ರಕ್ತದಾನಿಯೇ ನಿಜವಾದ ಹೀರೋ: ಪುಟ್ಟಸ್ವಾಮಿಗೌಡ
ಬೇಲೂರು: ಯಾರು ಸ್ವ-ಇಚ್ಛೆಯಿಂದ ಯಾವುದೇ ಲಾಭ ಪಡೆಯದೆ ರಕ್ತ ನೀಡುತ್ತಾರೋ ಅವರೇ ನಿಜವಾದ ಹೀರೋ ಇದ್ದಂತೆ. ಈ ನಿಟ್ಟಿನಲ್ಲಿ ರಕ್ತದಾನ ಮಾಡುವುದೇ ಮಹಾದಾನ ಎಂದು ವಕೀಲ ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಬೇಲೂರಿನ ಬಲ್ಲೇನಹಳ್ಳಿಯಲ್ಲಿ ಪ್ರೇರಣ ಸ್ವಯಂ ಸೇವಾಸಂಸ್ಥೆ, ಬಲ್ಲೆನಹಳ್ಳಿ ಜೀವರಕ್ಷ ರಕ್ತನಿಧಿ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ರಕ್ತಗುಂಪು ಪರೀಕ್ಷಾ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಲ್ಲಿ ಮುಖ್ಯವಾಗಿ ರಕ್ತವು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇದ್ದರೆ ಆರೋಗ್ಯದಿಂದ ಓಡಾಡಬಹುದು. ರಕ್ತ ಸಮರ್ಪಕವಾಗಿದ್ದರೆ ಶಕ್ತಿ, ಜ್ಞಾನ ಎಲ್ಲವೂ ವೃದ್ಧಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಮಿಣ ಪ್ರದೇಶದಲ್ಲಿ ರಕ್ತದಾನ ಕಾರ್ಯಕ್ರಮಗಳು ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಜೀವರಕ್ಷ ರಕ್ತನಿಧಿ ಹಾಸನದ ಪ್ರತಿನಿಧಿ ಮೋಹನ್ ಮಾತನಾಡಿದರು. ಗ್ರಾಮಸ್ಥರಿಗೆ ರಕ್ತಗುಂಪು ಪರೀಕ್ಷೆಯನ್ನು ಉಚಿತವಾಗಿ ಮಾಡಲಾಯಿತು. 300 ಕ್ಕೂ ಹೆಚ್ಚು ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ರಕ್ತದ ಗುಂಪು ಪರೀಕ್ಷೆ ಮಾಡಿ ಗುರುತಿನ ಪತ್ರ ವಿತರಿಸಲಾಯಿತು. 50 ಜನರು ರಕ್ತದಾನ ಮಾಡಿದರು. ವಿಜಯಪ್ರಕಾಶ್,ಗ್ರಾಪಂ ಸದಸ್ಯ ರುದ್ರೇಗೌಡ, ಜೀವರಕ್ಷ ರಕ್ತನಿಧಿ ಹಾಸನದ ಸದಸ್ಯರು, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

