ಕನಕ ಭವನದಲ್ಲಿ ಕುರುಬ ಸಮಾಜ ಮುಖಂಡರ ಸಭೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಏ.7
ಕಾಂಗ್ರೆಸ್ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ತಾಲೂಕಿನ ಕುರುಬ ಸಮಾಜ ಸಭೆ ನಡೆಸಿ ಬರಲಿರುವ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಲು ತೀರ್ಮಾನ ಕೈಗೊಂಡಿತು.ಪಟ್ಟಣದ ಕನಕಭವನದಲ್ಲಿ ಭಾನುವಾರ ತಾಲೂಕು ಕುರುಬ ಸಮಾಜ ಅಧ್ಯಕ್ಷ ಎಚ್.ಎನ್.ಮಾಳಿಗೇಗೌಡ ನೇತೃತ್ವದಲ್ಲಿ ತುರ್ತು ಸಭೆ ನಡೆಸಿತು. ಸಭೆಯಲ್ಲಿ ಹಾಜರಿದ್ದ ಬಹುತೇಕ ಮುಖಂಡರು ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತ ಪಡಿಸಿದರು.
ಕ್ಷೇತ್ರದಲ್ಲಿ 36 ಸಾವಿರ ಕುರುಬ ಸಮಾಜದ ಮತಗಳು ಇದ್ದು ಇದನ್ನು ಏಕಪಕ್ಷೀಯವಾಗಿ ಮತ ಚಲಾವಣೆ ನಡೆಸಿ ಬರಲಿರುವ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಬೆಂಬಲ ನೀಡಲು ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಬಗ್ಗೆ ನಿರ್ಣಯ ಕೈಗೊಂಡಿತು.ಈ ಮಧ್ಯ ಕೆಜೆಪಿಯಿಂದ ಸ್ಪರ್ಧಿಸುವುದಾಗಿ ಹೊನ್ನಿಕೊಪ್ಪಲು ಮಂಜೆಗೌಡ ತಮ್ಮ ಮನದ ಇಂಗಿತ ಸಭೆಯ ಮುಂದಿರಿಸಿದಾಗ ಚರ್ಚೆ ನಡೆದು ಯಾವುದೇ ಕಾರಣಕ್ಕೂ ಮಂಜೇಗೌಡ ಯಾವುದೇ ಪಕ್ಷದಿಂದ ಸ್ಪರ್ಧಿಸುವುದು ಬೇಡವೆಂದು ಮುಖಂಡರು ತಿಳಿಸಿದರು. ಕುರುಬ ಸಮಾಜದ ಭೀಮನಹಳ್ಳಿ ಪ್ರಕಾಶ್, ಹರದನಹಳ್ಳಿ ಪುಟ್ಟರಾಜು, ಅಂಕನಹಳ್ಳಿ ಚಿಕ್ಕೇಗೌಡ, ಬಾಗಿವಾಳು ಮಂಜು, ಹೇಮಂತಕುಮಾರ್, ಶೆಟ್ಟಿಗೌಡನಹಳ್ಳಿ ಚಂದ್ರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಸಮಾಜದ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

