ಸೋಲಿನ ಹತಾಶೆಯಲ್ಲಿ ವೃಥಾರೋಪ ಸರಿಯಲ್ಲ
ಕ.ಪ್ರ. ವಾರ್ತೆ ್ಣ ಆಳಂದ ್ಣ ಮೇ 12
ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಸೋಲಿನ ಹತಾಶೆಯಿಂದ ಮಾಹಿತಿಯಿಲ್ಲದೆ ನಮ್ಮ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಶಾಸಕ ಬಿ.ಆರ್. ಪಾಟೀಲ್ ಗುಡುಗಿದರು.
ಪಟ್ಟಣದಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮಂಜೂರಾದ ಕಾಮಗಾರಿಗಳಿಗೆ ಅಡ್ಡಿಪಡಿಸಿದ್ದಾರೆ. ಮೂರು ಬಾರಿ ಶಾಸಕರಾಗಿ ಕೆಲಸ ಮಾಡಿದರೂ ಗುತ್ತೇದಾರರಿಗೆ ಯಾವುದೇ ಕಾಮಗಾರಿಯ ಹೆಸರು ಗೊತ್ತಿಲ್ಲ. ಮಾಹಿತಿಯೇ ಇಲ್ಲದೆ ಮಾತನಾಡುವುದು ಶೋಭೆ ತರದು. ಅವರು ಸೋಲಿನ ಹತಾಶೆಯಿಂದ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಭಿಕ್ಷೆ ಬೇಡುವ ಸ್ವಭಾವ ನನ್ನದಲ್ಲ: ಅವರಿಗೆ ಜೀವನದಲ್ಲಿ ಹೋರಾಟ ಮಾಡಿದ್ದು ಗೊತ್ತಿಲ್ಲ. ನನಗೆ ಅಧಿಕಾರ ಸಿಕ್ಕಾಗ ಆಡಳಿತ ನಡೆಸುವುದು ಗೊತ್ತಿದೆ. ಸರ್ಕಾರಕ್ಕೆ ಮಣಿಸುವುದು ಗೊತ್ತು, ಆದರೆ ಭಿಕ್ಷೆ ಬೇಡುವುದು ನನ್ನ ಸ್ವಭಾವ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಹಿಂದೆ ಡಿಸಿ ಕಚೇರಿ ಮುಂದೆ ಹೋರಾಟದ ಫಲವಾಗಿ ಕೆರೆಗಳಿಗೆ 2 ಕೋಟಿ ಬಿಡುಗಡೆಯಾಗಿದೆ. ಆಲಿಕಲ್ಲು ಮಳೆಬಿದ್ದು ರೈತರ ಸಂಕಷ್ಟದಲ್ಲಿದ್ದಾರೆಂದು ಮತ್ತೆ ಹೋರಾಡಿದಾಗ ಸರ್ಕಾರ ಎಚ್ಚೆತ್ತು ಜಿಲ್ಲೆಯ ಅಧಿಕಾರಿಗಳ ಮತ್ತು ಕೇಂದ್ರ ತಂಡದಿಂದ ಸಮೀಕ್ಷೆ ನಡೆದು ಪರಿಹಾರ ನೀಡುವ ಹಂತಕ್ಕೆ ಬಂದಿದೆ ಎಂದರು.
ನೀತಿ ಸಂಹಿತೆ ನೆಪ: ಕಳೆದ ಫೆ.11ರಂದು ತಾಲೂಕು ಮಟ್ಟದ ಮತ್ತು ಗ್ರಾಪಂ ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆ ಕುರಿತು ಮಾಹಿತಿ ಕಲೆ ಹಾಕಿ ಕ್ರಿಯಾಯೋಜನೆ ರೂಪಿಸಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ನೆಪ ಮಾಡಿರುವ ಮೇಲ್ಮಟ್ಟದ ಮತ್ತು ಕೆಳಮಟ್ಟದ ಅಧಿಕಾರಿಗಳು ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹರಿಹಾಯ್ದರು.
