ಒಂದೂವರೆ ತಿಂಗಳಿಂದ ಬಿಲ್ ನೀಡದ ಸೆಸ್ಕ್
ಹೊಳೆನರಸೀಪುರ: ತಾಲೂಕಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಮಂಡಳಿಯು (ಸೆಸ್ಕ್) ಕಳೆದ ಒಂದೂವರೆ ತಿಂಗಳಾದರೂ ಮಾಸಿಕ ವಿದ್ಯುತ್ ಬಿಲ್ ನೀಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಹಕರು ದೂರಿದ್ದಾರೆ.
ಪ್ರತಿ ತಿಂಗಳು ನೀಡುವ ವಿದ್ಯುತ್ ಬಿಲ್ ಈ ಬಾರಿ ಒಂದೂವರೆ ತಿಂಗಳಾದರೂ ನೀಡದೇ ಇರುವುದನ್ನು ಗ್ರಾಹಕರು ಪ್ರಶ್ನಿಸಿದಲ್ಲಿ ಯಾರಿಂದಲೂ ಸಮರ್ಪಕವಾದ ಉತ್ತರ ಸಿಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
ಈ ಕುರಿತಂತೆ ಇಲಾಖೆಯ ಎಂಜಿನಿಯರ್ ಒಬ್ಬರನ್ನು ಸಂಪರ್ಕಿಸಿದಾಗ ಇಲಾಖೆಯ ಎಲ್ಲ ಬಿಲ್ಗಳನ್ನು ಹೊಸದಾಗಿ ಹೊರಗುತ್ತಿಗೆ ಪಡೆದಿರುವ ಸಂಸ್ಥೆಯು ಡಾಟಾ ಎಂಟ್ರಿ ಮಾಡುತ್ತಿರುವ ಕಾರಣದಿಂದಾಗಿ ಕೆಲ ಕಾಲ ಬಿಲ್ ನೀಡುವುದು ವ್ಯತ್ಯಾಸವಾಗಿರುವುದಾಗಿ ಒಪ್ಪಿಕೊಂಡರು.
ಆದರೆ ತಮ್ಮದಲ್ಲದ ತಪ್ಪಿಗೆ ಒಂದೇ ಬಾರಿಗೆ ಎರಡು ತಿಂಗಳ ವಿದ್ಯುತ್ ಬಿಲ್ ಕಟ್ಟುವುದು ಎಲ್ಲ ಗ್ರಾಹಕರಿಗೂ ಆಗದ ಮಾತು. ಆದ್ದರಿಂದ ಕೇವಲ ಒಂದು ರುಪಾಯಿ ಕಡಿಮೆ ಕಟ್ಟಿದರೂ ಗ್ರಾಹಕರಿಗೆ ದಂಡ ವಿಧಿಸುವ ಇಲಾಖೆಯು, ಈಗ ತಮ್ಮ ತಪ್ಪಿಗಾಗಿ ಗ್ರಾಹಕರಿಗೆ ಹೊರೆ ನೀಡುವುದು ಎಷ್ಟು ಸರಿ ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

