ಮಹಿಳೆ ಸಬಲಳಾದ್ರೆ ಸದೃಢ ಸಮಾಜ
ಕ.ಪ್ರ. ವಾರ್ತೆ ಚಿತ್ತಾಪುರ ಮಾ.25
ಮಹಿಳೆಯು ಅಬಲೆಯಲ್ಲ ಸಬಲೆ. ಅವಳು ಸಬಲೆಯಾದಾಗ ಮಾತ್ರ ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದು ಫಾದರ್ ಜಾರ್ಜ್ ಲೋಬೊ ಹೇಳಿದರು.
ಅವರು ಪಟ್ಟಣದ ಬಾಹರಪೇಠದಲ್ಲಿಯ ಚೌರಯ್ಯ ಕಲಾಲ ಅವರ ತೋಟದಲ್ಲಿ ಮಹಿಳಾ ದಿನಾಚರಣೆ ಹಾಗೂ ಸ್ವಶಕ್ತಿ ಮಹಿಳಾ ಸಂಘಟನೆಯ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಯಾವುದೇ ಸೌಲಭ್ಯ ಪಡೆಯದೇ ಸ್ವಯಂ ಪ್ರೇರಿತರಾಗಿ ಹಣ ಸಂಗ್ರಹಿಸಿ ಬ್ಯಾಂಕ್ಗಳ ಸಹಾಯದಿಂದ ಸಾಲ ಪಡೆದು ಸ್ವಯಂ ಉದ್ಯೋಗ ಮಾಡುತ್ತಾ, ಸ್ವಸಹಾಯ ಸಂಘಗಳ ಮೂಲಕ ಸ್ವಾವಲಂಬಿಗಳಾಗಿರುವುದು ಸಂತಸದ ಸಂಗತಿ ಎಂದರು.
ಫಾದರ್ ಡೆನಿಸ್ ಮೆನೆಜಿಸ್ ಮಾತನಾಡಿ, ಕಳೆದ 15 ವರ್ಷಗಳ ಹಿಂದೆ ಸ್ಥಾಪಿತವಾದ ಇಲ್ಲಿನ 14 ಸಂಘಗಳಲ್ಲಿ ಒಟ್ಟು 222 ಮಹಿಳೆಯರು 20 ಲಕ್ಷಕ್ಕೂ ಹೆಚ್ಚಿನ ವ್ಯವಹಾರ ಮಾಡಿರುವುದು ದೊಡ್ಡ ಸಾಧನೆ ಎಂದು ಹೇಳಿದರು.
ಇದೇ ರೀತಿ ಮಹಿಳೆಯರು ಸ್ವಾವಲಂಬಿಗಳಾಗಲು ಸ್ವ ಸಹಾಯ ಗುಂಪುಗಳನ್ನು ರಚಿಸಿಕೋಂಡು ಸರ್ಕಾರ ಹಾಗೂ ಬ್ಯಾಂಕ್ಗಳಿಂದ ಸಿಗುವ ಸೌಲಭ್ಯವನ್ನು ಪಡೆದು ಸ್ವಯಂ ಉದ್ಯೋಗಿಗಳಾಗಿ ತಮ್ಮ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಿ ಮುಂದಿನ ಅವರ ಭವಿಷ್ಯ ರೂಪಿಸಬೇಕೆಂದು ಕಿವಿ ಮಾತು ಹೇಳಿದರು.
ವಿಶ್ವ ಜ್ಯೋತಿ ಶಿಕ್ಷಾ ಮತ್ತು ವಿವಿಧೋದ್ದೇಶ ಸೇವಾಭಿವೃದ್ಧಿ ಸಂಸ್ಥೆಯ ಸುನಂದಾ ಮಾತನಾಡಿದರು.
ಜಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಲ್ಲಪ್ಪ, ವಿಎಸ್ಎಸ್ಎನ್ ಚಿತ್ತಾಪುರದ ಕಾರ್ಯದರ್ಶಿ ಸಂತೋಷ ಸುಗಂದಿ ಧಾಮಯ್ಯ ಕಲಾಲ ವೇದಿಕೆಯಲ್ಲಿದ್ದರು. ಶನ್ನು ವರದಿ ವಾಚನ ಮಾಡಿ ಈ ಸಾಲಿನಲ್ಲಿ ಒಟ್ಟು ಉಳಿತಾಯ 603800, ಸ್ವ ಸಹಾಯ ಗುಂಪುಗಳ ಮೇಲಿನ ಸಾಲ 1060800, ಒಟ್ಟು ಲಾಭ 703815, ಬ್ಯಾಂಕ್ನಲ್ಲಿ ಇರುವ ನಗದು 213632, ಬ್ಯಾಂಕ್ ಸಾಲ 1998000, ಮತ್ತು ಬ್ಯಾಂಕ್ ಸಾಲದ ಬಾಕಿ 33211 ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು.
ಸ್ವ ಸಹಾಯ ಗುಂಪುಗಳ ಅಧ್ಯಕ್ಷರಾದ ಶಾರದಮ್ಮ ಕಲಾಲ, ಸಾವಿತ್ರಮ್ಮ ಕಲಾಲ, ವಿಜಯಬಾಯಿ ರಾಠೋಡ, ಚಿತ್ತಮ್ಮ, ಶೇಖಮ್ಮ ರಸ್ತಮ್ಮ, ಜಗದೇವಿ, ಈರಮ್ಮ, ದೌಲತಬಿ ಸೇರಿದಂತೆ ಸ್ವಸಹಾಯ ಗುಂಪುಗಳ ಮಹಿಳೆಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

