ಗ್ರಾಮೀಣರಿಂದ ಜನಪದ ಕಲೆ ಸಂಸ್ಕೃತಿ ರಕ್ಷಣೆ: ಶ್ಲಾಘನೆ
ಗುಲ್ಬರ್ಗ: ಗ್ರಾಮೀಣ ಸೊಗಡಿನ ಜಾನಪದ ಕಲೆಗಳು ನಶಿಸುವ ಹಂತಕ್ಕೆ ತಲುಪುತ್ತಿರುವ ಸಂದರ್ಭದಲ್ಲಿ ಜನಪದ ಕಲೆ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ಸಂಗತಿ ಎಂದು ಶರಣಬಸಪ್ಪಾ ಮಾಲಿಪಾಟೀಲ ಅಭಿಪ್ರಾಯ ಪಟ್ಟರು. ಅವರು ಬಸವೇಶ್ವರ ಜಾನಪದ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಸವನ ಸಂಗೋಳಗಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಠ್ಠಲರಾವ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ. ಸದಸ್ಯ ಶಿವಶಾಂತಪ್ಪಾ ಪಾಟೀಲ, ಶರಣಬಸಪ್ಪಾ ಮುಖ್ಯ ಅತಿಥಿಗಳಾಗಿದ್ದರು. ಕಲಾ ವೈಭವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಡೊಳ್ಳು ಕಲಾ ತಂಡದವರಿಂದ ಡೊಳ್ಳು ಕುಣಿತ, ವಿಲಾಸ ಜಮಾದಾರ ದೇಗಾಂವ ತಂಡದವರಿಂದ ಗೀ ಗೀ ಪದ, ಶಾಂತಾಬಾಯಿ, ಶ್ರೀದೇವಿ ಬಟಗೇರಿ ತಂಡದವರಿಂದ ಸಂಪ್ರದಾಯ ಹಾಡು, ವಿಠ್ಠಲರಾವ, ಶಿವಶರಣಪ್ಪಾ ಬಿರೇದಾರ ತಂಡದವರಿಂದ ಹಂತಿ ಪದ, ಶಿವರುದ್ರಪ್ಪಾ, ಬಸವರಾಜ, ವಿಠ್ಠಲರಾವ ಜಮಾದಾರರಿಂದ ಜಾನಪದ ಗೀತೆ ಮುಂತಾದ ಕಾರ್ಯಕ್ರಮಗಳು ನಡೆದವು. ಅದೇ ಸಂದರ್ಭದಲ್ಲಿ ಹಿರಿಯ ಕಲಾವಿದರಿಗೆ, ಕಲಾ ಸಾಹಿತಿಗಳಿಗೆ ಸನ್ಮಾನಿಸಲಾಯಿತು.
ಬಡ ಯುವತಿಯ ವಿವಾಹಕ್ಕಾಗಿ ಹಣ ಸಹಾಯ
ಸುರಪುರ: ಇಲ್ಲಿಯ ಹೈದರ ಅಲಿ ಸೇವಾ ಸಂಘವು ಮುಸ್ಲಿಂ ಸಮಾಜದ ಯುವತಿಯೊಬ್ಬಳ ಮದುವೆಗಾಗಿ ಹಣ ಸಂಗ್ರಹಿಸಿ ನೆರವು ನೀಡಿದೆ. ಪಟ್ಟಣದ ಎಸ್.ಎಸ್. ಮಶಾಕ್ ಎಂಬುವರ ಮದುವೆಯು ಇಂದು ಬುಧವಾರ ನಿಗದಿಯಾಗಿದೆ. ಯುವತಿಗೆ ತಂದೆಯಿಲ್ಲ. ತಾಯಿಯೇ ಸಂಸಾರ ನಿರ್ವಹಿಸುತ್ತಾಳೆ. ತೀರಾ ಬಡ ಕುಟುಂಬ ಇವರದು. ಇದನ್ನ ಅರಿತ ಸೇವಾ ಸಂಘವು ಸಂಘದ ವತಿಯಿಂದ 9,021 ರೂ ನಗದು ಮತ್ತು 75 ಕೆಜಿ ಅಕ್ಕಿ ಸಂಗ್ರಹಿಸಿ ವಧುವಿನ ತಾಯಿ ಜುಬೇದಾಬೇಗಂ ಅವರಿಗೆ ನೀಡಲಾಗಿದೆ. ಸಂಘದ ಅಧ್ಯಕ್ಷ ಸಖಾವತ್ ಹುಸೇನ್ ತಬೀಬ್, ಮಹ್ಮದ ನಿಜಾಮುದ್ದೀನ್ ತೀರಂದಾಜ್ ಶಾಹಿ ಇಮಾಮ್, ಅನಿಲಕುಮಾರ ಖಂಡಾರೆ, ಇಮಾಮ್ ಅಲಿ, ಮಹ್ಮದ ತಾಯರ್ ಹುಸೇನ್, ಸರಮಸ್ತಖಾನ ಇದ್ದರು.
