ವರ್ಧಂತಿ, ತುಲಾಭಾರ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.2
ಇಲ್ಲಿನ ಬಿದ್ದಾಪುರ ರಾಯರ ಮಠದಲ್ಲಿ ಭಾನುವಾರ ವರ್ಧಂತಿ, ಪುರಾಣ ಮಂಗಳ ಹಾಗೂ ಪಂಡಿತರ ತುಲಾಭಾರದ ತ್ರಿವೇಣಿ ಸಂಗಮದ ಧಾರ್ಮಿಕ ಕಾರ್ಯಕ್ರಮಗಳು ಜರುಗುವ ಮೂಲಕ ಭಕ್ತರನ್ನು ಬಹುವಾಗಿ ಆಕರ್ಷಿಸಿದವು.
ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅಷ್ಟೋತ್ತರ ಪಾರಾಯಣ ಸಮಿತಿ ವರ್ಧಂತಿ ಮಹೋತ್ಸವ, ರಘುನಾಥತೀರ್ಥ ಅಧ್ಯಯನಾಶ್ರಮದ ಮುಖ್ಯಸ್ಥರಾಗಿರುವ ಪಿಡಂತ ರಾಮಾಚಾರ್ಯರ ತುಲಾಭಾರ, ಪಂಡಿತರಾದ ರಂಗಾಚಾರ್ಯರಿಂದ ಭಾಗವತ ಸಾರೋದ್ಧಾರ ಪುರಾಣದ ಮಂಗಳ ಮಹೋತ್ಸವಗಳು ವಿಜೃಂಭಣೆಯಿಂದ ನಡೆದವು.
ಬಿದ್ದಾಪುರದ ಹನುಮಂತ ದೇವರ ಮಂದಿರದಿಂದ ಬೆಳಗ್ಗೆಯೇ ಪ್ರಹ್ಲಾದರಾಯರ ಪ್ರತಿಮೆಯೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ ಭಜನಾ ಮಂಡಳಿ ಸದಸ್ಯರು ದಾಸರ ಕೀರ್ತನೆಗಳು, ಸುಳಾದಿಗಳನ್ನು ಹಾಡುವ ಮೂಲಕ ಬಡಾವಣೆಯ ಆಸ್ತಿಕರ ಗಮನ ಸೆಳೆದರು.
ಮಂಗಳ ಮಹೋತ್ಸವ: ನಂತರ ಪಂ. ರಂಗಾಚಾರ್ಯ ಹಯಗ್ರೀಯ ಇವರು ಕಳೆದ 5 ದಿನಗಳಿಂದ ಮಠದ ಅಂಗಳದಲ್ಲಿ ಹೇಳಿದ್ದ ಭಾಗವತ ಸಾರೋದ್ಧಾರದ ಪುರಾಣ ಮಂಗಳ ಮಹೋತ್ಸವ ನಡೆಯಿತು. ನಂತರ ಪಂಡಿತರಾದ ರಾಮಾಚಾರ್ಯರನ್ನು ಭಕ್ತರು ಧಾನ್ಯದಿಂದ ತುಲಾಭಾರ ಮಾಡಿ ಕೃತಾರ್ಥರಾದರು.
ನವಲಿ ಕೃಷ್ಣಾಚಾರ್ಯ ಉಸ್ತುವಾರಿಯಲ್ಲಿ ನಡೆದ ಭಾನುವಾರದ ವಿಶೇಷ ಧಾರ್ಮಿಕ ಸಮಾರಂಭಗಳಲ್ಲಿ ಅಷ್ಟೋತ್ತರ ಪಾರಾಯಣ ಸಮಿತಿಯ ಹಿರಿಯರಾದ ಬಿ.ಆರ್. ಪಾಟೀಲ್, ಗೋಪಾಲರಾವ, ಗುರುರಾಜ ದೇಸಾಯಿ, ಮಧ್ವಾಚಾರ್ಯ ಜಾಗಿರ್ದಾರ್, ಪಂಡಿತರಾದ ಶ್ರೀನಿವಾಸಾಚಾರ್ಯ ಪದಕಿ, ಗಿರೀಶಾಚಾರ್ಯ ಕೊಪ್ಪರ, ಮಠದ ವ್ಯವಸ್ಥಾಪಕ ಗುರುರಾಜಾಚಾರ್ಯ ಶ್ರೀಧರಗಡ್ಡೆ ಇದ್ದರು.
ಬೆಳಗಿನ ಪ್ರಹ್ಲಾದರಾಜರ ಪ್ರತಿಮೆಯ ಶೋಭಾಯಾತ್ರೆಯ ನಂತರ ಮಠದ ಪ್ರಾಂಗಣದಲ್ಲಿ ಸೇರಿದ್ದ ನೂರಾರು ಭಕ್ತರನ್ನು ವೈಷ್ಣವಿ ಜೋಷಿ ಅವರ ಭಕ್ತಿ ಸಂಗೀತ ಬಹುವಾಗಿ ಆಕರ್ಷಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

