ಗುಲ್ಬರ್ಗಾ

ಒಬ್ಬ ವಿದ್ಯಾರ್ಥಿಗೆ 16 ಸಿಬ್ಬಂದಿ!

Published On :

ಚಿಂಚೋಳಿ: ಪಟ್ಟಣದ ಚಂದಾಪುರ ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಮಂಗಳವಾರ ನಡೆದ ಪಿಯು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ ಉರ್ದುಭಾಷೆಯ ಪರೀಕ್ಷೆಗೆ ಕೇವಲ ಒಬ್ಬ ವಿದ್ಯಾರ್ಥಿಗೆ 16 ಸಿಬ್ಬಂದಿಯನ್ನು ನೇಮಿಸಲಾಗಿತ್ತು.
ಪಿಯು ದ್ವಿತೀಯ ಉರ್ದು ಭಾಷೆಯ ಪರೀಕ್ಷೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮಹ್ಮದ್ ಮಶಿ ಮೈನೊದ್ದೀನ್ ಹಾಶ್ಮಿ ಮಂಗಳವಾರ ಪರೀಕ್ಷೆಗೆ ಏಕೈಕ ವಿದ್ಯಾರ್ಥಿ ಹಾಜರಾಗಿದ್ದನು. ಇತನ ಪರೀಕ್ಷೆಗೆ ಮುಖ್ಯ ಅಧಿಕ್ಷಕರು-1 ಸಹ- ಮುಖ್ಯ ಅಧಿಕ್ಷಕರು-1 ಉತ್ತರ ಪತ್ರಿಕೆ ನಿರೀಕ್ಷಕ-1 ಕೋಣೆ ಮೇಲ್ವಿಚಾಕರು-1 ಸಿಬ್ಬಂದಿ-3 ಜಾಗೃತ ದಳ-2 ವಿಶೇಷ ಜಾಗೃತ ದಳ ಸಿಬ್ಬಂದಿ-3 ಮತ್ತು ಪೊಲೀಸರು- 4 ಸೇರಿದಂತೆ ಒಟ್ಟು 16 ಜನ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ಪಿಯು ಪರೀಕ್ಷೆ ಮುಖ್ಯ ಅಧಿಕ್ಷಕ ಡಾ. ಶಿವರಾಜ ಕುಲ್ಕರ್ಣಿ ತಿಳಿಸಿದ್ದಾರೆ. ಜಾಗೃತ ದಳ ಸಿಬ್ಬಂದಿ ಎಸ್.ಬಿ. ರಾಠೋಡ ತಾಳಮಡಗಿ, ಬಸವರಾಜ ತಳವಾಡೆ ಬಸವಕಲ್ಯಾಣ ಸೋಮಶೇಖರ ಮುಧೋಳ, ಉಪನ್ಯಾಸಕ ಮಲ್ಲಿಕಾರ್ಜುನ ಪಾಲಾಮೂರ, ಶ್ರೀಶೈಲ್ ಹಾಜರಿದ್ದರು.

ನಗರ ಸಂಕೀರ್ತನೆ ನಾಳೆ
ಗುಲ್ಬರ್ಗ: ವಿಶ್ವ ಮಧ್ವ ಮಹಾಪರಿಷತ್ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯಡಿ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯು ಟಿಟಿಡಿ ದಾಸ ಸಾಹಿತ್ಯ ಸಹಯೋಗದಿಂದ 163ನೇ ನಗರ ಸಂಕೀರ್ತನೆಯನ್ನು ಮಾ.27 ರಂದು ಸಂಜೆ 4.30ಕ್ಕೆ ಮಹಾತ್ಮಾ ಬಸವೇಶ್ವರ ಕಾಲೋನಿಯ ರಾಘವೇಂದ್ರ ಸ್ವಾಮಿ ಮಠದ ಸತ್ಯಪ್ರಮೋದರ ವೃಂದಾವನ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.