ಅಭ್ಯರ್ಥಿಗಳತ್ತ ಮತದಾರನ ವಕ್ರ ಃಕಖಿಆ
ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.30
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಯಾರೊಬ್ಬರೂ ತಮಗಿಷ್ಟವಿಲ್ಲ ಎಂಬ ಕಾರಣಕ್ಕಾಗಿ ಮತದಾರರು ತಮ್ಮ ಹಕ್ಕು ಚಲಾಯಿಸದೇ ದೂರ ಇರುವ ಅಗತ್ಯ ಇನ್ನು ಮುಂದೆ ಇಲ್ಲ.
ಏಕೆಂದರೆ- ಇದೇ ಮೊದಲ ಬಾರಿಗೆ ಮತದಾರರಿಗೆ ವಿದ್ಯುನ್ಮಾನ ಮತಯಂತ್ರಗಳಲ್ಲೇ ನಕಾರಾತ್ಮಕ ಮತದಾನಕ್ಕೆ ಅವಕಾಶ ದೊರಕಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡುಬಂದಲ್ಲಿ ಚುನಾವಣಾ ಆಯೋಗದ 49ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂದು ಮತದಾನ ಮಾಡಬಹುದು ಎಂಬ ಅವಕಾಶವನ್ನು ಆಯೋಗವೇ ಮತದಾರರಿಗೆ ನೀಡಿದೆ.
ಮೊಟ್ಟ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ, ಪೂರ್ಣ ಪ್ರಮಾಣದಲ್ಲಿ ನಕರಾತ್ಮಾಕ ಮತದಾನದ ಈ ಅವಕಾಶ ಬಳಕೆಯಾಗುತ್ತಿದೆ. ಮೇಲ್ಕಂಡವರಲ್ಲಿ ಯಾರೂ ಅಲ್ಲ, ಃ್ಟಟಿಜ ್ಟಜಿ ಝಿಜ ಆಛ್ಟಿಢಜ(ಃಕಖಿಆ) ಎಂದು ಮತದಾನ ಮಾಡಬಹುದು. ಇದು ಮತದಾರರಿಗೆ ಮೊಟ್ಟ ಮೊದಲ ಬಾರಿಗೆ ದಕ್ಕಿರುವ ಅವಕಾಶ, ವಿದ್ಯುನ್ಮಾನ ಮತಯಂತ್ರ(ಇವಿಎಂ) ಗಳಲ್ಲಿ ಪ್ರತ್ಯೇಕ ಬಟನ್ ಸಹ ಇದಕ್ಕಾಗಿ ಒದಗಿಸಲಾಗುತ್ತಿದೆ.
ನೋಟಾ... ಸುತ್ತಮುತ್ತ: ನೋಟಾ ಬಟನ್ ಅಳವಡಿಕೆ ಹಾಗೂ ಅದರ ಕಾರ್ಯನಿರ್ವಹಣೆ ಬಗ್ಗೆ ಈಗಾಗಲೇ ಆಯೋಗ ಸಿಬ್ಬಂದಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ವಿದ್ಯುನ್ಮಾನ ಯಂತ್ರದಲ್ಲಿ ಅಳವಡಿಸಲಾಗಿರುವ ಪ್ರತ್ಯೇಕ ಬಟನ್ ಒತ್ತಿದರೆ ಸಾಕು. ನಿಮ್ಮ ಮತ ಯಾರಿಗೂ ಚಲಾವಣೆಯಾಗುವುದಿಲ್ಲ.
ಕುತೂಹಲಕಾರಿ ವಿಚಾರವೆಂದರೆ- ಕರ್ನಾಟಕದಲ್ಲಿ ಕಳೆದ 2013ರ ಮೇ ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿಯೇ 49ಒ ನಿಯಮ ಬಳಕೆ ಮಾಡಲು ಮತದಾರರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅರ್ಜಿ ನಮೂನೆ ಗೊಂದಲದ ಕಾರಣ ಅನೇಕ ಮತದಾರರು ಇಷ್ಟವಿಲ್ಲದಿದ್ದರೂ ಕಡ್ಡಾಯ ಮತದಾನ ಮಾಡಬೇಕಾಯಿತು. ಈ ಬಾರಿ ಮತಯಂತ್ರದಲ್ಲೇ ನೋಟಾ ಬಟನ್ ಸೌಕರ್ಯ ಇರುವುದರಿಂದ ಮತದಾರರಿಗೆ ಈ ಹಕ್ಕು ಚಲಾವಣೆ ಸರಳವಾಗಲಿದೆ.
ಈ ಹಿಂದೆ 49ಒ ಅನ್ವಯ ನಿರ್ದಿಷ್ಟವಾದ ಅರ್ಜಿಯನ್ನು ಪಡೆದು ತಮಗೆ ಮತ ಹಾಕಲು ಇಷ್ಟವಿಲ್ಲ ಎಂಬುದನ್ನು ಭರ್ತಿ ಮಾಡಬೇಕಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಆಯೋಗ ವಿದ್ಯುನ್ಮಾನ ಯಂತ್ರದಲ್ಲಿಯೇ ನಕಾರಾತ್ಮಕ ಮತದಾನಕ್ಕೂ ಅವಕಾಶ ನೀಡಿದೆ.