ಗ್ರಾಪಂ ನೂತನ ಅಧ್ಯಕ್ಷರಾಗಿ ಗುಡಿಮಠ ಆಯ್ಕೆ
ಯಾದಗಿರಿ: ಗುರುಸುಣಿಗಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಸಿದ್ದಬಸ್ಸಯ್ಯಸ್ವಾಮಿ ಗುಡಿಮಠ ಆಯ್ಕೆಯಾದರು. ಅಧ್ಯಕ್ಷರ ಸ್ಥಾನ ತೆರವಾದ ನಿಮಿತ್ತ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸಿದ್ದಬಸ್ಸಯ್ಯಸ್ವಾಮಿ ಮತ್ತು ಶರಣಬಸ್ಸಪ್ಪ ಬಬಲಾದ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಒಟ್ಟು 16 ಜನ ಸದಸ್ಯರಲ್ಲಿ ಸಿದ್ದಬಸ್ಸಯ್ಯು ಸ್ವಾಮಿಗೆ 13 ಜನ ಮತ ನೀಡಿದರು. ಶಹಾಪುರ ತಹಸೀಲ್ದಾರ್ ಡಿ.ವೈ. ಪಾಟೀಲ್ ಚುನಾವಣೆಧಿಕಾರಿಗಳಾಗಿದ್ದರು. ವಿಜಯೋತ್ಸವ: ಗುರುಸುಣಿಗಿ ಗ್ರಾಮದಲ್ಲಿ ಸಿದ್ದಬಸ್ಸಯ್ಯ ಸ್ವಾಮಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಗ್ರಾಮ ಪಂಚಾಯ್ತಿ ಸದಸ್ಯರು ಸಿಹಿಹಂಚಿ ಸಂಭ್ರಮಿಸಿದರು. ಸಿದ್ದಬಸ್ಸಯ್ಯ ಸ್ವಾಮಿ ಗ್ರಾಪಂ ಅಧ್ಯಕ್ಷರಾಗಿದ್ದಕ್ಕೆ ತಾಪಂ ಸದಸ್ಯ ಶರಣಭೂಪಾಲರೆಡ್ಡಿ, ವೀರಭದ್ರಪ್ಪಗೌಡ ಮಾಲಿಪಾಟೀಲ್, ಸಿದ್ದಣ್ಣಗೌಡ ಶಾಂತವೀರ, ವಿಶ್ವನಾಥರೆಡ್ಡಿ ಶಾಂತವೀರ, ಮಲ್ಲಿಕಾರ್ಜುನಸ್ವಾಮಿ ಹೊಸಮಠ, ಬಸ್ಸಯ್ಯಸ್ವಾಮಿ ಗುಡಿಮಠ, ಶರಣಗೌಡ ಹಿರೇಗೌಡ, ಭೀಮಣ್ಣಗೌಡ ಶೇಖರೆಡ್ಡಿ, ಶರಣಗೌಡ ಬಟಗೇರಿ, ಜಲಾಲುದ್ದೀನ್ ನಾಲವಾರ, ಶರಣು ಹಿರೇಗೌಡ ನಾಯ್ಕಲ್, ಹುಲಿಯಪ್ಪ ಸೇರಿದಂತೆ ಅನೇಕರು ನೂತನ ಗ್ರಾಪಂ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

