ಗುಲ್ಬರ್ಗಾ

ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ: ಸಿದ್ದಲಿಂಗ ಶ್ರೀ

Published On :

ಯಾದಗಿರಿ: ಮಾನವನು ಮೋಕ್ಷವನ್ನು ಪಡೆಯಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಪಶ್ಚಿಮಾದ್ರಿ ಮಠ ನೇರಳಗಂಬ  ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಶಹಾಪುರ ತಾಲೂಕಿನ ಕೋಢಾಲ ಗ್ರಾಮದ ಕೃಷ್ಣಾ ನದಿಯ ಮಧ್ಯಭಾಗದಲ್ಲಿರುವ ಗಡ್ಡೆ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿಯ ಅಂಗವಾಗಿ ಲಕ್ಷ ಬಿಲ್ವಾರ್ಚನೆ ಮತ್ತು ನಂದಿ ವಿಗ್ರಹದ ಪ್ರತಿಸ್ಥಾಪನೆಯನ್ನು ಮಾಡಿ ಆಶೀರ್ವಚನ ನೀಡಿದರು. ಮಠ- ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವುದರಿಂದ ಸಂಸಾರವೆಂಬ ಸಾಗರದಲ್ಲಿದ್ದ ನೋವುಗಳನ್ನು ಮರೆತು ಶಾಂತಿ ಹಾಗೂ ನೆಮ್ಮದಿಯನ್ನು ಪಡೆಯಲು ಸಾಧ್ಯ ಎಂದರು. ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾದೀಶ್ವರ ಜಗದ್ಗುರು ಸಂಗನಬಸವ ಸ್ವಾಮೀಜಿ ಮಾತನಾಡಿ, ಸಕಲ ಪ್ರಾಣಿಗಳಲ್ಲಿಯೇ ಮಾನವ ಎಂಬ ಪ್ರಾಣಿ ಸಮಾಜದಲ್ಲಿ ಬಹಳ ಶ್ರೇಷ್ಠ ಸ್ಥಾನವನ್ನು ಪಡೆದಿದೆ. ಆದರೆ ಇಂದು ಆಧುನಿಕ ಜೀವನದ ಶೈಲಿಗೆ ಮಾರು ಹೋಗಿ ನೆಮ್ಮದಿಯನ್ನು ಕಳೆದುಕೊಂಡು ಚಡಪಡಿಸುತ್ತಿದ್ದಾನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ದೇಶಿಕಮಠದ ಶರಣಬಸವೇಶ್ವರ ದೇವರು, ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.


ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ


ಗುರುಮಠಕಲ್: ಕಳೆದ ಮಾ. 12ರಂದು ಗುರುಮಠಕಲ್ ಪಟ್ಟಣ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾದ ರೇಣುಕಾ ಸಂಜೀವಕುಮಾರ ಚಂದಾಪೂರ, ಉಪಾಧ್ಯಕ್ಷರಾಗಿ ಆಯ್ಕೆಯಾದ ಚಿನ್ನ ಬಾಲಪ್ಪ ನಿರೇಟಿಯವರು ಬಸವ ಜಯಂತಿಯ ಹಿನ್ನೆಲೆಯಲ್ಲಿ ಶುಕ್ರವಾರ ಸ್ವೀಕಾರ ಮಾಡಿದರು. ಕಾರ್ಯಾಲಯದಲ್ಲಿ ಪೂಜೆ ನೆರವೇರಿಸಿ ಅಧಿಕಾರ ಸ್ವೀಕರಿಸಿದ ರೇಣುಕ ಅವರು ಮಾತನಾಡುತ್ತ, ಗುರುಮಠಕಲ್ ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯಗಳು ಹಾಗೂ ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು. ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ಪ್ರಭಾರಿ ಮುಖ್ಯಾಧಿಕಾರಿಗಳಾದ ಮಾರಲಿಂಗಪ್ಪ ಅವರು ಅಧ್ಯಕ್ಷ, ಉಪಾಧ್ಯಕ್ಷರಿಗೆ ಸ್ವಾಗತಿಸಿದರು. ಸದಸ್ಯರಾದ  ರವೀಂದ್ರ ರಡ್ಡಿ, ಅಖ್ತರ್ ಪ್ಯಾರೆ, ಕೆ. ದೇವದಾಸ, ಚಾಂದ್ ಪಾಶಾ  ಹಾಗೂ ಪ್ರಮುಖರಾದ ರಘುನಾಥ ರಡ್ಡಿ  ನಜರಪೂರ, ನರಸಿಂಹುಲು, ಭೀಮಶಪ್ಪ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.