ಗುಲ್ಬರ್ಗಾ

ಜವಳಿ ನೀತಿ ಸದೃಢ

Published On :

ಕೆಂಭಾವಿ: ದೇಶದಲ್ಲೆ ಉತ್ತಮ ಜವಳಿ ನೀತಿ ಜಾರಿಗೊಳಿಸಿದ ಕೀರ್ತಿ ಕರ್ನಾಟಕದ್ದು. ಈ ಜವಳಿ ನೀತಿಯಿಂದ ಹಲವಾರು ನೇಕಾರ ಕುಟುಂಬಗಳು ಆರ್ಥಿಕವಾಗಿ ಸದೃಢರಾಗುವುರಲ್ಲದೆ ರಾಜ್ಯದ ಅನೇಕ ಕಡೆ ಜವಳಿ ಪಾರ್ಕ್ ನಿರ್ಮಾಣ ಮಾಡಲು ಸಹಕಾರಿ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜವಳಿ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.
ಸಮೀಪದ ಮುದನೂರ ಗ್ರಾಮದಲ್ಲಿ ಬೆಂಗಳೂರಿನ ವಸ್ತ್ರದಾತ ಮಾಸಪತ್ರಿಕೆ ಹಾಗೂ ರಾಮನಾಥ ಸೇವಾ ಸಮಿತಿ ಮುದನೂರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕರ್ನಾಟಕ ದೇವಾಂಗ ನೇಕಾರ ಯುವಜನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಜವಳಿ ಉದ್ಯಮಕ್ಕೆ 10 ಸಾವಿರ ಕೋಟಿ ಬಂಡವಾಳ ಹೂಡಿರುವುದು, ನೇಕಾರರಿಗೆ ಸಾಲದ ರೂಪದಲ್ಲಿ 42 ಸಾವಿರ ಕೋಟಿ ಮೀಸಲು, ಆಧುನಿಕ ಯಂತ್ರಗಳನ್ನು ಕೊಳ್ಳಲು ಯುವಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೇರಿದಂತೆ ಹಲವಾರು ಯೋಜನೆಗಳು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ನೀಡಿದೆ. ಇನ್ನೂ ಹಲವಾರು ಯೋಜನೆಗಳ ಬಗ್ಗೆ ತಿಳಿಸಲು ಈಗ ಚುನಾವಣೆಯ ನೀತಿಸಂಹಿತೆ ಇರುವುದರಿಂದ (ಎಂಎಲ್‌ಸಿ ಚುನಾವಣೆ) ಅವುಗಳ ಬಗ್ಗೆ ಮಾತು ಬೇಡ ಎಂದರು.
ಬೆಂಗಳೂರಿನ ಸಿವಿಲ್ ಎಂಜಿನಿಯರ್ ಎಂ.ಉಮಾಶಂಕರ ಪ್ರಾಸ್ತಾವಿಕ ಮಾತನಾಡಿದರು. ಬಸವಕಲ್ಯಾಣದ ಶರಣ ಶಿವಲಿಂಗೇಶ್ವರ ಮಠದ ಡಾ. ಈಶ್ವರಾನಂದ ಸ್ವಾಮಿ ಸಾನಿಧ್ಯ ವಹಿಸಿದ್ದರು, ವಸ್ತ್ರದಾತ ಮಾಸಪತ್ರಿಕೆಯ ಗೌರವ ಸಂಪಾದಕ ಬಿ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ದೇವಾಂಗ ಸಮಾಜದ ಯುವಜನ ಸಂಘದ ಅಧ್ಯಕ್ಷ ಎಣ್ಣಿಗೇರೆ ವೆಂಕಟರಾಮಯ್ಯ, ಕೆ. ನಾರಾಯಣ, ಕರ್ನಾಟಕ ರಾಜ್ಯ ದೇವಾಂಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಎಚ್. ಪಾರ್ವತಿ, ಆರ್. ಭಾಸ್ಕರ್, ಭಾಗ್ಯ ಚಂದ್ರಶೇಖರ, ರಾಜೇಶ ಬುರುಡೆಕಟ್ಟೆ, ವಿನೋದಕುಮಾರ, ಭಾರತಿ ರಮೇಶ, ಎಸ್.ಜಿ. ಹೇಮಲತಾ, ರಮೇಶ ಮಾಳಾ, ಎಂ. ವಿಶ್ವನಾಥ, ಎಚ್.ಎಸ್. ರಾಮಚಂದ್ರಪ್ಪ, ಡಾ. ಪ್ರಮಿಳಾ ಮಾಧವ, ವಿಜಯರೆಡ್ಡಿ ಪಾಟೀಲ ಭಾಗವಹಿಸಿದ್ದರು. ಬಿ.ಆರ್. ಶಾಂತಪ್ಪ ಸ್ವಾಗತಿಸಿದರು, ಮಡಿವಾಳಪ್ಪ ನಿರೂಪಿಸಿದರು, ಶಾಂತರೆಡ್ಡಿ ಚೌಧರಿ ವಂದಿಸಿದರು. ಇದೇ ಸಂದರ್ಭದಲ್ಲಿ ದೇವರ ದಾಸೀಮಯ್ಯನವರ ವಚನಗಳು ಹಾಗೂ ದಶೋಪನಿಷತ್ ಕೃತಿಯನ್ನು ಬಿಡುಗೊಳಿಸಲಾಯಿತು. ನಂತರ ಸಮಾಜದ ವಿವಿಧ ಗಣ್ಯರಿಗೆ ಸಚಿವ ಚಿಂಚನಸೂರ ಸನ್ಮಾನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.