ಬಿರುಗಾಳಿ- ಮಳೆಗೆ ಜನಜೀವನ ಅಸ್ತವ್ಯಸ್ತ
ಕ.ಪ್ರ. ವಾರ್ತೆ, ಚಿಂಚೋಳಿ, ಮೇ 20
ತಾಲೂಕಿನಲ್ಲಿ ಮಂಗಳವಾರ ಸಾಯಂಕಾಲ ಭಾರಿ ಬಿರುಗಾಳಿ ಮತ್ತು ಸಿಡಿಲು ಮಿಂಚಿನ ಮಳೆಯಾಗಿದ್ದು ಚಿಂಚೋಳಿ- ಮನ್ನಾಎಖ್ಖೆಳ್ಳಿ ರಾಜ್ಯ ಹೆದ್ದಾರಿಯಲ್ಲಿ ಬರುವ ಐನೋಳಿ ಗ್ರಾಮದ ಹತ್ತಿರ ರಸ್ತೆ ಬದಿಯಲ್ಲಿರುವ ಹೆಮ್ಮರಗಳು ನೆಲಕ್ಕುರುಳಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ 2ರಿಂದ ಪ್ರಾರಂಭಗೊಂಡ ಬಿರುಗಾಳಿ ಮತ್ತು ಮಳೆಯಿಂದ ಪಟ್ಟಣ ಹೊರ ವಲಯದಲ್ಲಿರುವ ಅರೆಹಳ್ಳದಿಂದ ಐನೋಳಿ ಕ್ರಾಸ್ವರೆಗೆ ರಸ್ತೆ ಬದಿಯಲ್ಲಿರುವ ಜಾಲಿ, ಬೇಲು ಮತ್ತು ನೀಲಗಿರ ಮರಗಳು ಕೊಂಬೆಗಳು ರಸ್ತೆಯ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಚಿಂಚೋಳಿ ಪೊಲೀಸ್ ಠಾಣೆ ಪಿಎಸ್ಸೈ ಎಲ್.ಸಿ. ಕೋಲ್ಕರ್, ಅರಣ್ಯ ಮತ್ತು ಲೋಕೋಪಯೋಗಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರದ ಕೊಂಬೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಿದ್ಯುತ್ ಸಂಪರ್ಕ ಕಡಿತ: ಅಲ್ಲದೆ ಐನೋಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 25 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ ತಿಳಿಸಿದ್ದಾರೆ. ತಾಲೂಕಿನ ಸುಲೇಪೇಟ್, ನಿಡಗುಂದಾ, ಮಿರಿಯಾಣ, ಚಿಮ್ಮನಚೋಡ, ಚೆಂಗಟಾ, ಚಂದನಕೇರಾ, ಐನೋಳಿ, ಸಾಲೇಬೀರನಳ್ಳಿ, ದೇಗಲಮಡಿ, ಕೋಡ್ಲಿ, ಮೋಘಾ, ರಟಕಲ್ ಗ್ರಾಮಗಳಲ್ಲಿ ಮಳೆಯಾಗಿ ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಬಗ್ಗೆ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