ಕನ್ನಡದಲ್ಲೇ ನೋಟಾ ಬಟನ್: ಮೇಲ್ಕಂಡ ಯಾರಿಗೂ ಮತ ಹಾಕುವುದಿಲ್ಲ ಎಂದು ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಇಂಗ್ಲಿಷ್ ಹಾಗೂ ಸ್ಥಳೀಯ ಭಾಷೆ ಕನ್ನಡದಲ್ಲಿಯೂ ನಮೂದಾಗಿರುತ್ತದೆ. ಈ ಬಟನ್ ಮುಂದೆ ಃಕಖಿಆ ಎಂದು ಗುರುತು ಅಚ್ಚಾಗಿರುತ್ತದೆ.
ಅಸೆಂಬ್ಲಿಯಲ್ಲೇ ಚಲಾವಣೆಯಾಗಿತ್ತು: ಜಿಲ್ಲೆಯಲ್ಲಿ ನೋಟಾ ಅಧಿಕಾರ 2013ರ ಅಸೆಂಬ್ಲಿ ಚುನಾವಣೆಯಲ್ಲೇ ಚಲಾವಣೆಯಾಗಿತ್ತು. 13 ಅಸೆಂಬ್ಲಿ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ನಕರಾತ್ಮಕ ಮತದಾನ ದಾಖಲಾಗಿತ್ತು. ಪ್ರತ್ಯೇಕ ಅರ್ಜಿ ಪಡೆದು ನಕರಾತ್ಮಾಕ ಮತದಾನ ಮಾಡುವ ಪ್ರಕ್ರಿಯೆ ಇದ್ದಾಗಲೇ ಮೂರಂಕಿ ತಲುಪಿದ್ದ ನಕರಾತ್ಮಕ ಮತದಾನಕ್ಕೆ ಈ ಬಾರಿ ಇವಿಎಂನಲ್ಲೇ ಗುಂಡಿ ದೊರಕಿದ್ದರಿಂದ ಮತದಾರ ಅದ್ಹೇಗೆ ಸ್ಪಂದಿಸುತ್ತಾನೋ ಎಂಬುದೇ ಕೌತುಕದ ಸಂಗತಿ.
ನಕರಾತ್ಮಾಕ ಮತದಾನ ಹಕ್ಕಿನಿಂದಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬಹುದಾಗಿದ್ದು, ಪಕ್ಷಗಳು ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಒತ್ತಡ ಉಂಟಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಮೊದಲೇ ಸಿನಿಕನಾಗಿರುವ ಮತದಾರ ನಕರಾತ್ಮಾಕ ಮತದಾನದ ಅವಕಾಶದತ್ತಲೇ ಹೆಚ್ಚು ವಾಲಿದರೆ... ಎಂಬ ಕಳವಳವೂ ತಳ್ಳಿಹಾಕುವಂತಿಲ್ಲ.
ನೋಟಾ ಪ್ರಚಾರ ಖಂಡಿತ ಮಾಡ್ತೀವಿ
ಮತದಾನದ ಪ್ರಮಾಣ ಹೆಚ್ಚಿಸುವ ದಿಶೆಯಲ್ಲಿ ಜಾಗೃತಿ ಜಾಥಾಗಳನ್ನು ನಡೆಸುತ್ತಿರುವ ಚುನಾವಣಾ ಆಯೋಗ ನೋಟಾ ಹಕ್ಕು ವಿಚಾರದಲ್ಲಿಯೂ ಮತದಾರರ ಜಾಗೃತಿಗೆ ಮುಂದಾಗಲಿದೆ. ಅಭ್ಯರ್ಥಿಗಳ ಚಿತ್ರಣ ಸಿಕ್ಕಿದೆ. ಬ್ಯಾಲಟ್ ಪೇಪರ್ ಅಚ್ಚಾಗುತ್ತವೆ. ಅದರಲ್ಲೇ ನೋಟಾ ಆಯ್ಕೆಯೂ ಇರುತ್ತದೆ. ಮಾದರಿ ಮತಯಂತ್ರಗಳಲ್ಲಿ, ಮತಪತ್ರಗಳಲ್ಲಿಯೂ ಈ ಆಯ್ಕೆ ಢಾಳಾಗಿ ನಮೂದಾಗಿರುತವಂತೆ ಕ್ರಮ ಕೈಗೊಳ್ಳುತ್ತೇವೆ. ನೋಟಾ ಹಕ್ಕು ಚಲಾವಣೆ ಮತದಾರನಿಗೆ ಬಿಟ್ಟ ವಿಚಾರ. ಅದರ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

