ಗುಲ್ಬರ್ಗಾ

ಮಾನಿನಿಯರ ಆಕ್ರೋಶ

Published On :

ಕ.ಪ್ರ. ವಾರ್ತೆ  ಗುರುಮಠಕಲ್   ಮಾ.13
ಚಂಡರಕಿ ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳಾ ಶೌಚಾಲಯಗಳಿಲ್ಲದೆ ತೀವ್ರ ತೊಂದರೆಯಾಗಿದ್ದರೂ ಗ್ರಾಪಂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಗುರುವಾರ ಪಂಚಾಯಿತಿ ಕಾರ್ಯಲಯದ ಮುಂದೆ ವಿನೂತನ ಪ್ರತಿಭಟನೆ ನಡೆಸಿದರು.
  ಕಳೆದ ಸುಮಾರು ವರ್ಷಗಳಿಂದ ಇಲ್ಲಿನ ವಾರ್ಡ್ 3 ಮತ್ತು 4ರಲ್ಲಿ ಸಾರ್ವಜನೀಕ ಶೌಚಲಯಗಳಿಲ್ಲದೆ ಮಹಿಳೆಯರು ರಸ್ತೆಯ ಪಕ್ಕದ ಖಾಸಗಿ ವ್ಯಕ್ತಿಗಳ ಸ್ಥಳವನ್ನೇ ಬಯಲು ಶೌಚಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಆ ಸ್ಥಳದಲ್ಲಿ ಶಾಲೆ ನಿರ್ಮಿಸಲು ಸ್ಥಳದಲ್ಲಿರುವ ಗಿಡ ಗಂಟೆಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ಗ್ರಾಪಂ.ಗೆ ತಂಬಿಗೆಗಳ ಜೊತೆಯಲ್ಲಿ ಬಂದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಸ್ಥಳವೇ ಶೌಚಾಲಯ: ಗ್ರಾಮದಲ್ಲಿ ಶೌಚಾಲಯವಂತೂ ಇಲ್ಲ. ಬಸ್ ನಿಲ್ದಾಣದ ಮುಂದೆ ಖಾಸಗಿ ವ್ಯಕ್ತಿಗಳಿಗೆ ಸೇರಿದ ಯಲ್ಲಪ್ಪ ಈರಪ್ಪ ಎಂಬುವವರ ಖಾಸಗಿ ಬಯಲು ಸ್ಥಳವನ್ನು ಮಹಿಳೆಯರು ಶೌಚಾಲಯಕ್ಕೆ ಉಪಯೋಗಿಸುತ್ತಿದ್ದರು.
  ಈಗ ಅದನ್ನು ಏಕಾಏಕಿ ಮಹಿಳೆಯರಿಗೆ ಶೌಚಾಲಯ ಸ್ಥಳವನ್ನು ಸ್ವಚ್ಛಗೊಳಿಸಿ, ಸ್ಥಳದ ಮಾಲೀಕನಿಂದ ಅನುಮತಿ ಪಡೆಯದೇ ಹರಿಜನವಾಡ ಶಾಲೆಯ ನೂತನ ಕಟ್ಟಡವನ್ನು ನಿರ್ಮಿಸಲು ಪಂಚಾಯಿತಿ ಕೆಲ ಸದಸ್ಯರು ಕುಮ್ಮಕ್ಕು ನೀಡಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆಂದು ಮಹಿಳೆಯರು ಆರೋಪಿಸಿದರು.
ಕಲ್ಲು ತೂರಾಟ: ಮಹಿಳೆಯರು ರಾತ್ರಿ ವೇಳೆ ಬಯಲು ಶೌಚಕ್ಕೆ ತೆರಳಿದರೆ ಕೆಲ ಕಿಡೆಗೇಡಿಗಳೂ ರಾತ್ರಿ ಹೊತ್ತು ಮಹಿಳೆಯರ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದಾರೆ ಎಂದು ಗ್ರಾಮದ ಫಕೀರಮ್ಮ ನಾಟಿಕರ್, ಮೊಗಲಮ್ಮ, ಭಾಗಮ್ಮ, ಈರಮ್ಮ ರೆನೆಟ್ಲಾ, ಚನ್ನಮ್ಮ ನಾಟಿಕರ್ ದೂರಿದ್ದು, ಈ ಕುರಿತು ಗುರುಮಠಕಲ್ ಪೊಲೀಸರ ಗಮನಕ್ಕೆ ತಂದರೂ ಈವರೆಗೆ ಯಾವುದೇ ಉಪಯೋಗವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
  ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಮಹಿಳೆಯರಿಗೆ ತಕ್ಷಣ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವಾದರೆ ಗ್ರಾಮ ಪಂಚಾಯಿತಿ ಮುಂದೆನೇ ಶೌಚ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನೆ ನಿರತ ಮಹಿಳೆಯರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.