ರಸಗೊಬ್ಬರ ಖರೀದಿಸುವರಿಗೆ ಸಲಹೆಗಳು
ಗುಲ್ಬರ್ಗ: ಜಿಲ್ಲೆಯ ರೈತರು ಪ್ರಸಕ್ತ 2014-15ರ ಮುಂಗಾರಿಯಲ್ಲಿ ಯಾವುದೇ ರಸಗೊಬ್ಬರ ಖರೀದಿಸುವಾಗ ರಸಗೊಬ್ಬರ ಮಾರಾಟದ ಅಧೀಕೃತ ಪರವಾನಗಿ ಪತ್ರ ಹೊಂದಿದ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಕಡ್ಡಾಯವಾಗಿ ರಸೀದಿ ಪಡೆಯಬೇಕು. ಯಾವುದೇ ಅಪರಿಚಿತ ವ್ಯಕ್ತಿಗಳಿಂದ ರಸಗೊಬ್ಬರ ಖರೀದಿಸಬಾರದು.
ಕೇವಲ ಡಿಎಪಿ ರಸಗೊಬ್ಬರ ಬೆಳೆಗಳಿಗೆ ಪರ್ಯಾಯವಲ್ಲ. ಅದರ ಜೊತೆಯಲ್ಲಿ ಇತರೆ ರಸಗೊಬ್ಬರಗಳಾದ ಸುಫರ್ ಫಾಸ್ಪೇಟ್, ಅಮೋನಿಯಂ ಸಲ್ಫೇಟ್, ಸಂಯುಕ್ತ ರಸಗೊಬ್ಬರಗಳು ಮತ್ತು ಯೂರಿಯಾ ಇತ್ಯಾದಿಗಳು ಉಪಯೋಗಿಸಬೇಕು.
ಹೆಚ್ಚಿನ ಇಳುವರಿ: ರಸಗೊಬ್ಬರ ಜೊತೆಯಲ್ಲಿ ಸಾವಯವ ಗೊಬ್ಬರಗಳು ಮತ್ತು ಲಘು ಪೋಷಕಾಂಶಗಳು ಭೂಮಿಗೆ ಬೆರೆಸುವ ಮುಖಾಂತರ ಹೆಚ್ಚಿನ ಇಳುವರಿ ಪಡೆಯಬಹುದು. ಡಿಎಪಿ ರಸಗೊಬ್ಬರ ಜೊತೆ ಪಿಎಸ್‌ಬಿಯಿಂದ ಬೀಜೋಪಚಾರ ಹಾಗೂ ಭೂಮಿಗೆ ಬೆರೆಸುವ ಮುಖಾಂತರ ಡಿಎಪಿ ಪ್ರಮಾಣ ಕಡಿಮೆ ಮಾಡಬಹುದು ಎಂದು ಗುಲ್ಬರ್ಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ರೈತರಿಗೆ ಸಲಹೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರು-7259005301, ಸಹಾಯಕ ಕೃಷಿ ನಿರ್ದೇಶಕರು (ಜಾಗೃತ ದಳ)-7259005303, ಕೃಷಿ ಅಧಿಕಾರಿ-1 (ಜಾಗೃತ ದಳ)-7259005350, ಕೃಷಿ ಅಧಿಕಾರಿ-2 (ಜಾಗೃತ ದಳ)-7259005381, ಸಹಾಯಕ ಕೃಷಿ ನಿರ್ದೇಶಕರು ಅಫಜಲ್ಪುರ-7259005309, ಸಹಾಯಕ ಕೃಷಿ ನಿರ್ದೇಶಕರು ಆಳಂದ-7259005311, ಸಹಾಯಕ ಕೃಷಿ ನಿರ್ದೇಶಕರು ಚಿಂಚೋಳಿ-7259005313, ಸಹಾಯಕ ಕೃಷಿ ನಿರ್ದೇಶಕರು ಚಿತ್ತಾಪುರ-7259005306, ಸಹಾಯಕ ಕೃಷಿ ನಿರ್ದೇಕರು ಗುಲ್ಬರ್ಗ-7259005306, ಸಹಾಯಕ ಕೃಷಿ ನಿರ್ದೇಶಕರು ಜೇವರ್ಗಿ-7259005317, ಸಹಾಯಕ ಕೃಷಿ ನಿರ್ದೇಶಕರು ಸೇಡಂ-7259005319ಗೆ ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

