ಗುಲ್ಬರ್ಗಾ

ಅನೇಕ ಆವಿಷ್ಕಾರಗಳಿಗೆ ಪ್ರಾಣಿಗಳೇ ಪುಷ್ಠಿ

Published On :

ಗುಲ್ಬರ್ಗ: ಗೆದ್ದಲು ಹುಳು ಅತ್ಯುತ್ತಮ ಸಿವಿಲ್ ಎಂಜಿನಿಯರ್, ಆನೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಲೀಚ್ ಜಿಗಣೆ ವೈದ್ಯ... ಹೀಗೆ ಪ್ರತಿಯೊಂದು ಜೀವವೈವಿಧ್ಯ ತನ್ನದೇ ಆದ ಅಪರೂಪತೆಯನ್ನು ಹೊಂದಿದೆ. ಆದರೆ ಮನುಷ್ಯ ತಾನೇ ಎಲ್ಲವನ್ನು ನಿರ್ಮಿಸಿರುವ ಒಣ ಹೆಮ್ಮೆಯಲ್ಲಿ ತರುತ್ತಾನಷ್ಟೆ. ಈಗ ಬಳಕೆಯಿರುವ ಬಹುತೇಕ ಆವಿಷ್ಕಾರಗಳಿಗೆ ಈ ಪ್ರಾಣಿಗಳೇ ಪುಷ್ಠಿ ಎಂದು ಸಭೆಯಲ್ಲಿ ಕೆಲಹೊತ್ತು ಚರ್ಚೆಗೆ ಆವಿಷ್ಕಾರ ಮಾಡಿಕೊಟ್ಟ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ. ಹರೀಶ್ ಭಟ್ ಒಂದೊಂದನ್ನೇ ಉದಾಹರಣೆ ಸಹಿತ ವಿವರಿಸಿದರು.
  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರಾವಿಪ ಜಿಲ್ಲಾ ಸಮಿತಿ ವತಿಯಿಂದ ನಗರದ ಎನ್.ವಿ ಸಂಸ್ಥೆಯ ಸಪ್ನಾ ನಾರಾಯಣ ಸಿದ್ಧಾಪುರ ಸ್ವತಂತ್ರ ಪಪೂ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಗುಲ್ಬರ್ಗದಲ್ಲಿ 38 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನವಿದ್ದರೆ ಗೆದ್ದಲು ಹುಳು ನಿರ್ಮಿಸಿದ ಮನೆಯಲ್ಲಿ ಕೇವಲ 30ರಷ್ಟು ತಾಪಮಾನವಿರುತ್ತದೆ. ಇದು ಏಸಿ ಬರುವುದಕ್ಕಿಂತ ಮುಂಚಿತವಾಗಿಯೇ ವಾಸ್ತವದಲ್ಲಿದ್ದ ಸತ್ಯಗೀಜಗನ ಪಕ್ಷಿ ವಿಶ್ವದ ಬೆಸ್ಟ್ ಸಿವಿಲ್ ಎಂದೇ ಹೇಳಬಹುದು.
  ಕಾರಣ ಅದು ನಿರ್ಮಿಸುವ ಗೂಡು ಆ ಮಾದರಿಯದಾಗಿರುತ್ತದೆ. ಇತ್ತೀಚೆಗೆ ಆನೆಗಳ ಹಾವಳಿಯನ್ನು ತಪ್ಪಿಸುವುದಕ್ಕಾಗಿ ವಿದ್ಯುತ್ ತಂತಿಗಳನ್ನು ಹಾಕುವ ಪ್ರವೃತ್ತಿ ಇದೆ. ಆದರೆ ಆನೆಗಳ ತಂಡ ಅದನ್ನು ಕೆಲ ದಿನಗಳವರೆಗೆ ಮಾತ್ರ ಸ್ಪರ್ಶಿಸಲಿಲ್ಲ. ನಂತರ ಅದರ ಮೇಲೆ ಮರ ಕೆಡವಿ ಶಾರ್ಟ್ ಸರ್ಕ್ಯೂಟ್ ಆದ ಮೇಲೆ ದಾಟುತ್ತವೆ. ಹೀಗೆ ಯಾವ ಎಂಜಿನಿಯರ್‌ಗಳ ತಲೆಗೂ ಎಟುಕದ ಹಲವು ಸ್ವಾರಸ್ಯಕರ ಘಟನೆಗಳು ಈ ಪ್ರಾಣಿ ಮತ್ತು ಪಕ್ಷಿ ಪ್ರಪಂಚದೊಂದಿಗೆ ತಳಕು ಹಾಕಿಕೊಂಡಿವೆ ಎಂದು ಹೇಳಿದರು.
  ಗುಲ್ಬರ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಧಾದೇವಿ. ಎನ್.ವಿ ಸಂಸ್ಥೆಯ ಕಾರ್ಯದರ್ಶಿ  ಶ್ಯಾಮರಾವ್ ಖಣಗೆ, ಎನ್‌ವಿ ಸಂಸ್ಥೆ ಕಾರ್ಯಾಧ್ಯಕ್ಷ ಆರ್.ಎನ್.ರಾವ್ ಮುಂತಾದವರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.