ಗುಲ್ಬರ್ಗಾ

ಗಡಿಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ: ಡಾ. ಜಾಧವ

Published On :

ಚಿಂಚೋಳಿ: ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಕುಂಚಾವರಂ ಸುತ್ತಲಿನ ಗ್ರಾಮ ಮತ್ತು ತಾಂಡಗಳಲ್ಲಿ ಕಳೆದ 9 ತಿಂಗಳಲ್ಲಿ ರಾಜ್ಯ ಸರ್ಕಾರದಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರುಗೊಳಿಸಿ ಜನರಿಗೆ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು.
ತಾಲೂಕಿನ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಭಾರತ ನಿರ್ಮಾಣ ಯಾತ್ರೆ ನಿಮಿತ್ತ ಪೋಚಾವರಂ, ಮಗದಂಪೂರ, ಶಿವರಾಮಪುರ, ಶಿವರೆಡ್ಡಿಪಳ್ಳಿ, ಲಚಮಾಸಾಗರ ಮುಂತಾದ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿದ ನಂತರ ಕುಂಚಾವರಂ ಗ್ರಾಮದಲ್ಲಿ ಬಹಿರಂಗ ಸಭೆ ಮತ್ತು ಕಾರ್ಯಕರ್ತರುನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕುಂಚಾವರಂ ಗಡಿಭಾಗಕ್ಕೆ ರಸ್ತೆ ಡಾಂಬರೀಕರಣ, ಕುಡಿವ ನೀರು ಪೂರೈಕೆ ಸೇರಿದಂತೆ ಅರಣ್ಯ ಹಕ್ಕು ಕಾಯ್ದೆ ಹಕ್ಕು ಜಾರಿಗೊಳಿಸಲಾಗಿದೆ. ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ರಾಹುಲ್‌ಗಾಂಧಿ ಪ್ರಧಾನಿಯಾಗಬೇಕೆಂಬ ಕನಸು ನನಸಾಗಿಸಬೇಕೆಂದು ಶಾಸಕ ಡಾ. ಉಮೇಶ ಹೇಳಿದರು.
ಕೆ.ಎಂ. ಬಾರಿ, ಲಕ್ಷ್ಮಣ ಅವಂಟಿ, ಡಾ. ಅಂಜನಯ್ಯ, ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ ನರಸಿಂಹಲು ಸವಾರಿ, ಗೋಪಾಲರೆಡ್ಡಿ ಕಸ್ತೂರಿ, ತಾಪಂ ಸದಸ್ಯ ನರಸಿಂಹಲು ಕುಂಬಾರ ಮುಂತಾದವರು ಮಾತನಾಡಿದರು.
ಚುನಾವಣೆ ವೀಕ್ಷಕ ಜಿಪಂ ಮಾಜಿ ಸದಸ್ಯ ಭೀಮರಾವ ತೇಗಲತಿಪ್ಪಿ, ಜಯಶ್ರೀ ಸಜ್ಜನಶೆಟ್ಟಿ, ಶಿವಕುಮಾರ ಕೊಳ್ಳು, ಅಬ್ದುಲ್ ಬಾಸೀತ, ವೆಂಕಟರೆಡ್ಡಿ, ಅನೀಲಕುಮಾರ ಜಮಾದಾರ, ಶಾಮರಾವ ರಾಠೋಡ್ ರಾಮಚಂದ್ರ ಜಾಧವ್, ಉಮಾ ಪಾಟೀಲ್, ಬಸವಣ್ಣ ಪಾಟೀಲ್, ಜಗದೀಶಸಿಂಗ್ ಠಾಕೂರ್ ಇನ್ನಿತರರು ಇದ್ದರು. ತಾಪಂ ಸದಸ್ಯ ನರಸಿಂಹಲು ಕುಂಬಾರ ಸ್ವಾಗತಿಸಿದರು. ಸೀನು ಕಾರ್ಯಕ್ರಮ ನಿರೂಪಿಸಿದರು. ಚಂದರ ಕಾರಭಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.