ಹಾಸನ

ಎತ್ತಿನ ಗಾಡಿಯಲ್ಲಿ ಕೆಜೆಪಿ ಅಭ್ಯರ್ಥಿ ಪರ ಪ್ರಚಾರ

Published On :

ಕನ್ನಡಪ್ರಭ ವಾರ್ತೆ, ಅರಸೀಕೆರೆ, ಏ.12
ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಡಾ.ಲೋಕೇಶ್ ಪರ ಪ್ರಚಾರದ ಕಾವು ಬಿರುಸುಗೊಂಡಿದ್ದು ಕಾರ್ಯಕರ್ತರು ಎತ್ತಿನಗಾಡಿ ಬಳಸಿಕೊಂಡು ಭರಾಟೆಯ ಪ್ರಚಾರಕ್ಕೆ ಮುಂದಾಗಿದ್ದಾರೆ.
ತಾಲೂಕಿನ ಕಣಕಟ್ಟೆ ಹೋಬಳಿಯ ಜೆ.ಸಿ.ಪುರ, ಡಿ.ಎಂ.ಕುರ್ಕೆ, ಹೊಳಲ್ಕೆರೆ, ನಾಗವೇದಿ, ದಿಬ್ಬೂರು, ಮಾಡಾಳು, ಕಸವನಹಳ್ಳಿ, ಕಡಲಮಗ್ಗೆ, ಕಿತ್ತನಕೆರೆ ಇನ್ನಿತರ ಗ್ರಾಮಗಳಲ್ಲಿ ಎತ್ತಿನಗಾಡಿ ಮೂಲಕ ತೆರಳುತ್ತಿರುವ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಾಲಮನ್ನಾ ಯೋಜನೆ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ, ಬೈಸಿಕಲ್ ವಿತರಣೆ, ಹಾಲಿಗೆ  ಪ್ರೋತ್ಸಾಹ ಧನ ಸೇರಿದಂತೆ ಇತರೆ ಯೋಜನೆಗಳ  ಕೊಡುಗೆಯ ಬಗ್ಗೆ ಜನರಲ್ಲಿ ಮನವರಿಕೆ  ಮಾಡಿಕೊಡುವ ಮೂಲಕ ಮತ ಯಾಚಿಸುತ್ತಿರುವ ದೃಶ್ಯ ಕ್ಷೇತ್ರದಾದ್ಯಂತ ಕಂಡುಬರುತ್ತಿದ್ದು, ಇದು ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು  ನೀಡಿದೆ. ಕೆಜೆಪಿ ಮುಖಂಡ ಡಿ.ಎಂ.ಕುರ್ಕೆ ರೇವಣ್ಣ, ಪ್ರಕಾಶ್, ಜಯದೇವ್, ಹೊಳಲ್ಕೆರೆ  ಹರೀಶ್, ನಾಗವೇದಿ ಬಸವರಾಜ್, ಶಶಿಧರ್, ಪಂಚಾಕ್ಷರಿ, ಸ್ವಾಮಿ ಇನ್ನಿತರರು ಪ್ರಚಾರದ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.