ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಅಫಜಲ್ಪುರ: ಸುಮಾರು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದು, ಅಫಜಲ್ಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ. ಶನಿವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಸಿದ್ರಾಮಪ್ಪ ಶಿವಶಂಕರ ಗಣಾಚಾರಿ ಹಾಗೂ ಉಪಾಧ್ಯಕ್ಷರಾಗಿ ನಾಗಪ್ಪ ಭೀಮಶಾ ಆರೇಕರ ಆಯ್ಕೆಯಾಗಿದ್ದಾರೆ ಎಂದು ಚುನಾಚಣಾ ಅಧಿಕಾರಿ ತಹಸೀಲ್ದಾರ್ ಗೌಸುದ್ದಿನ್ ಹೇಳಿದರು. ಒಟ್ಟು 20 ಸದಸ್ಯ ಬಲದ ಪಪಂಗೆ ಕಳೆದ ವರ್ಷ ಮಾರ್ಚ್ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 14 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದೊಂದಿಗೆ ಗೆದ್ದು ಬಂದಿತ್ತಾದರೂ ಅಧಿಕಾರ ಚುಕ್ಕಾಣಿ ಹಿಡಿಯುವುದು ತಡವಾಯಿತು. ಕಾರಣ ಮೀಸಲಾತಿ ಪಟ್ಟಿ ಬಿಡುಗಡೆಗಾಗಿ ಇದುವರೆಗೂ ಕಾಯ್ದಿರಿಸಲಾಗಿದ್ದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿ ಪಟ್ಟಿ ಬಿಡುಗಡೆಗೊಂಡ ಮೇಲೆ ಪೂರ್ಣ ಬಹುಮತದೊಂದಿಗೆ ಬಿಜೆಪಿ ಪಕ್ಷ ಪಪಂ ಅಧಿಕಾರ ಗದ್ದುಗೆ ಹಿಡಿದಿದೆ. ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ತಲಾ 14 ಮತಗಳೊಂದಿಗೆ ಗೆದ್ದರೆ ಕಾಂಗ್ರೆಸ್ ಅಭ್ಯರ್ಥಿಗಳು ತಲಾ 5 ಮತಗಳನ್ನು ಗಳಿಸಿ ಸೋಲಬೇಕಾಯಿತು. ಮಾಜಿ ಶಾಸಕ ಎಂ.ವೈ. ಪಾಟೀಲ್, ಜಿಪಂ ಸದಸ್ಯರಾದ ಮತೀನ್ ಪಟೇಲ್, ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ತಾಲೂಕ ಬಿಜೆಪಿ ಅಧ್ಯಕ್ಷ ರಮೇಶ ನೀಲಗಾರ, ಮಲ್ಲಿಕಾರ್ಜುನ ನಿಂಗದಳ್ಳಿ ಮುಖಂಡರಾದ ಚನ್ನಬಸಯ್ಯ ಹಿರೇಮಠ, ಚಂದು ಕರ್ಜಗಿ, ಮಹಾದೇವ ಕಲಕೇರಿ, ಸಂಜು ನಿಂಬಾಳ ಹಾಗೂ ಪಪಂ ನೂತನ ಸದಸ್ಯರು ಇದ್ದರು.
ಮುಂಗಡ ಟಿಕೆಟ್; ಅವಧಿ ಹೆಚ್ಚಳ
ಶಹಾಬಾದ್: ನಗರದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮುಂಗಡ ಕಾಯ್ದಿರಿಸುವಿಕೆಯನ್ನು ದಿನದಲ್ಲಿ ಎರಡು ಬಾರಿ ಪ್ರಾರಂಭಿಸಿರುವುದನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ. ಕೇವಲ ಬೆಳಗ್ಗೆ ಮಾತ್ರ ತೆರೆದಿದ್ದ ಮುಂಗಡ ಕಾಯ್ದಿರಿಸುವಿಕೆಯನ್ನು ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಮಧ್ಯಾಹ್ನ ಕೂಡ ವಿಸ್ತರಿಸಿದ್ದರಿಂದ ಹೆಚ್ಚುವರಿ ಸಮಯದ ಲಾಭ ಸಾರ್ವಜನಿಕರಗೆ ಆಗಲಿದೆ. ಖರ್ಗೆಯವರ ಈ ಕಾರ್ಯವನ್ನು ಡಿಸಿಸಿ ಕಾರ್ಯದರ್ಶಿಗಳಾದ ಸಂತೋಷ ಕುಮಾರ ಇಂಗಿನಶೆಟ್ಟಿ, ವೀರಣ್ಣಗೌಡ ಪರಿಸರೆಡ್ಡಿ, ಬ್ಲಾಕ್ ಅಧ್ಯಕ್ಷ ಡಾ. ಎಂ.ಎ. ರಶೀದ, ಶರಣಗೌಡ ಪೊಲೀಸ್ ಪಾಟೀಲ, ರಾಜೇಶ ಯನಗುಂಟಿಕರ್ ಸ್ವಾಗತಿಸಿದ್ದು, ಬೇಡಿಕೆಗೆ ಸ್ಪಂದಿಸಿದಕ್ಕಾಗಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

