ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಶಹಾಬಾದ್: ಗ್ರಾಮದಲ್ಲಿ ವಾರದಿಂದ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕೆಲ ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕಳೆದ ಒಂದು ವಾರದಿಂದ ಗ್ರಾಮ ಪಂಚಾಯಿತಿ ಆಡಳಿತ ತೀವ್ರ ನಿರ್ಲಕ್ಷ್ಯ ವಹಿಸಿದ್ದು ಯಾವುದೇ ಕ್ರಮ ತೆಗೆದುಕೊಳ್ಳತ್ತಲ್ಲ ಎಂದು ಪ್ರತಿಭಟಿಸಿದರು.
ಗಣ್ಯರಾದ ಶಾಂತಕುಮಾರ, ಶರಣಪ್ಪ ಹಾಗೂ ಈರಣ್ಣ ಹಳ್ಳಿ ಕಾರ್ಗಿಲ್ ಮತ್ತು ಹತ್ತಾರು ಮಹಿಳೆಯರು ಬೆಳಗ್ಗೆ ಗ್ರಾಪಂ ಕಾರ್ಯಾಲಯಕ್ಕೆ ಹೋದರೆ ಅಲ್ಲಿ ಸದಸ್ಯರೂ ಇಲ್ಲ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೂ(ಪಿಡಿಒ) ಇಲ್ಲ. ಪಿಡಿಒ ಕಳೆದ ಒಂದು ತಿಂಗಳಿಂದ ಕಚೇರಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಗ್ರಾಮಸ್ಥರು ತಾಪಂ ಅಧಿಕಾರಿಗೆ ದೂರವಾಣಿ ಮೂಲಕ ದೂರು ದಾಖಲಿಸಿದ್ದಾರೆ. ಗ್ರಾಪಂ ಸದಸ್ಯರು ಯಾರೂ ಈ ವಿಷಯವನ್ನು ನನ್ನ ಗನಮನಕ್ಕೆ ತಂದಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ಪಿಡಿಒಗೆ ಸಾರ್ವಜನಿಕ ಕಿರಿಕಿರಿಯಂತೆ!: ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅವರ ಪತಿ ಭೀಮರಾವ ಸಿರಗೊಂಡ ಸಾರ್ವಜನಿಕರ ಕಿರಿಕಿರಿಗೆ ಪಿಡಿಒ ಕೆಲಸಕ್ಕೆ ಬರುತ್ತಿಲ್ಲ. ಅವರು ಸ್ವಯಂ ನಿವೃತ್ತಿ ಬಯಸಿದ್ದಾರೆ ಎಂದು ತಿಳಿಸಿದರು. ಫೆ.17ರಿಂದ ಇಲ್ಲಿಯವರೆಗೆ ಪಿಡಿಒ ತಮ್ಮ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಶಾಂತಕುಮಾರ ಸಾಹುಕಾರ, ಈರಣ್ಣ ಹಳ್ಳಿ ಕಾರ್ಗಿಲ್, ಶರಣಪ್ಪ, ಪುಷ್ಪಾ, ಮಹಾದೇವಿ, ಜ್ಯೋತಿ, ಇನ್ನಿತರ ಗ್ರಾಮಸ್ಥರು ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

