ಸುದ್ದಿ ಸಂಕ್ಷೇಪ
ಇಂದು ಶಿಬಿರದಲ್ಲಿ ಮಾತೃ ವಂದನಾ
ಹಾಸನ: ನಗರದ ವೇದ ಭಾರತೀ ವತಿಯಿಂದ ರವೀಂದ್ರನಗರ ರಾಮಕೃಷ್ಣ ವಿದ್ಯಾಲಯದಲ್ಲಿ ನಡೆಯುತ್ತಿರುವ ಬಾಲ ಸಂಸ್ಕಾರ ಶಿಬಿರದಲ್ಲಿ ಏ.14 ರಂದು ಭಾನುವಾರ ಬೆಳಗ್ಗೆ 9.30 ಕ್ಕೆ ಮಾತೃ ವಂದನಾ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆ ವಿದ್ಯಾಲಯದ ಪ್ರಾಂಶುಪಾಲ ಸಿ.ಎಸ್. ಕೃಷ್ಣಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಡಾ. ವಾಮನರಾವ್ ಬಾಪಟ್ ಹಾಗೂ ಅಮೋಘ್ ವಾಹಿನಿಯ ಹಿರಿಯ ವ್ಯವಸ್ಥಾಪಕ ಪ್ರಮೋದ್ ಭಾಗಹಿಸುವರು. ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಗೌರವಿಸುವ ಮತ್ತು ಭಾರತ ಮಾತಾ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಮಕ್ಕಳ ತಂದೆ ತಾಯಿ, ಪೋಷಕರು ತಪ್ಪದೆ ಹಾಜರಿರಲು ವೇದ ಭಾರತೀ ಅಧ್ಯಕ್ಷ ಕ.ವೆಂ. ನಾಗರಾಜ್ ಹಾಗೂ ಕಾರ್ಯದರ್ಶಿ ಚಿನ್ನಪ್ಪ ಕೋರಿದ್ದಾರೆ.
ಕೆಜೆಪಿ ಅಭ್ಯರ್ಥಿ
ವಿರುದ್ಧ ದೂರು
ಸಕಲೇಶಪುರ: ಆಯೋಗದ ಅನುಮತಿ ಪಡೆಯದೆ ಕರಪತ್ರ ಹಂಚಿದ್ದ ಆರೋಪದಡಿ ಕೆಜೆಪಿ ಅಭ್ಯರ್ಥಿ ಬೆಳಗೋಡು ಉಮೇಶ್ ವಿರುದ್ಧ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ.
ಆಯೋಗದ ಅನುಮತಿ ಪಡೆಯದೆ 2059 ಕರಪತ್ರಗಳನ್ನು ಅಂಚೆ ಮೂಲಕ ಮತದಾರರಿಗೆ ಕಳುಹಿಸಲಾಗಿದ್ದು ಇದಕ್ಕಾಗಿ ಆಯೋಗದ ಅನುಮತಿ ಪಡೆದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಚುನಾವಣೆ ಅಧಿಕಾರಿಗಳು 127(ಎ) ಕಲಂ ನಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದೂರು ದಾಖಲಿಸಿಕೊಂಡಿದ್ದಾರೆ.
ಮಾರ್ಗದರ್ಶಿ ವಿರುದ್ಧ ದೂರು
ಆಯೋಗದ ಅನುಮತಿ ಪಡೆಯದೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಸಿದ ಮಾರ್ಗದರ್ಶಿ ಅಸೋಸಿಯೇಟ್ಸ್ ಅಧ್ಯಕ್ಷೆ ಕಲ್ಪನಾ ಕೀರ್ತಿ ವಿರುದ್ದ ಚುನಾವಣೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಸಭೆ ಸಂದರ್ಭದಲ್ಲಿ ಬಳಸಿದ್ದ ಧ್ವನಿವರ್ಧಕ, ಕುರ್ಚಿ ಅಡುಗೆ ಪಾತ್ರೆ ವಶಪಡಿಸಿಕೊಂಡಿದ್ದಾರೆ.
ಭೀತಿ ಇಲ್ಲದೆ ಮತ ಚಲಾಯಿಸಿ
ಸಕಲೇಶಪುರ: ಮತದಾರರು ಭೀತಿಯಿಲ್ಲದೆ ಹಾಗೂ ಆಮಿಷಗಳಿಗೆ ಬಲಿಯಾಗದೆ ಪ್ರಜ್ಞಾವಂತರಾಗಿ ಮತ ಚಲಾಯಿಸುವ ಮೂಲಕ ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಬೇಕೆಂದು ತಹಸಿಲ್ದಾರ್ ಮಂಜುನಾಥ್ ಹೇಳಿದರು. ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಬೀದಿ ನಾಟಕದಪ್ರಚಾರಕ್ಕೆ ಪಟ್ಟಣದ ಹಳೇ ಬಸ್ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

