ಇಂದು ಮುಖ್ಯ ಶಿಕ್ಷಕರಿಗೆ ಕೌನ್ಸೆಲಿಂಗ್
ಹಾಸನ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬಡ್ತಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಜೇಷ್ಟತೆ ಅನುಸಾರ ಅರ್ಹರಿಗೆ ಪದವೀಧರೇತರ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಲಾಗುವುದು. ಈ ಸಂಬಂಧ ಕೌನ್ಸೆಲಿಂಗ್ನ್ನು ಆಗಸ್ಟ್ 8 ರಂದು ಬೆಳಗ್ಗೆ 11 ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆಸಲಾಗುವುದು. ಬಡ್ತಿಗೆ ಅರ್ಹರಿರುವ ಮುಖ್ಯ ಶಿಕ್ಷಕರ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು ಪ್ರಕಟಿಸಲಾಗಿರುವ ಶಿಕ್ಷಕರುಗಳು ತಪ್ಪದೇ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಇಳಿದ ಮಳೆ ಪ್ರಮಾಣ
ಹಾಸನ: ಹೇಮಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದರ ಹಿನ್ನೆಲೆಯಲ್ಲಿ ಬುಧವಾರ ಹೇಮಾವತಿ ಜಲಾಶಯಕ್ಕೆ 11,550 ಕ್ಯುಸೆಕ್ ನೀರು ಹರಿದು ಬಂದಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.60 ಅಡಿ ಇದ್ದು, ಜಲಾಶಯದಿಂದ 10,075 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 36.716 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.398ಅಡಿ, ಒಳ ಹರಿವು 475 ಕ್ಯುಸೆಕ್, ಹೊರ ಹರಿವು ನಾಲೆಗೆ 200, ನದಿಗೆ 200 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3164.04 ಅಡಿ, ಒಳ ಹರಿವು 310ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಟಿಎಂ.ಸಿಯಲ್ಲಿ 1.070 ಟಿ ಎಂ ಸಿ. ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ(ಮಿ.ಮೀ.ಗಳಲ್ಲಿ): ಆಲೂರು 20, ಅರಸೀಕೆರೆ 17.5, ಬೇಲೂರು 5.6, ಹಾಸನ 3.4, ಹೊಳೆನರಸೀಪುರ 15.5, ಸಕಲೇಶಪುರ 4, ಮಿ.ಮೀಟರ್ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ(ಮಿ.ಮೀ.ಗಳಲ್ಲಿ)
ಆಲೂರು 20, ಪಾಳ್ಯ 6, ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ 2, ರಾಮನಾಥಪುಯರ 2, ಬಸವಾಪಟ್ಟಣ 4.2, ದೊಡ್ಡಮಗ್ಗೆ 2.2., ದೊಡ್ಡಬೆಮ್ಮತ್ತಿ 3.2, ಅರಸೀಕೆರೆ ಕಸಬ 17.5, ಗಂಡಸಿ 2.8, ಬಾಣಾವರ 5.6, ಯಳವಾರೆ 3.2, ಬೇಲೂರು ಕಸಬ 5.6, ಹಗರೆ 3.8, ಅರೇಹಳ್ಳಿ 4.2,, ಬಿಕ್ಕೋಡು 15, ಗೆಂಡೆಹಳ್ಳಿ 6.4, ಹಾಸನ ಕಸಬ 3.4, ಕಟ್ಟಾಯ 7.8, ಶಾಂತಿಗ್ರಾಮ 4, ಸಾಲಗಾಮೆ 4.8, ದುದ್ದ 3.8, ಗೊರೂರು 2.5, ಸಕಲೇಶಪುರ ಕಸಬ 4, ಬಾಳ್ಳುಪೇಟೆ 5, ಯಸಳೂರು 3, ಮಾರನಹಳ್ಳಿ 18, ಬೆಳಗೋಡು 5.2, ಹಾನಬಾಳು 3, ಹೆತ್ತೂರು 12.6, ಶುಕ್ರವಾರ ಸಂತೆ 3, ಮಿ.ಮೀಟರ್ ಮಳೆಯಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಉದಯಪುರ 0.8, ಹಿರಿಸಾವೆ 6.4.,ಶ್ರವಣಬೆಳಗೊಳ 0.2 ಮಿಮೀ ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

