ಗುಲ್ಬರ್ಗಾ

ಸರ್ಕಾರಿ ಕಾಲೇಜಲ್ಲಿ ಅರಳಿದ ಪ್ರತಿಭೆ

Published On :

ಗುರುಮಠಕಲ್: ಸಾಧನೆಗೆ ಛಲವೊಂದಿದ್ದರೆ ಸಾಕಾಗುತ್ತದೆ. ಅದನ್ನು ಬಿಟ್ಟು ಬಡತನ ಎನ್ನುವ ಯಾವುದೇ ಶಬ್ದ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಗುರುಮಠಕಲ್ ತಾಲೂಕಿನ ಗ್ರಾಮೀಣ ಭಾಗದ ಶಾರದ ಬಸಯ್ಯ ಕಲಾಲ್ ಪ್ರತ್ಯಕ್ಷ ಸಾಕ್ಷಿ.
  ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಗುರುಮಠಕಲ್‌ನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಶಾರದ 600ಕ್ಕೆ 545 ಅಂಕಗಳನ್ನು ಪಡೆದು ಶೇ. 91ರಷ್ಟು ಫಲಿತಾಂಶವನ್ನು ಪಡೆದು ಗುರುಮಠಕಲ್ ಪಟ್ಟಣಕ್ಕೆ ಪ್ರಥಮ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಬಡತನದಲ್ಲಿ ಅರಳಿದ ಕಮಲ: ಶಾರದ ತಂದೆ ಬಸಯ್ಯ ಕಲಾಲ್ ಶ್ರೀಮಂತರಲ್ಲ. ಇರುವುದರಲ್ಲಿಯೇ ಜೀವನ ಸಾಗಿಸುವ ಬಡ ಕುಟುಂಬ ಇವರದ್ದು, ಅದರೂ ಕೂಡ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವಿದ್ಯಾಭ್ಯಾಸ ಕೊಡಿಸುವ ಕೆಲಸವನ್ನು ಮಾಡಿದ್ದಾರೆ. ಬಸಯ್ಯ ಪಟ್ಟ ಕಷ್ಟಕ್ಕೆ ಇದೀಗ ಪ್ರತಿಫಲ ದೊರೆತು ಕೆಸರಿನಲ್ಲಿ ಕಮಲ ಅರಳಿದಂತೆ ಬಡತನದ ಮಧ್ಯೆ ಶಾರದ ಸಾಧನೆ ಮಾಡಿ ಎಲ್ಲರಿಗೆ ಸ್ಫೂರ್ತಿಯಾಗಿದ್ದಾಳೆ.
ಕೆಎಎಸ್ ಅಧಿಕಾರಿ ಆಗುವಾಸೆ: ಗ್ರಾಮೀಣ ಭಾಗದಲ್ಲಿದ್ದು ಗ್ರಾಮೀಣ ಭಾಗದ ಜನತೆ ಅನುಭವಿಸುತ್ತಿರುವ ಕಷ್ಟಗಳ ನಿವಾರಣೆ ಮಾಡುವ ಉದ್ದೇಶ ಹೊಂದಿರುವ ಶಾರದ ಈಗ ಕೆಎಎಸ್ ಆಗುವ ಕನಸು ಕಾಣುತ್ತಿದ್ದಾಳೆ. ಅದನ್ನು ಪೂರೈಸುವ ಸಂಬಂಧವಾಗಿ ನಾನು ಇನ್ನಷ್ಟು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನಾನು ಕೆಎಎಸ್ ಅಗುತ್ತೇನೆ ಎನ್ನುತ್ತಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.