ಗುಲ್ಬರ್ಗಾ

ಚಳವಳಿ ಹುಟ್ಟು ಹಾಕಿದ್ದು ಕಟ್ಟಿಮನಿ

Published On :

ಗುಲ್ಬರ್ಗ: ಬಸವರಾಜ ಕಟ್ಟಿಮನಿ ಚಳುವಳಿ ಹುಟ್ಟು ಹಾಕಿದ ಲೇಖಕ. ಸಮಕಾಲಿನ ವಾಸ್ತವದ ಕುರಿತು ಕಟ್ಟಿಮನಿ ಆಗ ಬರೆದರು. ಶ್ರೀರಂಗರ ಪರಂಪರೆಯನ್ನು ನಿಜವಾದ ಅರ್ಥದಲ್ಲಿ ಮುಂದುರಿಸಿದರು ಎಂದು ಖ್ಯಾತ ಸಂಶೋಧಕ ಎಂ.ಎಂ. ಕಲಬುರ್ಗಿ ಹೇಳಿದರು.
ಬೆಳಗಾವಿಯ ಡಾ. ಬಸವರಾಜ ಕಟ್ಟಿಮನಿ ಟ್ರಸ್ಟ್ ಹಾಗೂ ಕರ್ನಾಟಕ ಕೇಂದ್ರೀಯ ವಿವಿ ಮಾನವಿಕ ಮತ್ತು ಭಾಷಾ ನಿಕಾಯಗಳ ಸಹಯೋಗದಲ್ಲಿ ಬಸವರಾಜ ಕಟ್ಟಿಮನಿ ಒಂದು ಮುಖಾಮುಖಿ ಕುರಿತ ಒಂದು ದಿನದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
  ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಡೋಣೂರ ಸ್ವಾಗತಿಸಿದರು, ಬಸವರಾಜ ಕಟ್ಟಿಮನಿ ಟ್ರಸ್ಟ್‌ನ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಪ್ರಾಸ್ತಾವಿಕ ಮಾತನಾಡಿದರು.
  ಡಾ. ರಾಜಣ್ಣ. ಟಿ.ಡಿ. ವಂದಿಸಿದರು. ಬಸವರಾಜ ಕೋಡಗುಂಟಿ ನಿರೂಪಿಸಿದರು. ಡಾ. ಶಿವಗಂಗಾ ರುಮ್ಮಾ, ಡಾ. ವಿಕ್ರಮ ವಿಸಾಜಿ, ಡಾ. ಸೋಮಶೇಖರ ಅಪ್ಪಗೆರೆ, ಪ್ರೊ. ಭ. ಮಲ್ಲಿಕಾರ್ಜುನ, ಪ್ರೊ. ಸುನಿತಾ ಮಂಜನಬೈಲ್, ಡಾ. ಮಹೇಂದ್ರ, ಡಾ. ಶ್ರೀಬಿತಾ, ಡಾ. ವಿಜಯಲಕ್ಷ್ಮೀ, ಡಾ. ಸುಲೋಚನಾ ಶೇಖರ ಮತ್ತಿತರರು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.