ಗುಲ್ಬರ್ಗಾ

'ಕರ ಬಾಕಿ ಪಟ್ಟಿಯಲ್ಲಿ ನೀರಾವರಿ ಸೌಲಭ್ಯ ಪಡೆಯದವರ ಹೆಸರು'

Published On :

ಹುಣಸಗಿ: ಪಟ್ಟಣದ ಕೃಷ್ಣಾ ಭಾಗ್ಯ ಜಲ ನಿಗಮದ ಉಪ ವಿಭಾಗದ ಕಚೇರಿಯಲ್ಲಿ ನೀಲಕಂಠೇಶ್ವರ ನೀರು ಬಳಕೆದಾರ ಮಹಾ ಮಂಡಳದ ಸಭೆ ಸೋಮವಾರ ನಡೆಯಿತು.
ಉಪ ವಿಭಾಗದ ಅಡಿಯಲ್ಲಿ 18 ನೀರು ಬಳಕೆದಾರ ಸಹಕಾರ ಸಂಘಗಳು ಬರುತ್ತಿದ್ದು, 2001 ರಿಂದ ಇಲ್ಲಿವರೆಗೆ ನೀರು ಬಳಕೆದಾರ ಸಹಕಾರ ಸಂಘಗಳು 60 ಲಕ್ಷ ನೀರಾವರಿ ಕರ ಕಟ್ಟುವ ಬೇಡಿಕೆ ಇದೆ. ಇಲ್ಲಿವರೆಗೆ 14 ಲಕ್ಷ ವಸೂಲಿ ಆಗಿದೆ. ಉಪವಿಭಾಗವೊಂದರಲ್ಲೆ ರೈತರು 47 ಲಕ್ಷ ನೀರಾವರಿ ಕರ ಪಾವತಿ ಮಾಡಬೇಕಿದೆ. ಆದರೆ ವಿಪರ್ಯಾಸ ಎಂದರೆ ಅರ್ಧಕ್ಕಿಂತ ಹೆಚ್ಚು ಸಂಘಗಳಿಗೆ ನೀರು ತಲುಪಿಲ್ಲ. ಅವರನ್ನು ಕೂಡಾ ಬಾಕಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ನಿಂಗನಗೌಡ ಕಲ್ಲದೇವನಹಳ್ಳಿ ಆರೋಪಿಸಿದರು.
ನೀರಾವರಿ ಕರ ವಸೂಲಿಗೆ ಕಂದಾಯ ಬಿಗಿ ನೀತಿ ಅನುಸರಿಸುವುದು ಒಳ್ಳೆಯದು. ಯಾರ ಜಮೀನುಗಳಿಗೆ ಸರಿಯಾಗಿ ನೀರು ತಲುಪುವದೋ ಅವರು ನೀರಾವರಿ ಕರ ಪಾವತಿಸುವುದಕ್ಕೆ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಳನೂರಿನ ಮದನಸಾಬ ಆಗ್ರಹಿಸಿದರು. ಚನ್ನೂರು ಸಂಘದ ಅಧ್ಯಕ್ಷ ಭೋಜಪ್ಪಗೌಡ ಪಾಟೀಲ್ ಮಾತನಾಡಿ, 2004ರಿಂದ ಚನ್ನೂರು ಗ್ರಾಮದ ವ್ಯಾಪ್ತಿಗೆ ಕಾಲುವೆ ನೀರು ಹರಿದು ಬಂದಿಲ್ಲಾ. ಆಗಿನಿಂದ ಮನವಿ ಮಾಡಿದರೂ ಕೂಡಾ ನೀರಾವರಿ ಅಧಿಕಾರಿಗಳು ಸ್ಪಂದಿಸಿಲ್ಲ ಎಂದರು.
ಬೈಲಾಪುರ ನೀರು ಬಳಕೆದಾರ ಸಂಘದ ಅಧ್ಯಕ್ಷ ರವಿ ರಾಠೋಡ ಮಾತನಾಡಿ ಬೈಲಾಪುರ ಕಾಲುವೆ ವ್ಯಾಪ್ತಿಯ ಜಮೀನುಗಳಿಗೆ ಕಳೆದ ಹತ್ತು ವರ್ಷಗಳಿಂದ ನೀರು ಹರಿದು ಬಂದಿಲ್ಲ ಎಂದು ಹೇಳಿದರು.
ನಿಂಗನಗೌಡ ಗುಳಬಾಳ ಮಾತನಾಡಿ, ಸಹಕಾರ ಸಂಘಗಳ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸಲು ಜಲ ಸಂಪನ್ಮೂಲ ಸಚಿವರಿಗೆ ಪತ್ರ ಬರೆಯುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಎಇಇ ಸತ್ಯನಾರಾಯಣ, ವೆಂಕಟಗಿರಿ ದೇಶಪಾಂಡೆ, ರಾಜು ಖಾಜಿ, ವೆಂಕಟೇಶ ಕನಗಂಡನಹಳ್ಳಿ, ಭೀಮಣ್ಣ ಕುಪ್ಪಿ, ಹನ್ನೆರಡು ಸಂಘಗಳ ನಿರ್ದೇಶಕರು ಹಾಜರಿದ್ದರು. ಗುಳಬಾಳ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.