ಹಾಸನ

ಅರಸಿನ ಬಾವಿ ಶುಚಿಗೊಳಿಸಿದ ಸಾರ್ವಜನಿಕರು

Published On :

ಬಾಣಾವರ: ಗ್ರಾಮದ ಕಲ್ಯಾಣಿ ಎಂದೇ ಕರೆಯುವ ಅರಸಿನ ಬಾವಿಯನ್ನು ಸಾರ್ವಜನಿಕರೆಲ್ಲ ಸೇರಿ ಶುಚಿಗೊಳಿಸಿದರು. ಕಳೆದ ವರ್ಷದಿಂದ  ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಸ್ವತ: ಬಾವಿಯನ್ನು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾದರು. ಬಾಣಾವರದ ಕಲ್ಯಾಣಿ ಎಂದೇ ಕರೆಸಿಕೊಳ್ಳುವ ಈ ಬಾವಿ ಸುತ್ತಲ ಗ್ರಾಮಗಳಿಗೆ ವರದಾನವಾಗಿತ್ತು. ಅಲ್ಲದೆ ಗಂಗಮ್ಮನ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಇಲ್ಲಿಂದ ಭಕ್ತಿ ಪೂರ್ವಕವಾಗಿ ನೀರನ್ನು ಹೊತ್ತೊಯ್ಯ ಲಾಗುತ್ತಿತ್ತು.
 ಬಾವಿ ಹೂಳು ತುಂಬಿಕೊಂಡಿದ್ದರೂ ಸಂಬಂಧಪಟ್ಟರು ಗಮನ ಹರಿಸದಿದ್ದಕ್ಕೆ ಬೇಸತ್ತ ಗ್ರಾಮಸ್ಥರು  ಸ್ವತ: ಬಾವಿಯ ಹೂಳು ತೆಗೆದರು. ತಾಪಂ ಸದಸ್ಯ ಬಿ. ರವಿಶಂಕರ್, ಗ್ರಾಪಂ ಸದಸ್ಯ ಬಿ.ಡಿ. ಮಲ್ಲಿಕ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಕಾಂಗ್ರೆಸ್ ಉಪಾಧ್ಯಕ್ಷ ಸಮಿವುಲ್ಲಾ ಷರೀಫ್, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ಹಾಗೂ ಗ್ರಾಮದ ಯೋಗೇಶ್ ಕುಂಬಾರ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.