ಮತದಾನಕ್ಕೆ ವಿವಿಧ ಗುರುತಿನ ಕಾರ್ಡ್‌ಗಳು
ಹಾಸನ: ರಾಜ್ಯ ವಿಧಾನಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಎಪಿಕ್ ಕಾರ್ಡ್ ಹೊಂದಿರದ ಮತದಾರರು ಈ ಕೆಳಕಂಡ ಗುರುತಿನ ಕಾರ್ಡ್‌ಗಳನ್ನು ಪ್ರದರ್ಶಿಸಿ ಮತ ಚಲಾಯಿಸುವಂತೆ ಚುನಾವಣಾ ಆಯೋಗವು ಸೂಚಿಸಿದೆ. ಭಾವಚಿತ್ರವುಳ್ಳ ಅಧಿಕೃತ ಮತದಾರರ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೌಕರರು ಹಾಗೂ ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ನೀಡಿರುವ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಕಾರ್ಡ್, ಭಾವಚಿತ್ರವುಳ್ಳ ಬ್ಯಾಂಕ್, ಪೋಸ್ಟ್ ಆಫೀಸ್, ಕಿಸಾನ್ ಪಾಸ್ ಪುಸ್ತಕ, ವಿದ್ಯಾ ಸಂಸ್ಥೆಗಳು ನೀಡಿರುವ ವಿದ್ಯಾರ್ಥಿಗಳ ಗುರುತಿನ ಕಾರ್ಡ್, ಪಡಿತರ ಚೀಟಿ, ಎಸ್ಸಿ, ಎಸ್ಟಿ, ಒಬಿಸಿ ಪ್ರಮಾಣ ಪತ್ರ, ಮಾಜಿ ಸೈನಿಕರ ಪಿಂಚಣಿ ಪುಸ್ತಕ, ವೃದ್ಧಾಪ್ಯ ವೇತನದ ಆದೇಶ ಪ್ರತಿ, ವಿಧವಾ ವೇತನದ ಆದೇಶ ಪ್ರತಿ, ಬಂದೂಕು ಪರವಾನಗಿ, ಅಂಗವಿಕಲರ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ ಕಾರ್ಡ್, ಎನ್‌ಆರ್‌ಇಜಿ (ಜಾಬ್ ಕಾರ್ಡ್), ಯಶಸ್ವಿನಿ ಕಾರ್ಡ್, ಆರೋಗ್ಯ ವಿಮಾ ಯೋಜನೆಯ ಸ್ಮಾರ್ಟ್ ಕಾರ್ಡ್ (ಮಾ.31ಕ್ಕೆ ಮೊದಲು ಪಡೆದಿರಬೇಕು). ಭಾವಚಿತ್ರವುಳ್ಳ ಸ್ಥಿರ ಆಸ್ತಿಯ ಪಟ್ಟಾ, ನೋಂದಣಿ ಕರಾರು ಪತ್ರ, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಕಾರ್ಡ್, ಮಾಜಿ ಸೈನಿಕರ ಸಿ ಎಸ್ ಡಿ.ಕ್ಯಾಂಟೀನ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಕಾರ್ಡ್, ಆಧಾರ್ ಕಾರ್ಡ್, ಎನ್‌ಪಿಆರ್ ಸ್ಮಾರ್ಟ್ ಕಾರ್ಡ್.
ಮೇಲ್ಕಂಡವುಗಳಲ್ಲಿ ಯಾವುದಾದರೊಂದು ಗುರುತಿನ ಕಾರ್ಡ್ ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದು ಚುನಾವಣಾ ಆಯೋಗವು ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

