ಗುಲ್ಬರ್ಗಾ

ಎನ್ನೆಸ್ಸೆಸ್‌ನಿಂದ ನಾಯಕತ್ವ ಗುಣ

Published On :

ಹುಣಸಗಿ: ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್)ನಿಂದ ವಿದ್ಯಾರ್ಥಿಗಳು ನಾಯಕತ್ವದ ಗುಣಗಳು, ಸೇವಾ ಮನೋಭಾವನೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ಶಿಕ್ಷಣ ಪ್ರೇಮಿ ಷಣ್ಮುಖಪ್ಪಗೌಡ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಕಾಲೇಜು ವತಿಯಿಂದ ಗುಂಡಲಗೇರಾ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಒಂದು ವಾರದ ವಿಶೇಷ ಶಿಬಿರದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾದ ಯಲ್ಲಪ್ಪ ಚಂದನಕೇರಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಶಿವುಕುಮಾರ್ ವಿವೇಕಿ, ಶಿಬಿರದ ಮಹತ್ವ ಮತ್ತು ಪ್ರಯೋಜನಗಳ ಕುರಿತು ಮಾತನಾಡಿದರು. ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಮಾತನಾಡಿ, ಸಂಸ್ಥೆಯು ಕಳೆದ 8 ವರ್ಷಗಳಿಂದ ಸಾಗಿ ಬಂದ ಸೇವಾ ಮಾರ್ಗದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ರುದ್ರಗೌಡ ಪಾಟೀಲ್ ಹಾಗೂ ಗ್ರಾಮದ ಪ್ರಮುಖರಾದ ಶಾಂತಗೌಡ ಕವಿತಾಳ್, ಚನ್ನಬಸಪ್ಪಗೌಡ, ಸಂಗಣ್ಣ ಕವಿತಾಳ್ ಇತರರು ಇದ್ದರು. ಎಸ್.ಎಂ. ಕಿರಣಗಿ ಸ್ವಾಗತಿಸಿದರು. ಸೋಮಶೇಖರ್ ಪಂಜಗಲ್ ನಿರೂಪಿಸಿದರು. ತಾರಾನಾಥ ಚವ್ಹಾಣ ವಂದಿಸಿದರು.
ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ
ಗುಲ್ಬರ್ಗ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಗುಲ್ಬರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಎಸ್‌ವಿಪಿ ಚೌಕ್‌ದಲ್ಲಿರುವ ಜಿಲ್ಲಾ ಕನ್ನಡ ಭವನದಲ್ಲಿ ಮಾ. 18ರಿಂದ 20ರವರೆಗೆ    ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಈ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಮಹಿಳಾ ಮಂಡಳಿಗಳು, ಸ್ವಯಂಸೇವಾ ಸಂಸ್ಥೆಗಳು, ಮಹಿಳಾ ಉದ್ದಿಮೆದಾರರು, ಸ್ತ್ರೀಶಕ್ತಿ ಸಂಘಗಳು, ಸ್ವಯಂಸೇವಾ ಸಂಸ್ಥೆಗಳು ಉಚಿತವಾಗಿ ಭಾಗವಹಿಸಬಹುದಾಗಿದೆ. ಪ್ರದರ್ಶನದಲ್ಲಿ ಮಹಿಳೆಯರಿಂದ ಉತ್ಪಾದಿಸಲ್ಪಟ್ಟ ಸಿದ್ಧ ಉಡುಪುಗಳು, ಕರಕುಶಲ ವಸ್ತುಗಳು, ಅಲಂಕಾರ ವಸ್ತುಗಳು, ಸೆಣಬಿನಿಂದ ತಯಾರಿಸಿದ ವಸ್ತುಗಳು, ತಿಂಡಿ ಪದಾರ್ಥಗಳು, ಉಲ್ಲನ್  ವಸ್ತುಗಳು, ಪೇಂಟಿಂಗ್, ಎಂಬೋಸಿಂಗ್, ಮೇಣದಬತ್ತಿ ತಯಾರಿಕೆ, ಟೆರ್ರಕೋಟಾ ವಸ್ತುಗಳು, ಸೀರೆ ಮಾರಾಟ, ಕಸೂತಿ ವಸ್ತುಗಳು, ಬಿದರಿನ ವಸ್ತುಗಳು, ಗೊಂಬೆಗಳು ಇತ್ಯಾದಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಅವಕಾಶವಿರುತ್ತದೆ. ಮಹಿಳಾ ಉದ್ಯಮಿದಾರರಿಗೆ ಶುಲ್ಕ ರಹಿತ ಮಳಿಗೆಗಳನ್ನು ನೀಡಲಾಗುವುದು. ಆಸಕ್ತ ಮಹಿಳೆಯರು ತಮ್ಮ ಉತ್ಪನ್ನ ಸರಕುಗಳೊಂದಿಗೆ ಮಾರ್ಚ್ 18ರಂದು ಬೆಳಗ್ಗೆ 10ಗಂಟೆಗೆ ಜಿಲ್ಲಾ ಕನ್ನಡ ಭವನದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.