ದೊಡ್ಡೀರಯ್ಯ- ರವಿಕುಮಾರ್ ನಿಲ್ಲಿಸಲು ತೀರ್ಮಾನ
ಹಾಸನ: ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ದೊಡ್ಡೀರಯ್ಯ ಮತ್ತು ಕಟ್ಟಾಯ ರವಿಕುಮಾರ್ ಅವರನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ನಡೆದ ಸಕಲೇಶಪುರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ 20ಕ್ಕೂ ಹೆಚ್ಚು ಆಕಾಂಕ್ಷಿಗಳ, ಟಿಕೆಟ್ ವಂಚಿತರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳಾದ ನಾವು ಸ್ಥಳೀಯ ಅಭ್ಯರ್ಥಿಗಳು, ಸ್ಥಳೀಯ ನಿವಾಸಿಗಳು ಹಾಗೂ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಸಭೆ ಸೇರಿ ಕ್ಷೇತ್ರದ ಸ್ಥಳೀಯ ವಾಸಿಗಳಿಗೆ ಮೊದಲಿನಿಂದಲೂ ಟಿಕೆಟ್ ಕೊಡಬೇಕೆಂದು ಒತ್ತಾಯ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ. ಜಿಲ್ಲಾಧ್ಯಕ್ಷರಾಗಿದ್ದ ಬಿ.ಶಿವರಾಂ ತುಮಕೂರು ಜಿಲ್ಲೆಯವರು. ಈಗ ಬೆಂಗಳೂರು ವಾಸಿಯಾಗಿದ್ದಾರೆ. ಸ್ಥಳೀಯ ಮುಖಂಡರ ಹಾಗೂ ಸ್ಥಳೀಯ ಕ್ಷೇತ್ರದ ಪರಿಚಯವೇ ಇಲ್ಲದ ಹೊರಗಿನನವರು ಹಾಗೂ ಈ ಹಿಂದೆ ಠೇವಣಿ ಕಳೆದುಕೊಂಡಿದ್ದಂತಹ ವ್ಯಕ್ತಿಗೆ ಸಕಲೇಶಪುರ ಕ್ಷೇತ್ರ ಟಿಕೆಟ್ ಕೊಡಿಸುವ ಮೂಲಕ ಸ್ಥಳೀಯ ಕಾರ್ಯಕರ್ತರ ದ್ರೋಹ ಎಸಗಿದ್ದಾರೆ ಎಂದು ದೂರಿದರು. ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಲು ಸ್ಥಳೀಯರಾದ ದೊಡ್ಡೀರಯ್ಯ ಹಾಗೂ ಕಟ್ಟಾಯ ರವಿಕುಮಾರ್ ಅವರನ್ನು ಬಂಡಾಯ ಕಾಂಗ್ರೆಸ್ ಆಗಿ ಸ್ಪರ್ಧಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದು ಹೇಳಿದ್ದಾರೆ.
ಸಭೆಯಲ್ಲಿ ಆಲೂರು ಹೊನ್ನಪ್ಪ, ನಿಂಗರಾಜ್, ಗಿರೀಶ್, ಉದಯವಾರ ಶೇಖರ್, ಪ್ರಶಾಂತ್, ಪಾಳ್ಯದ ಧರ್ಮಪ್ಪ, ಪಾಂಡುರಂಗಸ್ವಾಮಿ, ಕುಮಾರಯ್ಯ, ಗಿರಿಜಾ, ಬಾಳ್ಳುಪೇಟೆಯ ಧರ್ಮಪ್ರಕಾಶ್, ಮಂಜಯ್ಯ, ಎಂ.ಬಿ.ಸ್ವಾಮಿ ಇತರರು ಇದ್ದರು.
ನಾಮಪತ್ರ ಸಲ್ಲಿಸುವ ವೇಳೆ ಗೈರಾದವರು
ಸಕಲೇಶಪುರ: ಕಾಂಗ್ರೆಸ್ ಟಿಕೆಟ್ಗಾಗಿ ಲಾಬಿ ನಡೆಸಿದ್ದ ಪ್ರಮುಖ ಆರು ಜನರಲ್ಲಿ ಯಾರೊಬ್ಬರು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿರಲಿಲ್ಲ. ಡಿ.ಸಿ ಸಣ್ಣಸ್ವಾಮಿ, ಮುನಿಸ್ವಾಮಿ, ಹಿತೈಷಿ, ಪ್ರಮೋದ್, ಶಾರದ ಕಾಳಿಂಗಪ್ಪ ಹಾಗೂ ಮರಡಿಕೆರೆ ನಾಗೇಶ್ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಪಕ್ಷದ ಪ್ರಮುಖರಾಗಿರುವ ಎಚ್.ಪಿ.ಕಾಂತರಾಜ್, ಕೆ.ಬಿ ಚಂದ್ರು, ಮಸ್ತಾರೆ ಲೋಕೇಶ್, ದೊಡ್ಡಿರಯ್ಯ, ರಾಜಶೇಖರ್ ಸೇರಿದಂತೆ ಪ್ರಮುಖರು ಗೈರಾಗಿದ್ದರು. ಬಿಜೆಪಿ ಹಿರಿಯ ನಾಯಕ ಬಿ.ಬಿ.ಶಿವಪ್ಪ, ಜೈಮಾರುತಿ ದೇವರಾಜ್, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಜಯ್ಬಾಬು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಗೈರು ಹಾಜರಾಗಿದ್ದರು. ಕೆಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುಕುಂದೂರು ತಿಮ್ಮಯ್ಯ ಕೆಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

