ಹಾಸನ

ಜಿಲ್ಲಾದ್ಯಂತ ಶ್ರೀರಾಮನವಮಿ ಹರೇ ರಾಮ ಹರೇ ರಾಮ ಜಪ

Published On :

ಕನ್ನಡಪ್ರಭ ವಾರ್ತೆ  ಹಾಸನ   ಏ 19
ನಗರ ಹಾಗೂ ಜಿಲ್ಲೆಯಾದ್ಯಂತ ಶ್ರೀರಾಮನವಮಿಯನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ಶುಕ್ರವಾರ ಆಚರಿಸಿದರು. ಜಿಲ್ಲಾದ್ಯಂತ ಶ್ರೀರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆದವು.
ಶ್ರೀರಾಮನವಮಿಯ ಅಂಗವಾಗಿ ನಗರದ ಕೆಲವು ವೃತ್ತಗಳಲ್ಲಿ, ಆಟೋ ಚಾಲಕರು, ನಾನಾ ಸಂಘಸಂಸ್ಥೆಯವರು ಶ್ರೀರಾಮನ ದೇವರಿಗೆ ಪೂಜೆಯನ್ನು ಸಲ್ಲಿಸಿ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಕೊಸಂಬರಿಯನ್ನು ವಿತರಿಸಿದರು.
ವಿಶೇಷವಾಗಿ ಬೆಳಗ್ಗೆಯಿಂದಲೇ ನಗರದ ಸೀತವಿಲಾಸ ರಸ್ತೆಯಲ್ಲಿ ಇರುವ ಶ್ರೀಸೀತಾ ರಾಮಾಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆದವು. ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
  ಎಲ್ಲರೂ ದೇವಾಲಯಗಳಿಗೆ ಭೇಟಿ ನೀಡಿ ಶ್ರೀರಾಮನ ಹುಟ್ಟು ಹಬ್ಬವನ್ನು ಆಚರಿಸಿದರು. ಹೆಂಗೆಳೆಯರು ಭಜನೆಗಳ ಮೂಲಕ ರಾಮನ ಸ್ಮರಣೆ ಮಾಡಿದರು. ಬಂದ ಭಕ್ತರಿಗೆ ಪ್ರಸಾದ ಮತ್ತು ಪಾನಕ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ. ಸೀತಾರಾಮಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ಬೆಳಗ್ಗೆಯಿಂದಲೇ ನಿಂದು ದೇವರ ದರ್ಶನವನ್ನು ಪಡೆದು ಪುನೀತರಾದರು. ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಹವನಗಳು ನಡೆದವು.
ವಿಶ್ವಹಿಂದೂ ಪರಿಷತ್‌ನಿಂದ ಪಾನಕ ವಿತರಣೆ: ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ನಗರದ ಹೇಮಾವತಿ ಪ್ರತಿಮೆ ಬಳಿ  ಶ್ರೀ ರಾಮನವಮಿಯ ಅಂಗವಾಗಿ ಬೆಲ್ಲದ ಪಾನಕ ಹಾಗೂ ಮಜ್ಜಿಗೆಯನ್ನು ವಿತರಿಸಿ ಶ್ರೀರಾಮ ನವಮಿಯನ್ನು ಆಚರಿಸಿದರು. ಹೇಮಾವತಿ ಪ್ರತಿಮೆ ಬಳಿ ಶ್ರೀರಾಮನ ವಿಶೇಷ ಪೂಜೆ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್‌ನ ಶ್ರೀನಿವಾಸ್‌ಗೌಡ, ಕಟ್ಟಾಯ ಶಿವಕುಮಾರ್, ಅಂದಾನಿಗೌಡ, ವಿಜಯ್ಕುಮಾರ್, ಮಂಜುನಾಥ ಶರ್ಮ, ನಾಗರಾಜ್, ಸೋಮಶೇಖರ್, ಮಂಜುನಾಥ್ ಹಾಗೂ ಇತರರು ಇದ್ದರು.
ಬಾಗೇಡರ ಕೊಪ್ಪಲಿನಲ್ಲಿ ಶ್ರೀ ರಾಮನವಮಿ ಅಂಗವಾಗಿ ವಿಶೇಷ ಪೂಜೆ: ನಗರದ ಸಾಲಗಾಮೆ ರಸ್ತೆಯ ಆಕಾಶವಾಣಿ ಬಳಿ ಇರುವ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಆವರಣದಲ್ಲಿ ಬಾಗೇಡರ ಕೊಪ್ಪಲು, ದ್ಯಾವಪ್ಪನ ಕೊಪ್ಪಲು ಗ್ರಾಮಾಸ್ಥರು ಶ್ರೀ ರಾಮನವಮಿಯ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾನಕ, ಕೋಸಂಬರಿ ಹಾಗೂ ಮಜ್ಜಿಗೆಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರವೀಣ್ ಕುಮಾರ್, ಸೋಮಶೇಖರ್, ಸೀತಾರಾಮಾಂಜನೇಯ ಮಹಿಳಾ ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಬಾಗೇಡರ ಕೊಪ್ಪಲು, ದ್ಯಾವಪ್ಪನ ಕೊಪ್ಪಲುನ ನೂರಾರು ಗ್ರಾಮಾಸ್ಥರು ಪಾಲ್ಗೋಡಿದ್ದರು.
ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ಪೂಜೆ: ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ರಾಮನವಮಿ ಉತ್ಸವವನ್ನು ಆಚರಿಸಲಾಯಿತು. ದೇಗುಲದ ಸುತ್ತ ಮೆರವಣಿಗೆ ನಡೆಸಿ ವಿಶೇಷ ಪೂಜೆ ನೆರವೇರಿಸಿ ಪಾನಕ, ಫಲಹಾರ ನೀಡಲಾಯಿತು.  

ದುರ್ಗಾಪರಮೇಶ್ವರಿ ದೇಗುಲದ 1001 ಕಳಸ
 ಶ್ರೀರಾಮನವಮಿಯ ಅಂಗವಾಗಿ ನಗರದ ವಲ್ಲಬಾಯಿ ರಸ್ತೆಯ ಹಿಂಭಾಗದಲ್ಲಿ ಇರುವ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಯನ್ನು ನೆರವೇರಿತು.
   ಅಲ್ಲದೆ ದೇವಾಲಯದಿಂದ ದೇವರನ್ನು ಪಲ್ಲಕಿಯಲ್ಲಿ ಕರೆದೊಯ್ದು 1001 ಕಳಸ ಹೊತ್ತ ಮಹಿಳೆಯರು ಹಾಗೂ ಮಕ್ಕಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸಾಲಗಾಮೆ ರಸ್ತೆ, ಮಹಾವೀರ ವೃತ್ತ, ಹಾಸನಾಂಬ ದೇವಲಾಯದಲ್ಲಿ ರಸ್ತೆಯ ಮೂಲಕ ಸಾಗಿ ದೇವಾಲಯಕ್ಕೆ ತೆರಳಿತು.
ಪಲ್ಲಕ್ಕಿಯಲ್ಲಿ ಕುಳ್ಳಿರಿಸಿದ ದೇವರಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಿ ಮೆರವಣಿಗೆ ನಡೆಸಲಾಯಿತು. ಮೆರವಣಿಯ ಉದ್ದಕ್ಕೂ ಭಕ್ತರಿಗೆ ದೇವರಿಗೆ ಪೂಜೆ ನೆರವೇರಿಸಿ ದೇವರ ದರ್ಶನವನ್ನು ಪಡೆದು ಪುನೀತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.