ಗುಲ್ಬರ್ಗಾ

ಪಿಡಿಒ, ಬಿಲ್ ಕಲೆಕ್ಟರ್ ಅಮಾನತಿಗೆ ಒತ್ತಾಯ

Published On :

ಯಾದಗಿರಿ: ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು, ಬಿರುಗಾಳಿ ಸಹಿತ ಭಾರಿ ಮಳೆಯಿಂದ ಆಶಾಪುರ ತಾಂಡದಲ್ಲಿ ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ಸ್ಥಗಿತಗೊಂಡಿದೆ. ಕುಡಿವ ನೀರಿಗೆ ತೀವ್ರ ತೊಂದರೆಯಾಗಿದೆ. ಈ ಕುರಿತು ಕ್ರಮಕ್ಕೆ ಮುಂದಾಗದ ಯಲ್ಹೇರಿ ಗ್ರಾಪಂ ಪಿಡಿಒ ಮತ್ತು ಬಿಲ್ ಕಲೆಕ್ಟರ್ ಅಮಾನತಿಗೆ ಒತ್ತಾಯಿಸಿ ಜಿಲ್ಲಾ ಕೋಲಿ ಸಮಾಜದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
  ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಲ್ಪ ಪರಿಹಾರ ಒದಗಿಸಿದ್ದು, ಕುಡಿಯುವ ನೀರಿನ ವ್ಯವಸ್ಥೆಗೆ ಯಲ್ಹೇರಿ ಗ್ರಾಮ ಪಂಚಾಯ್ತಿಗೆ ಒಪ್ಪಿಸಲಾಗಿದೆ. ಅದರಂತೆ ಪಿಡಿಒ ಒಂದು ದಿನದ ಮಟ್ಟಗೆ ಜನರೇಟರ್ ಹಚ್ಚಿ ಜನರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿದರು. ಮಾರನೇ ದಿನವೇ ಜನರೇಟರ್ ತೆಗೆದುಕೊಂಡು ಹೋಗಿ ನೀರು ಪೂರೈಕೆ ನಿಲ್ಲಿಸಿದ್ದಾರೆ.
ದಬ್ಬಾಳಿಕೆ, ಜೀವಬೆದರಿಕೆ: ಕಾರಣ ಕೇಳಿದರೆ ಗ್ರಾಮ ಪಂಚಾಯ್ತಿ ಯಲ್ಹೇರಿ ಪಿಡಿಒ ಮತ್ತು ಬಿಲ್ ಕಲೆಕ್ಟರ್ ಮತ್ತು ರಾಜಕೀಯ ಪುಡಾರಿಗಳ ಹಾಗೂ ಪಟ್ಟಬದ್ಧಶಕ್ತಿಗಳ ಮಾತುಕೇಳಿ ನಾವು ಏಕೆ ನಿಮಗೆ ನೀರು ಕೊಡಬೇಕೆಂದು ಹಿಯಾಳಿಸಿ ಅವಾಚ್ಯ ಶಬ್ಧದಿಂದ ಸಾರ್ವಜನಿಕರಿಗೆ ದಬ್ಬಾಳಿಕೆ ಮತ್ತು ಜೀವಬೆದರಿಕೆ ಹಾಕುತ್ತಿದ್ದಾರೆ. ಸಾರ್ವಜನಿಕರು ಅತಂತ್ರ ಸ್ಥಿತಿಯಲ್ಲಿರುವಾಗ ಮೇಲಾಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ, ಬಡ ರೈತಾಪಿ ಜನರ ಹೇಳಿಕೆ ಪಡೆದು ಪಂಚಾಯ್ತಿ ಅಧಿಕಾರಿಗಳನ್ನು ಅಮಾನುತು ಗೊಳಿಸಿ ಜೀವ ಬೆದರಿಕೆ ಹಾಕಿದ ಪಟ್ಟಬದ್ಧ ಶಕ್ತಿಗಳನ್ನು ಗುರುತಿಸಿ ಅವರ ಮೇಲೆ ಕ್ರಿಮಿನಲ್ ಕೇಸ್‌ಹಾಕಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಜನರಿಗೆ ಕಿರುಕುಳ: ಪಿಡಿಒ ಬಿಲ್ ಕಲೆಕ್ಟರ್ ತಮಗೆ ಬೇಕಾದ ರಾಜಕೀಯ ವ್ಯಕ್ತಿಗಳ ಮಾತು ಕೇಳಿ ಜನರಿಗೆ ಕಿರುಕುಳ ಕೊಟ್ಟು ನೀರನ್ನು ನಿಲ್ಲಿಸಿದ್ದಾರೆ. ಕಾರಣ ಕೇಳಿದರೆ ಇಲ್ಲಸಲ್ಲದ ಮಾತು ಹೇಳುತ್ತಿದ್ದಾರೆ. ಇವರನ್ನು ಅತೀ ಶೀಘ್ರದಲ್ಲೇ ಸೇವೆಯಿಂದ ವಜಾಗೊಳಿಸಿ ಸದರಿ ಗ್ರಾಮದ ಜನರಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿ. ಒಂದು ವೇಳೆ ಈ ಮನವಿಗೆ ಸ್ಪಂದಿಸದಿದ್ದರೆ ಮುಂದಾಗುವ ಅನಾಹುತಗಳಿಗೆ ಮೇಲಾಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆಂದು ಎಚ್ಚರಿಕೆ ಮೂಲಕ ರಸ್ತೆ ರೋಖೋ ಉಗ್ರ ಹೋರಾಟ ಮಾಡಬೇಕಾದುತ್ತದೆಂದು ತಿಳಿಸುತ್ತಿದ್ದೇವೆ.
 ಉಮೇಶ ಕೆ. ಮುದ್ನಾಳ, ಕಸ್ತೂರಪ್ಪ ಕುರಕುಂದಾ, ಬಸ್ಸಪ್ಪ, ಚಂದ್ರಪ್ಪ, ಮರೇಪ್ಪ, ಹಣಮಂತ, ರೋಜಿತ್ ನಾಟೇಕಾರ, ಕಾಶಪ್ಪ, ದೇವಿಂದ್ರಗೌಡ, ಮಲ್ಲಿಕಾರ್ಜುನ, ಲಿಂಗಪ್ಪ, ಪರಶುರಾಮ ಕೋಳಿ ಕುರಕುಂದಾ, ದೇವಪ್ಪ, ಶಂಕರ, ಶ್ರೀನಿವಾಸ, ಮಲ್ಲು ಪೂಜಾರಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.