ಗುಲ್ಬರ್ಗಾ

ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ 23ಕ್ಕೆ

Published On :

ಜೇವರ್ಗಿ: ತಾಲೂಕಿನ ಯಡ್ರಾಮಿಗೆ ಸಮೀಪವಿರುವ ಸುಂಬಡ ಗ್ರಾಮದ ಬಳಿ ನಿರ್ಮಿಸಿದ ಕಡಕೋಳ ಮಡಿವಾಳೇಶ್ವರ ಜ್ಞಾನಯೋಗಾಶ್ರವುದ ನೂತನ ಕಟ್ಟಡದ ಉದ್ಘಾಟನೆ ಅಂಗವಾಗಿ ಮೇ 23ರಂದು ಸಾಯಂಕಾಲ 4 ಗಂಟೆಗೆ ರಂಭಾಪುರಿ ಹಾಗೂ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಲಾಗುವುದೆಂದು ಕಡಕೋಳ ಮಡಿವಾಳೇಶ್ವರ ಮಠದ ಪೀಠಾಧಿಪತಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮಗಳ ವಿವರ ನೀಡಿದರು. ಮಡಿವಾಳೇಶ್ವರರ ಜ್ಞಾನಯೋಗಾಶ್ರವುದ ಉದ್ಘಾಟನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೇ 8ರಿಂದ 22ರ ವರೆಗೆ ನಿತ್ಯ ಸಾಯಂಕಾಲ 7ಕ್ಕೆ ಮಡಿವಾಳೇಶ್ವರರ ಪುರಾಣ ಕಾರ್ಯಕ್ರಮ ನಡೆಯಲಿದೆ. ಗಡಿಗೌಡಗಾಂವದ ಶಾಂತವೀರ ಶಿವಾಷಾರ್ಯರು ಪುರಾಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅಯ್ಯಾಚಾರ, ದೀಕ್ಷೆ: ಮೇ 22ರಂದು ಗುರುವಾರ ಬೆ.8ಕ್ಕೆ ಜಂಗಮ ಮಹೇಶ್ವರರಿಗೆ ಅಯ್ಯಾಚಾರ ದೀಕ್ಷೆ ನಡೆಯಲಿದೆ. ಬೆ.9.30ಕ್ಕೆ 251 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ. ಸಾಯಂಕಾಲ 7.30ಕ್ಕೆ ಪುರಾಣ ಮಂಗಲ ಕಾರ್ಯಕ್ರಮ ಜರುಗಲಿದೆ. ಅಚಲೇರಿಯ ಷಡಕ್ಷರಿ ಶಿವಯೋಗಿ ಬಸವರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪುರಾಣ ಮಂಗಲದಲ್ಲಿ ನಾಡಿನ ಮಠಾಧೀಶರುಗಳು, ರಾಜಕೀಯ ಮುಖಂಡರು, ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ.
ಅಡ್ಡಪಲ್ಲಕ್ಕಿ ಉತ್ಸವ: ಮೇ 23ರಂದು ಶುಕ್ರವಾರ ಸಂಜೆ 4ಕ್ಕೆ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರು ಹಾಗೂ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡಿಪಲ್ಲಕ್ಕಿ ಉತ್ಸವ ಸುಂಬಡ ಗ್ರಾಮದ ಹೊನ್ನದುಬಲಾಂಬಿಕಾ ದೇವಸ್ಥಾನದಿಂದ ಆರಂಭಗೊಂಡು ಗ್ರಾಮದ ಮುಖ್ಯರಸ್ತೆಯ ಮುಖಾಂತರ ಯಡ್ರಾಮಿ ರಸ್ತೆಯ ಮಧ್ಯೆದಲ್ಲಿರುವ ಜ್ಞಾನಯೋಗಾಶ್ರವುಕ್ಕೆ ತಲುಪಲಿದೆ.
ಸಾಯಂಕಾಲ 7.30 ಗಂಟೆಗೆ ಉಭಯ ಜಗದ್ಗುರುಗಳ ಪಾವನ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಚಿಣಮಗೇರಿಯ ಸಿದ್ಧರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಕಡಕೋಳದ ರುದ್ರಮುನಿ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಧರ್ಮಸಭೆಯನ್ನು ಮಾಜಿ ಸಚಿವ ರೇವುನಾಯಕ ಬೆಳಮಗಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಅಜಯ್‌ಸಿಂಗ್, ಮಾಲೀಕಯ್ಯ ಗುತ್ತೇದಾರ್, ಗುರುಗೌಡ ಪಾಟೀಲ್ ಶಿರವಾಳ, ರಮೇಶ ಭೂಸನೂರ, ಅಲ್ಲಂಪ್ರಭು ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ ನಾಡಿನ ಮಠಾಧೀಶರುಗಳು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಮಡಿವಾಳೇಶ್ವರ ಜ್ಞಾನಯೋಗಾಶ್ರವು ನಿರ್ಮಿಸಲು ಭೂದಾಮ ಮಾಡಿದ ಸುಂಬಡ ಗ್ರಾಮದ ಸಿದ್ದಣ್ಣ ತುಕಾರಾಮ ಕರಂಡಿ ಅವರನ್ನು ಉಭಯ ಜಗದ್ಗುರುಗಳು ಸನ್ಮಾನಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.