ಮಾ.5ರಿಂದ ಆರಂಭಗೊಂಡ ನೀತಿ ಸಂಹಿತೆ ಮೇ 28ರವರೆಗೆ ಜಾರಿಯಲ್ಲಿರುವ ಕಾರಣ ಶಾಸಕನಾಗಿ ನನಗೆ ಸಭೆ ನಡೆಸಲು ಬಾರದಿದ್ದಕ್ಕೆ ಅನಿವಾರ್ಯವಾಗಿ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ಕೈಗೊಂಡು ತಾಲೂಕಿಗಾಗಿ ನ್ಯಾಯ ಕೇಳಿದ್ದೇನೆ, ಇದು ತಪ್ಪೇ ಎಂದು ಗುತ್ತೇದಾರರಿಗೆ ಪ್ರಶ್ನಿಸಿದರು. ಪ್ರತಿಭಟನೆ ದಿನವೇ ಜಿಪಂ ಸಿಇಒ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನೀರಿಗಾಗಿ ಅನುದಾನ: ನೀರಿಗಾಗಿ 40 ಲಕ್ಷ ಬಿಡುಗಡೆಯಾಗಿದೆ. ಇನ್ನೂ 70 ಲಕ್ಷ ಬೇಕಾಗುತ್ತದೆ ಎಂದು ಡಿಸಿಗೆ ಮತ್ತು ಸಂಬಂಧಿತ ಸಚಿವ ಎಚ್.ಕೆ. ಪಾಟೀಲರ ಗಮನಕ್ಕೆ ತಂದಾಗ ಹಣ ಕೊಡಲು ಒಪ್ಪಿದ್ದಾರೆಂದು ಶಾಸಕರು ಹೇಳಿದರು. ಈಗಾಗಲೇ ನೀರಿನ ಸಮಸ್ಯೆಯುಳ್ಳ 25 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತದೆ. 47 ಬೋರ್ವೆಲ್ಗಳಿಗೆ ಬೇಡಿಕೆಯಿದೆ. ಅದರಲ್ಲಿ 8 ಬೋರವೆಲ್ ಕೊರೆಯಲಾಗಿದೆ. ಹೋರಾಟದಿಂದಾಗಿ ಅಧಿಕಾರಿಗಳು ಈಗ ನೀತಿಸಂಹಿತೆ ಇನ್ನಿತರ ನೆಪ್ಪ ಹೇಳುತ್ತಿಲ್ಲ ಎಂದು ತಿಳಿಸಿದರು.
ಇದೇನಾ ಜನಪರ ಕಾಳಜಿ?: ಜನಪರ ಕಾಳಜಿ ಹೊಂದಿದವರಾಗಿದ್ದರೆ, ನಮ್ಮ ಗ್ರಾಮ ನಮ್ಮ ರಸ್ತೆ 12.50 ಕೋಟಿಗೆ 6 ಗ್ರಾಮದ ಕಾಮಗಾರಿ ಗುತ್ತಿಗೆ ಪಡೆದಿರುವ ಮಾಜಿ ಶಾಸಕ ಗುತ್ತೇದಾರ ಸಹೋದರ ಕುಪೇಂದ್ರ ಗುತ್ತೇದಾರ ಇನ್ನೂ 5 ಕಾಮಗಾರಿಯನ್ನೇ ಆರಂಭಿಸಿಲ್ಲ. ಈ ಕುರಿತು ಯಾಕೆ ಮಾತನಾಡುತ್ತಿಲ್ಲ. ಸೋತ ಮೇಲೆ ರಾಜಕೀಯವಾಗಿ ಮೂಲೆಗುಂಪಾಗುತ್ತಿದ್ದಾರೆ. ಏನಾದರೂ ಮಾಡಿ ಜನರಿಗೆ ಮರಳು ಮಾಡಲು ಹೇಳಿಕೆ ನೀಡುತ್ತಿದ್ದಾರೆಂದು ಆಕ್ಷೇಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

