ಗುಲ್ಬರ್ಗಾ

ಮೂಢನಂಬಿಕೆ, ಕಂದಾಚಾರ ತೊರೆದ ಶ್ರೀಗಳು

Published On :

ಕ.ಪ್ರ. ವಾರ್ತೆ , ಜೇವರ್ಗಿ , ಮೇ 29
ಸಗರನಾಡಿನ ಶ್ರೇಷ್ಠ ದಾರ್ಶನಿಕ ಮಲ್ಲಾರಾದ್ಯರು, ಕೋರಿಸಿದ್ದೇಶ್ವರರು ನಡೆದಾಡಿದ ಕಾಖಂಡಕಿ ಕ್ಷೇತ್ರ ಪಾವನವಾಗಿದೆ. ಈ ಪುಣ್ಯಭೂಮಿಯಲ್ಲಿ ಅನೇಕ ಶರಣರು ಧಾರ್ಮಿಕ ಶಿಕ್ಷಣ ಪಡೆದು ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ತೊಡೆದು ಹಾಕಿದ್ದಾರೆಂದು ನಾಲವಾರ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ತೋಟೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಖಂಡಕಿಯಲ್ಲಿ ಮಲ್ಲಾರಾದ್ಯರು ಹಾಗೂ ಕೋರಿಸಿದೇಶ್ವರರ 34ನೇ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ಧರ್ಮದ ತಳಹದಿ ಮೇಲೆ ಸಮಾಜ ನಿರ್ಮಿಸಲು ಕಾಖಂಡಕಿ ಮಲ್ಲಾರಾದ್ಯರು, ನಾಲವಾರದ ಕೋರಿಸಿದ್ದೇಶ್ವರರು ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಗುರು- ಶಿಷ್ಯರ ಪರಂಪರೆಗೆ ಹೆಸರಾದ ಕ್ಷೇತ್ರ ಕಾಖಂಡಕಿ. ಸದ್ಗರು ಮಲ್ಲಾರಾದ್ಯರು ಹೆಸರನ್ನು ನಾಡಿನಾದ್ಯಂತ ಪಸರಿಸಿದವರು ನಾಲವಾರ ಶ್ರೀಗಳು ಎಂದು ನರಿಬೋಳ ಹೇಳಿದರು.
ತನಾರತಿ ಪತ್ರಿಕೆ ಬಿಡುಗಡೆ: ಇದೇ ವೇಳೆ ನಾಲವಾರ ಮಠದ ಮುಖವಾಣಿ ತನಾರತಿ ಪತ್ರಿಕೆಯನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಲೋಕಾರ್ಪಣೆ ಮಾಡಿದರು. ಧರ್ಮಸಭೆಯಲ್ಲಿ ಕಾಖಂಡಕಿ ಗ್ರಾಮದ ಸದ್ಭಕ್ತರಾದ ಶರಣಮ್ಮ ಗಂವ್ಹಾರ ಅವರು ನಾಲವಾರ ಶ್ರೀಗಳನ್ನು ನಾಣ್ಯಗಳಿಂದ 100ನೇ ತುಲಭಾರ ನಡೆಸಿದರು. ಚಿತ್ರದುರ್ಗ ಬೃಹನ್ಮಠದ ಕುಂಬಾರ ಗುಂಡಯ್ಯ ಶರಣರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ಇಜೇರಿಯ ಡಾ. ಸಿ.ಎಸ್. ಸಣ್ಣಹಳ್ಳಿ ಆಗಮಿಸಿದ್ದರು. ಗದಗಿನ ವೀರೇಶ್ವರ ಪುಣ್ಯಾಶ್ರಮದ ಬಸವರಾಜ ಶಾಸ್ತ್ರಿ ಸೂಗೂರೇಶ್ವರರ ಪುರಾಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಧರ್ಮಸಭೆಯಲ್ಲಿ ಅಮೃತಗೌಡ ಗುಡೂರು, ಸೋಮಶೇಖರ ಬಂಡಿ, ಸಿದ್ದಣಗೌಡ ಗೂಗಿಹಾಳ, ಗೋಪಾಲ ರಾಠೋಡ, ಶಿವಯೋಗೆಪ್ಪ ಸಾಹು ಸನ್ನತಿ, ಶಿವರೆಡ್ಡಿ ಶಿರಾ ಕುಲಕುಂದ್ರಿ, ಮೋಹನರೆಡ್ಡಿ ಇಟಗಿ, ಬಸುಗೌಡ ತುನ್ನೂರು, ಗುರುಲಿಂಗಪ್ಪಗೌಡ ಪಾಟೀಲ, ಮಲ್ಲಿನಾಥ ಪಾಸೋಡಿ, ಹಣಮಯ್ಯ ಗುತ್ತೆದಾರ, ನಿಂಗಣ್ಣ ಸಾಹು, ಹರಿಶ್ಚಂದ್ರ ಚವ್ಹಾಣ, ನಿಂಗಣ್ಣಗೌಡ ಅನ್ನದಾನಿ, ಮಹಾಂತೇಶ ಶಿರಗಾ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು  ಪಾಲ್ಗೋಂಡಿದ್ದರು. ಶರಣಕುಮಾರ ಜಾಲಹಳ್ಳಿ, ಕಾಶಿನಾಥ ಹಾಗೂ ನೀಲಕಂಠ ಗಂವ್ಹಾರ ಸಂಗೀತ ಸೇವೆ ಸಲ್ಲಿಸಿದರು. ಸಿದ್ದಣ್ಣಗೌಡ ಗೂಗಿಹಾಳ ಸ್ವಾಗತಿಸಿದರು. ಸಿದ್ದರಾಜರೆಡ್ಡಿ ಕರಡ್ಡಿ ನಿರೂಪಿಸಿದರು. ಸೋಮಶೇಖರ ಬಂಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.