ಅಗ್ನಿ ದುರಂತಕ್ಕೆ ಅಜಾಗರೂಕತೆ ಕಾರಣ: ರುದ್ರೇಶಗೌಡ
ಕ.ಪ್ರ. ವಾರ್ತೆ ಹಾಸನ ಏ.20
ಆಕಸ್ಮಿಕ ಅಗ್ನಿ ದುರಂತ ನಡೆಯಲು ತಿಳಿವಳಿಕೆ ಹಾಗೂ ಅಜಾಗರೂಕತೆಯೇ ಕಾರಣ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ರುದ್ರೇಶಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಅನಂತ ಸದ್ವಿದ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಆಯೋಜಿಸಲಾಗಿದ್ದ ಉಪನ್ಯಾಸ - ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಆಕಸ್ಮಿಕ ಬೆಂಕಿ ಅನಾಹುತ ಉಂಟಾದಲ್ಲಿ ಜನರು ಮುಂಜಾಗ್ರತೆಯಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಬೆಂಕಿ ಜ್ವಾಲೆಗಳು ವ್ಯಾಪಕವಾಗಿ ಹರಡಲು ಅಸ್ಪದ ನೀಡದೆ ಅಕ್ಕಪಕ್ಕದ ವಸ್ತುಗಳನ್ನು ಜಾಗದಿಂದ ತಕ್ಷಣ ಬೇರೆಡೆಗೆ ವರ್ಗಾಯಿಸುವುದು. ಬೆಂಕಿ ಶಾಖ ತಡೆಗಟ್ಟಲು ನೀರು ಮತ್ತು ಮರಳನ್ನು ಬಳಕೆ ಮಾಡಿಕೊಳ್ಳುವುದು, ಅಲ್ಲದೆ ಗಾಳಿಯಿಂದ ಬೆಂಕಿ ಹರಡುವುದನ್ನು ತಡೆಯಲು ಪೋಂ ಎಂಬ ದ್ರಾವಕ ಬಳಸಬಹುದಾಗಿದೆ ಎಂದು ವಿವರಿಸಿದರು. ಅಡುಗೆ ಅನಿಲ ಗಾಳಿಗಿಂತಲೂ ಭಾರವಾದ ಕಾರಣ ಸಿಲಿಂಡರ್ನಿಂದ ಸೋರಿಕೆಯಾದ ಅನಿಲ ನೀರಿನಂತೆ ನೆಲದ ಮೇಲೆ ಶೇಖರಣೆ ಆಗುತ್ತದೆ. ಇದಕ್ಕೆ ಯಾವುದೇ ಬಣ್ಣ ಮತ್ತು ವಾಸನೆ ಇಲ್ಲದ ಕಾರಣ ಅಫಘಾತ ಸಂಖ್ಯೆ ಹೆಚ್ಚಾಗುತ್ತದೆ ಎಂದು ಗಮನಿಸಿ ಒಂದು ರೀತಿಯ ಕೆಟ್ಟವಾಸನೆ ದ್ರಾವಣವನ್ನು ಇದಕ್ಕೆ ಸೇರಿಸಲಾಗಿದೆ. ಪ್ರತಿನಿತ್ಯ ಮಹಿಳೆಯರು ಮನೆಯಲ್ಲಿ ಅಡುಗೆ ಅನಿಲ ಸೋರಿಕೆ ಆಗದ ರೀತಿಯಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕಕಕ್ಕೆ ಒಳಗಾದ ವಸ್ತುಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಆಕಸ್ಮಿಕವಾಗಿ ಸೋರಿಕೆ ಕಂಡು ಬಂದಲ್ಲಿ ಜಾಗವನ್ನು ಗುರುತಿಸಿ ಗ್ಯಾಸ್ ಸಂಪರ್ಕ ನಿಲ್ಲಿಸಲು ಪ್ರಯತ್ನಿಸಬೇಕು. ಯಾವುದೇ ಕಾರಣಕ್ಕೂ ಮನೆಯ ವಿದ್ಯುತ್ ಸ್ವಿಚ್ಗಳನ್ನು ಮುಟ್ಟಬಾರದು ಮತ್ತು ಮೊಬೈಲ್ ಬಳಕೆ ಆ ಜಾಗದಲ್ಲಿ ಮಾಡಬಾರದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದ ಪಕ್ಷದಲ್ಲಿ ಸ್ಥಳೀಯ ಅಗ್ನಿಶಾಮಕ ಠಾಣೆಗೆ ಮತ್ತು ಅನಿಕ ಸಂಪರ್ಕ ಕೇಂದ್ರಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ ಸಹಾಯ ಪಡೆಯಬೇಕೆಂದರು.
ಅನೇಕ ಆಕಸ್ಮಿಕ ಅಗ್ನಿ ದುರಂತಗಳು ನಮ್ಮಲ್ಲಿನ ಅರಿವಿನ ಕೊರತೆ ಮತ್ತು ಅಜಾಗರೂಕತೆ ಪರಿಣಾಮ ಸಂಭವಿಸುತ್ತಿರುತ್ತವೆ. ಆದ್ದರಿಂದ ಶಾಲಾ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಉಂಟು ಮಾಡಲಾಗುತ್ತಿದೆ ಎಂದು ಹೇಳಿದರು. ಅಗ್ನಿಶಾಮಕ ಠಾಣಾ ಸಹಾಯಕ ಅಧಿಕಾರಿ ಕೆ.ಕೆ.ಮಂಜೇಗೌಡ ಮತ್ತು ಎಂ.ಬಸವಲಿಂಗಪ್ಪ ಹಾಜರಿದ್ದರು. ಕಾಲೇಜಿನ ಪ್ರಾಂಶುಪಾಲ ಕಾಳೇಗೌಡ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

