ಗುಲ್ಬರ್ಗಾ

ಹುಣಸಗಿಗೆ ಸಗಟು ಮಾರಾಟ ಮಳಿಗೆ ಮಂಜೂರು

Published On :

ಹುಣಸಗಿ: ಸುರಪುರ ತಾಲೂಕಿನಲ್ಲಿ 138 ನ್ಯಾಯ ಬೆಲೆ ಅಂಗಡಿಗಳು, ತಾಲೂಕಿನ187 ಹಳ್ಳಿಗಳಿಗೆ ಪಡಿತರ ವಿತರಣೆ ಮಾಡುತ್ತಿವೆ. ನಾರಾಯಣಪುರ, ಮಾರಲಭಾವಿ, ಅಮಲಿಹಾಳ, ಹಗರಟಗಿ, ಗ್ರಾಮಗಳು ತಾಲೂಕು ಕೇಂದ್ರದಿಂದ 60 ರಿಂದ 80 ಕಿ.ಮಿ ದೂರ ಇವೆ. ಇಲ್ಲಿಗೆ ಪಡಿತರ ತಲುಪುವುದು ಒಂದು ಹರ ಸಾಹಸ ಕೆಲಸವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಹುಣಸಗಿಗೆ ಅಹಾರ ವಿತರಣೆಯ ಸಗಟು ಮಾರಾಟ ಮಳಿಗೆಯನ್ನು ಸರ್ಕಾರ ಮಂಜೂರುದೆ ಎಂದು ಸುರಪುರ ತಾಲೂಕು ಅಹಾರ ಇಲಾಖೆ ನಿರೀಕ್ಷಕ ವಿಶ್ವಾರಾಧ್ಯ ಸತ್ಯಂಪೇಟ ತಿಳಿಸಿದ್ದಾರೆ.
ಗೋಡೌನ್ ಲಭ್ಯವಿಲ್ಲ: ತಾಲೂಕಿನ ಹುಣಸಗಿ-ನಾರಾಯಣಪುರ-ಮುದನೂರವರೆಗಿನ 93 ಹಳ್ಳಿಗಳಿಗೆ ಅನುಕೂಲವಾಗುವ, 80 ನ್ಯಾಯಬೆಲೆ ಅಂಗಡಿಗಳಿಗೆ ನಾಗರಿಕ ಅಹಾರ ಸರಬರಾಜು ಇಲಾಖೆ ದಾಸ್ತಾನು ಮಳಿಗೆಯನ್ನು ಹುಣಸಗಿಗೆ ಮಂಜೂರು ಮಾಡಿ ಹಲವು ತಿಂಗಳುಗಳೇ ಕಳೆದಿವೆ.  ಆದರೆ ಗೋಡೌನ್ ಲಭ್ಯವಾಗದ ಕಾರಣ ಪಡಿತರ ವಿತರಣೆಯನ್ನು ಈಗಲೂ ಸುರಪುರದಿಂದ ಮಾಡಲಾಗುತ್ತಿದೆ. ಸರ್ಕಾರದ ದರ ಕಡಿಮೆ ಇರುವುದರಿಂದ ಖಾಸಗಿಯವರು ಗೋಡೌನ್ ಇದ್ದರೂ ಅಹಾರ ಇಲಾಖೆಗೆ ನೀಡುವಲ್ಲಿ ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ.
ಸ್ಥಳೀಯರ ಆರೋಪ: ಗೋಡೌನ್ ಹುಡುಕಾಟದಲ್ಲಿ ಇಲಾಖೆ ಕಳೆದ ಎರಡು ತಿಂಗಳಿಂದ ತೊಡಗಿದ್ದರೂ ಕೂಡಾ ಇಲ್ಲಿಯ ಗಣ್ಯರು, ನಾಗರಿಕರು, ತಲೆ ಕೆಡಿಸಿಕೊಂಡಿಲ್ಲ. ಆದರೆ ಇಲ್ಲಿಯ  ಎಪಿಎಂಸಿ ಗೋಡೌನ್‌ಗಳು ಕಡಿಮೆ ದರದಲ್ಲಿ ಖಾಸಗಿಯವರ ಪಾಲಾಗಿದ್ದು, ಅವರು ಕೂಡಾ ಮೂರನೆಯ ವ್ಯಕ್ತಿಗೆ ಬಾಡಿಗೆ ನೀಡಿದ್ದಾರೆ ಎಂದು ಸ್ಥಳೀಯರ ಆರೋಪ. ಒಟ್ಟಾರೆ ಬೇಗ ಗೋಡೌನ್ ಲಭ್ಯವಾಗಿ, ಅಹಾರ ಪೂರೈಕೆ ಹುಣಸಗಿಯಿಂದ ಆದರೆ ಸಾಕು ಎಂದು ಸ್ಥಳಿಯ ನ್ಯಾಯಬೆಲೆ ಅಂಗಡಿಯವರು ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.