯಲ್ಲಿ ಮನವಿ ಪತ್ರ ಸಲ್ಲಿಸಿ ಅಲ್ಲಿಂದ ಪ್ರತಿಭಟನಾಕಾರರು ತೆರಳಿದರು.
ಪ್ರತಿಭಟನೆಯಲ್ಲಿ ಪ್ರಭುಲಿಂಗ ಲೇವಡಿ, ಅಬ್ದುಲ್ ಬಾಸೀತ್, ಚಂದ್ರಶೇಖರ ಗಾರಂಪಳ್ಳಿ, ತುಕಾರಾಮ ಪವಾರ, ಮಹ್ಮದ್ ಮಸ್ತಾನ್, ಶಿವನಾಗಯ್ಯ ಸ್ವಾಮಿ, ಗೋವಿಂದ ಪೋಲಕಪಳ್ಳಿ, ಮಧುಸೂದನ ರೆಡ್ಡಿ ಪಾಟೀಲ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ರೈಲು ದರ ಹೆಚ್ಚಳ ಬೇಡ
ಗುಲ್ಬರ್ಗ: ರೈಲು ಪ್ರಯಾಣ ದರ ಹಾಗೂ ಅಡುಗೆ ಅನಿಲ ದರ ಹೆಚ್ಚಿಸದಂತೆ ಒತ್ತಾಯಿಸಿ ಕನ್ನಡ ಸೇನೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿತು.
  ರೇಲ್ವೆ ಇಲಾಖೆ ಶೇ.14.2 ದರ ಹೆಚ್ಚಿಸಿ ಆದೇಶ ಹೊರಡಿಸುವುದರಿಂದ ಜನತೆಗೆ ತುಂಬಾ ಹೊರೆಯಾಗಿದೆ. ದಿನನಿತ್ಯ ಕೋಟ್ಯಂತರ ಜನತೆ ರೈಲು ಮೂಲಕ ಸಂಚರಿಸಿ ಸರಕು ಸಾಗಾಣಿಕೆ ನಡೆಸುತ್ತಾರೆ. ಇಂದಿನ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕೂಡಲೇ ರೈಲು ಪ್ರಯಾಣ ದರ ಮತ್ತು ಸರಕು ಸಾಗಾಣಿಕಾ ದರವನ್ನು ಕೂಡಲೇ ಹಿಂಪಡೆಯುವಂತೆ ಸೇನೆ ಅಧ್ಯಕ್ಷ ಶಿವಶರಣಪ್ಪ ಖಣದಾಳ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮೋದಿನ್ ಪಟೇಲ್, ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ನಗರಾಧ್ಯಕ್ಷ ಕಾಶಿಮರಾಜ ಹಜಾರೆ, ಕಾರ್ಮಿಕ ಘಟಕದ ಮುಖಂಡರಾದ ನರಸಿಂಗ ಚವ್ಹಾಣ, ಸಂಗಣ್ಣ ಪಾಟೀಲ್, ಗುಂಡು ಕಪನೂರು, ಗಿರೀಶಗೌಡ ಪಾಟೀಲ ಇನಾಮದಾರ ಮುಂತಾದವರು ಇದ್ದರು.
ಎಸ್‌ಯುಸಿಐ ವಿರೋಧ: ಕೇಂದ್ರ ಸರ್ಕಾರ ಹಲವು ಕಾರಣಗಳನ್ನು ಕೊಟ್ಟು ರೈಲು ಪ್ರಯಾಣ ದರ ಹಾಗೂ ಸರಕು ಸಾಗಣೆ ಹೆಚ್ಚಿಸಿರುವುದು ಖಂಡನಿಯ ಎಂದು  ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ರೈಲ್ವೆ ನಿಲ್ದಾಣದ ಎದುರು ಪಕ್ಷದ ಜಿಲ್ಲಾ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಹೊಸ ಸರ್ಕಾರದಿಂದ ಭಾರಿ ನಿರೀಕ್ಷೆ ಹೊಂದಿದ್ದ ದೇಶದ ಜನತೆ ಭವಿಷ್ಯದ ಒಳ್ಳೆಯ ದಿನಗಳು ಇದರಿಂದ ಹುಸಿಯಾಗಿ ಸಾಬೀತಾಗಿವೆ. ಬಿಜೆಪಿ ಸರ್ಕಾರದ ಈ ಕ್ರಮವು ಜನತೆಗೆ ಭ್ರಮನಿರಸಗೊಳಿಸಿದೆ ಎಂದರು. ಸರಕು ಸಾಗಾಣಿಕೆಯಲ್ಲಿ ಹೆಚ್ಚಳವಾದರೆ ಅಗತ್ಯ ವಸ್ತುಗಳ ಬೆಲೆಗಳು ಗಗನ ಮುಟ್ಟುತ್ತವೆ. ಜನತ ಜೀವನವು ದುಸ್ಥಿತಿಗೆ ತಳಲ್ಪಡುತ್ತದೆ. ಆದ್ದರಿಂದ ಈಗಾಗಲೇ ಕೇಂದ್ರ ಸರ್ಕಾರ ಈ ಕ್ರಮ ಖಂಡಿಸಿ ದೇಶಾದ್ಯಂತ ತೀವ್ರ ವಿರೋಧಗಳು, ಪ್ರತಿಭಟನೆಗಳು ವ್ಯಾಪಕವಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಗೌಸ್ ಪಟೇಲ್, ಮಹೇಶ ನಾಡಗೌಡ, ಡಾ. ಸೀಮಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.