ಭಾರತ ನಿರ್ಮಾಣ ಪಾದಯಾತ್ರೆ ಯಶಸ್ವಿ
ಗುರುಮಠಕಲ್: ಸಚಿವ ಬಾಬುರಾವ್ ಚಿಂಚನಸೂರ್ ನೇತೃತ್ವದಲ್ಲಿ ಮಂಗಳವಾರದಂದು ಗಾಜರಕೋಟ್ ಗ್ರಾಮದಿಂದ ಗುರುಮಠಕಲ್ವರೆಗೆ ನಡೆದ ಭಾರತ ನಿರ್ಮಾಣ ಪಾದಯತ್ರೆ ಯಶಸ್ಸು ಕಂಡಿತ್ತು.
ಗಾಜರಕೋಟ್ ಗ್ರಾಮದಿಂದ ಗುರುಮಠಕಲ್ವರೆಗೆ 12 ಕಿಮಿನಲ್ಲಿ ಪಾದಯಾತ್ರೆ ನಡೆಸಿದ ಸಚಿವ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಧ್ವಜವನ್ನು ಕೈನಲ್ಲಿ ಹಿಡಿದು, ದಾರಿಯಲ್ಲಿ ಜನರನ್ನು ನಿಲ್ಲಿಸಿ ಸೌಜನ್ಯದಿಂದ ಮಾತನಾಡಿಸುತ್ತಿದ್ದರು. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ಇಲ್ಲದಿದ್ದರೇ ತಲಾಂತರಗಳು ಕಳೆದರೂ ನಮ್ಮ ಭಾಗಕ್ಕೆ 371(ಜೆ) ಕಲಂ ಜಾರಿಯಾಗುತ್ತಿರಲಿಲ್ಲ ಎಂದು ಜವಳಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಚಿಂಚನಸೂರ್ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಯು. ಭೂಪತಿ, ಗೌತಮ್, ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ, ಹಿರಿಯ ಮುಖಂಡ ಅಣ್ಣರಾವ ಮುತ್ತಟ್ಟಿ, ಜಿ.ಕಾಂ, ಖಜಾಂಚಿ ಚಿದಾನಂದಪ್ಪ ಕಾಳಬೆಳಗುಂದಿ, ಗುರುಮಠಕಲ್ ಮತ್ತು ಸೈದಾಪೂರ ಬ್ಲಾಕ್ ಅಧ್ಯಕ್ಷ ಮಹಿಪಾಲ ರೆಡ್ಡಿ ಪಾಟೀಲ ಹತ್ತಿಕುಣಿ, ವಿಶ್ವನಾಥ ನೀಲಹಳ್ಳಿ, ಬಸವರಾಜ ಸ್ವಾಮಿ ಬದ್ದೇಪಲ್ಲಿ, ಬಸವಣ್ಣ ದೇವರಹಳ್ಳಿ, ಬಸವರಾಜಪ್ಪ ಬಾಗಿಲಿ, ಹಣಮಂತಪ್ಪ ಬಳಿಚಕ್ರ, ರಘುನಾಥ ರೆಡ್ಡಿ ನಜರಾಪುರ, ದಶರಥರಾವ ಧಡಂಗೆ, ಪಾಪಣ್ಣ ಅಳೆಗಾರ, ನರಸಿಂಹ ರೆಡ್ಡಿ ಚಂಡರಕಿ, ಶ್ಯಾಮಪ್ಪ ಚಂಡರಿಕಿ, ಆನಂತಪ್ಪ ಯದ್ಲಾಪೂರ್, ಚುಕ್ಕಪ್ಪ ನಾಯಕ್, ಭೀಮಶಪ್ಪ ಮನ್ನೆ, ಫಯಾಜ್ ಅಹ್ಮದ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

