ಕಾಣೆಯಾಗಿದ್ದ ಯುವಕ ಶವವಾಗಿ ಹೇಮಾವತಿ ನದಿಯಲ್ಲಿ ಪತ್ತೆ
ಹಾಸನ: ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕನ ಶವ ಮಂಗಳವಾರ ಹೇಮಾವತಿ ಜಲಾಶಯದಲ್ಲಿ ಪತ್ತೆಯಾಗಿದೆ. ಹೊಳೆನರಸೀಪುರ ತಾಲೂಕಿನ ಬಾಗೀವಾಳುವಿನ ಮಂಜೇಗೌಡ ಎಂಬುವರ ಪುತ್ರ ಜಗದೀಶ್ ಮೃತಪಟ್ಟಿರುವ ದುರ್ದೈವಿ. ಜಗದೀಶ್ ಕಳೆದ ಶುಕ್ರವಾರ ಸ್ನೇಹಿತರೊಂದಿಗೆ ಗೊರೂರು ಜಲಾಶಯಕ್ಕೆ ತೆರಳಿದ್ದು, ಮತ್ತೆ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದರು. ಜಗದೀಶ್ ಮೃತ ದೇಹ ಮಂಗಳವಾರ ಹೇಮಾವತಿ ನದಿಯಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.
ರೈಲಿಗೆ ಸಿಕ್ಕು ಅಪರಿಚಿತ ಯುವತಿ ಸಾವು
ಮೈಸೂರು: ಹಾಸನ- ಬಾಗೇಶ್ಪುರ ರೈಲು ನಿಲ್ದಾಣಗಳ ನಡುವೆ 18 ವರ್ಷದ ಅಪರಿಚಿತ ಯುವತಿಯೊಬ್ಬಳು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.ಚಹರೆ- 5.3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ, ತಲೆಯಲ್ಲಿ 1 ಅಡಿ ಉದ್ದದ ಕಪ್ಪು ಕೂದಲು, ಬಲಗೈಯಲ್ಲಿ ಭಾಗ್ಯ ಎಂಬ ಕನ್ನಡ ಅಕ್ಷರದಲ್ಲಿ ಹಚ್ಚ ಗುರುತು ಇದೆ. ನೀಲಿ ಬಣ್ಣದ ಚುಡಿದಾರ್ ಟಾಪ್, ಆಕಾಶ ನೀಲಿ ಬಣ್ಣದ ಚುಡಿದಾರ್ ಪ್ಯಾಂಟ್, ಪಾಚಿ ಬಣ್ಣದ ವೇಲ್ ಧರಿಸಿದ್ದಾರೆ.
ಮೃತ ಯುವತಿಯ ದೇಹವನ್ನು ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
ಹುಚ್ಚು ನಾಯಿ ಕಡಿದು ಇಬ್ಬರಿಗೆ ಗಾಯ
ಬೇಲೂರು: ತಾಲೂಕಿನ ಹಾರೋಹಳ್ಳಿಯಲ್ಲಿ ಹುಚ್ಚು ನಾಯಿ ಕಡಿದು ಬಾಲಕಿ ಹಾಗೂ ಮಹಿಳೆಗೆ ಗಾಯವಾಗಿದೆ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಮ್ಮನನ್ನು ನೋಡಿಕೊಂಡು ಬರಲು ಹೋಗಿದ್ದ ಹಾರೋಹಳ್ಳಿ ಗ್ರಾಮದ ಬಾಲಕಿ ಚೈತ್ರಳನ್ನು ಆಸ್ಪತ್ರೆ ಹೊರ ಆವರಣದಲ್ಲಿ ಹುಚ್ಚು ನಾಯಿ ಕಡಿದಿದೆ. ಆಸ್ಪತ್ರೆಯ ಮುಂಭಾಗ ನಡೆದು ಬರುತ್ತಿದ್ದ ಸಂಶೆಟ್ಟಿ ಹಳ್ಳಿಯ ತಾರಾಮಣಿ ಅವರಿಗೂ ನಾಯಿ ಕಡಿದಿದೆ. ಆಸ್ಪತ್ರೆಯಲ್ಲಿ ಇವಬ್ಬರೂ ಚಿಕಿತ್ಸೆ ಪಡೆದಿದ್ದಾರೆ.
ಬಾಲಕ ನಾಪತ್ತೆ
ಹಾಸನ: ನಗರ ವಲ್ಲಭಾಯಿ ರಸ್ತೆಯ ಮಹೇಶ ಎಂಬುವರ ಪುತ್ರ ಅಮಿತ್(14) ಶಾಲೆಗೆ ಹೋಗುವುದಾಗಿ ಹೇಳಿ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ. ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶರ್ಟ್, ನಶೆ ಕಲರ್ ಸ್ವೆಟರ್, ಕೆಂಪು ಕಲರ್ ಜರ್ಕಿನ್ ಧರಿಸಿದ್ದ ಎಂದು ತಂದೆ ಮಹೇಶ ಪೆನ್ಶನ್ ಮೊಹಲ್ಲಾ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವಕ ನಾಪತ್ತೆ
ಹೊಳೆನರಸೀಪುರ: ಪಟ್ಟಣದ ಹಯಾತ್ನಗರದ ನೂರ್ ಅಹಮದ್ ಎಂಬುವರ ಪುತ್ರ ಇಮ್ರಾನ್ಪಾಷ (20) ಮನೆಯಿಂದ ಗುಜರಿ ಕೆಲಸಕ್ಕೆ ಹೋಗುತ್ತೇನೆಂದು ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ.ಚಹರೆ 5.6 ಅಡಿ ಎತ್ತರ, ಕನ್ನಡ ಮತ್ತು ಉರ್ದು ಮಾತನಾಡುತ್ತಾರೆ. ತಂದೆ ನೂರ್ ಅಹಮದ್ ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

