ಹಾಸನ

ಲಕ್ಷಾಂತರ ರು. ಮೌಲ್ಯದ ಜೋಳ ಬೆಂಕಿಗಾಹುತಿ

Published On :

ಕ.ಪ್ರ. ವಾರ್ತೆ೤ ಅರಸೀಕೆರೆ೤ ಏ. 12
ಜಮೀನಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 2.5 ಲಕ್ಷಕ್ಕೂ ಅಧಿಕ ಮೌಲ್ಯದ ಮುಸುಕಿನ ಜೋಳದ ತೆನೆಗೆ ಬೆಂಕಿ ತಗುಲಿದ ಪರಿಣಾಮ ಬೆಳೆ ಸಂಪೂರ್ಣ ಭಸ್ಮವಾಗಿದ್ದು, ರೈತನನ್ನು ಕಂಗಾಲಾಗುವಂತೆ ಮಾಡಿದೆ.
ಬರದ ನಡುವೆಯೇ ಸಾಲ ಮಾಡಿ ಬೆಳೆಯಲಾಗಿದ್ದ ಎರಡು ನೂರು ಚೀಲಗಳಿಗೂ ಅಧಿಕ ಮುಸುಕಿನ ಜೋಳದ ಬೆಳೆಗೆ ಬೆಂಕಿ ತಗುಲಿದ ಪರಿಣಾಮ ರೈತ ತಲೆಯ ಮೇಲೆ ಕೈ ಹೊತ್ತು ಕೂರುವಂತಾಗಿರುವ ಘಟನೆ ತಾಲೂಕಿನ ಜ್ಯೋತಿಮಲ್ಲಾಪುರ ಗ್ರಾಮದ ಬೋರೆಗೌಡ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸಂಭವಿಸಿದೆ. ಕಳೆದ 15 ದಿನಗಳ ಹಿಂದಷ್ಟೇ ಮುಸುಕಿನ ಜೋಳದ ತೆನೆಗಳನ್ನು ಕಟಾವು ಮಾಡಿ ಒಂದೆಡೆ ಸಂಗ್ರಹಿಸಿಡಲಾಗಿತ್ತು.
 ಬುಧವಾರ ರಾತ್ರಿ ಬೆಳಗಿನ ಜಾವ ಜೋಳದ ತೆನೆಗಳು ಬೆಂಕಿಗೆ ಆಹುತಿಯಾಗಿದೆ. ಯುಗಾದಿ ಹಬ್ಬದ ಆಚರಣೆಯ ಸಿದ್ಧತೆಯಲ್ಲಿ ತೊಡಗಿದ್ದ ಕುಟುಂಬದವರಿಗೆ ಈ ದುರ್ಘಟನೆ ಆಘಾತ ಉಂಟು ಮಾಡಿದೆ. ಬೆಳಗ್ಗೆ ಬೆಂಕಿ ಬಿದ್ದಿರುವ ಸುದ್ಧಿ ತಿಳಿದ ಆಜುಬಾಜಿನ ಹಳ್ಳಿಗಳ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದಾರೆ. ಸಕಾಲದಲ್ಲಿ ನೀರು ದೊರೆಯದಿದ್ದ ಪರಿಣಾಮ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ವಾಹನ ಆಗಮಿಸುವ ವೇಳೆಗೆ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.