ಗುಲ್ಬರ್ಗಾ

ವೀರಶೈವ ಪದಬಳಕೆಯಿಂದ ಲಿಂಗಾಯತ ಧರ್ಮ ನಾಶ

Published On :

ಯಾದಗಿರಿ: ವೀರಶೈವ ಪದಬಳಕೆಯನ್ನು ಮಾಡುವ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಮತ್ತು ಲಿಂಗಾಯತ ಧರ್ಮದ ತತ್ವಗಳನ್ನು ನಾಶ ಮಾಡುವ ಹುನ್ನಾರ ಸೂಕ್ಷ್ಮವಾಗಿ ನಡೆದಿದೆ ಎಂದು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಆಪಾದಿಸಿದರು. ತಾಲೂಕಿನ ಬಾದ್ಯಾಪುರ ಗ್ರಾಮದ ಬಸವಣ್ಣನವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ, ಇಂದಿನ ಲಿಂಗಾಯತರು ಅಂದರೆ ಹಿಂದಿನ ತಳವರ್ಗದ ಸಮುದಾಯ. ಎಲ್ಲಾ ಜಾತಿ ಜನಾಂಗಳನ್ನು ಕುಲಗೆಡಿಸಿ ಬಸವಣ್ಣನವರು 12ನೇ ಶತಮಾನದಲ್ಲಿ ಮಹತ್ವವಾದ ಮಾರ್ಗವನ್ನು ಕಂಡು ಹಿಡಿದರು. ಜಾತಿಭೇದಗಳನ್ನು ಮಾಡದ, ಹೆಣ್ಣು ಗಂಡು ಎಂಬ ತರತಮಭಾವಗಳನ್ನು ಎಣಿಸದ, ಬಡವ ಬಲ್ಲಿದರೆಂಬ ತಾರತಮ್ಯ ಮಾಡದೆ ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಜನ ಸಮುದಾಯವನ್ನು ಕಾಯಕ ಹಾಗೂ ದಾಸೋಹ ತತ್ವಗಳ ಮೂಲಕ ಕಟ್ಟಿದರು ಎಂದು ಅಭಿಪ್ರಾಯಪಟ್ಟರು. ಸಮಾರಂಭ ಉದ್ಘಾಟಿಸಿದ ಲಿಂಗಾಯತ ಸಮಾಜದ ಮುಖಂಡ ಸುರೇಶ ಸಜ್ಜನ್, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಕ್ಯಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಹಾಪುರ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ಕಡ್ಲೆಪ್ಪರವರ ವ್ಮಠದ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಿ, ಆರ್ಶೀವಚನ ನೀಡಿದರು. ತಾಪಂ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಶಿವಣ್ಣ ಇಜೇರಿ, ಲಕ್ಷ್ಮೀಕಾಂತ ಗೋನಾಲ ಮೊದಲಾದವರು ಮಾತನಾಡಿದರು. ಗ್ರಾಮದ ಪ್ರಮುಖರಾದ ಶಂಭುಲಿಂಗಪ್ಪ ಎತ್ತಿನಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಹುಬ್ಬಳ್ಳಿ ನಿರೂಪಿಸಿದರು. ಶಿವಶರಣಪ್ಪ ಎತ್ತಿನಮನಿ ಸ್ವಾಗತಿಸಿದರು. ಮಹೇಶ ಎತ್ತಿನಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.